ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಪ್ರೋಮೋ ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮದ ದಿನಾಂಕವನ್ನು ಕೂಡಾ ಪ್ರಕಟಿಸಿದೆ. ಅಕ್ಟೋಬರ್ 13 ರಿಂದ ರಾತ್ರಿ 9 ಗಂಟೆಗೆ ಕಾರ್ಯಕ್ರಮ ನಿಮ್ಮ ಮುಂದೆ ಬರಲಿದೆ.
- " class="align-text-top noRightClick twitterSection" data="
">
ಈ ಬಾರಿ ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ ಇರದೆ ಕೇವಲ ಸೆಲಬ್ರಿಟಿಗಳು ಮಾತ್ರ ಕಾರ್ಯಕ್ರಮದಲ್ಲಿ ಸ್ಫರ್ಧಿಸುತ್ತಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಅದರಂತೆ ಹಲವರ ಹೆಸರು ಕೇಳಿಬಂದಿದೆ. ನಟಿಯರಾದ ಅಮೂಲ್ಯ, ಶರ್ಮಿಳಾ ಮಾಂಡ್ರೆ, ರಾಗಿಣಿ ದ್ವಿವೇದಿ, ಶ್ವೇತಾ ಪ್ರಸಾದ್, ಹಾಸ್ಯ ಕಲಾವಿದರಾದ ಕೆ.ಆರ್. ಪೇಟೆ ಶಿವರಾಜ್, ಕುರಿ ಪ್ರತಾಪ್, ಗಾಯಕ ಹನುಮಂತು, ಅಗ್ನಿ, ನೇಹಾ ಪಾಟೀಲ್ ಸೇರಿದಂತೆ ಹಲವರ ಹೆಸರು ಈ ಬಾರಿ ಕೇಳಿಬಂದಿದೆ. ಇನ್ನು ಈ ಬಾರಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ಸಾಮಾನ್ಯರಿಗೆ ಈ ಬಾರಿ ಅವಕಾಶ ನೀಡದಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಕೂಡಾ ವ್ಯಕ್ತವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಿನಿಮಾ, ಕಿರುತೆರೆ, ರಾಜಕೀಯ, ಕ್ರೀಡಾ ವಿಭಾಗಗಳ 15 ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.
![PC : colors kannada](https://etvbharatimages.akamaized.net/etvbharat/prod-images/kn-bng-biggboss-dateannounce-ka10018_30092019120208_3009f_1569825128_1018.jpg)