ಹಿಂದಿ ಬಿಗ್ಬಾಸ್ ಸೀಸನ್ 15 ರ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲಲು ವಿಫಲವಾದ ನಂತರ, ಸ್ಪರ್ಧಿಗಳಿಗೆ ಕ್ಯಾಪ್ಟನ್ ಆಯ್ಕೆ ಮಾಡಲು ಹೊಸ ಅವಕಾಶವೊಂದನ್ನು ನೀಡಲಾಯಿತು.
ಇದರಲ್ಲಿ ಸ್ಪರ್ಧಿಗಳೆಲ್ಲ ಒಮ್ಮತದಿಂದ ಇಬ್ಬರನ್ನು ಆಯ್ಕೆ ಮಾಡಬೇಕೆಂದು ಬಿಗ್ ಬಾಸ್ ನಿಯಮ ವಿಧಿಸಿದ್ದರು. ಆದರೆ, ಎಲ್ಲರೂ ಕ್ಯಾಪ್ಟನ್ ಆಗಲು ಉತ್ಸುಕತೆ ತೋರಿದ್ದರಿಂದ ಈ ಪ್ರಕ್ರಿಯೆಯೂ ವಿಫಲವಾಯಿತು. ಬಳಿಕ ಬಿಗ್ಬಾಸ್ ಮತ್ತೊಂದು ಟಾಸ್ಕ್ ನೀಡಿ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಮಾಡಿದರು.