ETV Bharat / sitara

Watch- ಬಿಗ್ ಬಾಸ್ 15 ಫಿನಾಲೆ: 'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಾಡಿಗೆ ಶಮಿತಾ-ರಾಕೇಶ್ ಹೆಜ್ಜೆ - 'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಾಡಿಗೆ ಶಮಿತಾ-ರಾಕೇಶ್ ಹೆಜ್ಜೆ

ಲವ್ ಬರ್ಡ್ಸ್ ಎಂದು ಕರೆಯಿಸಿಕೊಂಡಿರುವ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್​ ಬಿಗ್ ಬಾಸ್ ಸೀಸನ್ 15 ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ 'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಾಡಿಗೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

Bigg Boss 15 grand finale
ಬಿಗ್ ಬಾಸ್ 15 ಫಿನಾಲೆ
author img

By

Published : Jan 30, 2022, 4:39 PM IST

ಕೆಲವೇ ಗಂಟೆಗಳಲ್ಲಿ ಹಿಂದಿಯ ಬಿಗ್ ಬಾಸ್ ಸೀಸನ್ 15 ಗ್ರ್ಯಾಂಡ್ ಫಿನಾಲೆ ಸಂಚಿಕೆ ಮುಕ್ತಾಯವಾಗಲಿದೆ. ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿ ಶಮಿತಾ ಶೆಟ್ಟಿ 'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಿಂದಿ ಆವೃತ್ತಿಯ ಹಾಡಿಗೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಇದರ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಲವ್ ಬರ್ಡ್ಸ್ ಎಂದು ಕರೆಯಿಸಿಕೊಂಡಿರುವ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್​ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಮನವನ್ನು ಮತ್ತೊಮ್ಮೆ ಕದ್ದಿದ್ದಾರೆ. ಬಿಗ್ ಬಾಸ್ ಒಟಿಟಿಯಲ್ಲಿ ರಾಕೇಶ್ ಮತ್ತು ಶಮಿತಾ ಹತ್ತಿರವಾದರು. ಬಿಗ್ ಬಾಸ್-15ಕ್ಕೆ ಶಮಿತಾ ಮಾತ್ರ ಟಿಕೆಟ್ ಪಡೆದಿದ್ದರು. ಇದೀಗ ಅವರು ಫಿನಾಲೆವರೆಗೂ ಬಂದಿದ್ದಾರೆ.

ಇದನ್ನೂ ಓದಿ: ಶಮಿತಾ ಶೆಟ್ಟಿ 'ಬಿಗ್ ಬಾಸ್ 15' ಟ್ರೋಫಿಗೆ ತುಂಬಾ ಹತ್ತಿರವಾಗಿದ್ದಾರೆ: ಆಕಾಂಕ್ಷಾ ಪುರಿ

ವೈಲ್ಡ್ ಕಾರ್ಡ್ ಮೂಲಕ ಬಿಗ್​ಬಾಸ್​ ಮನೆಯೊಳಗೆ ಬಂದಿದ್ದ ರಾಕೇಶ್​ ಅನಾರೋಗ್ಯದಿಂದಾಗಿ ಕೆಲವೇ ದಿನಗಳಲ್ಲಿ ಹೊರನಡೆದಿದ್ದರು. ಆದರೆ ಹೊರಗೆ ಇದ್ದುಕೊಂಡೇ ಲೇಡಿಲವ್‌ಗೆ ರಾಕೇಶ್​ ಬೆಂಬಲ ನೀಡುತ್ತಾ ಬಂದಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಪ್ರತೀಕ್ ಸೆಹಜ್‌ಪಾಲ್ ಮತ್ತು ಶಮಿತಾ ಶೆಟ್ಟಿ ಫಿನಾಲೆ ತಲುಪಿದ್ದು, ಇಂದು ರಾತ್ರಿ ವಿಜೇತರು ಯಾರೆಂಬುದು ತಿಳಿದು ಬರಲಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.