ಕೊರೊನಾ ಮಧ್ಯೆಯೂ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-8 ಸುದೀರ್ಘ ಪ್ರಯಾಣ ಮುಗಿದಿದೆ. ಮಂಜು ಪಾವಗಡ, ಬಿಗ್‌ಬಾಸ್ 8ರ ಸೀಸನ್ ವಿನ್ನರ್ ಆಗಿ ಕರ್ನಾಟಕದ ಜನತೆಯ ಪ್ರೀತಿ ಸಂಪಾದಿಸಿದ್ದಾರೆ.
ಪಾವಗಡ ಎಂಬ ಹಳ್ಳಿಯಿಂದ ಬಂದು, ಮಂಜು ಕಾಮಿಡಿ ಶೋನಲ್ಲಿ ಕಾಮಿಡಿ ಮಾಡ್ತಾ ಗಮನ ಸೆಳೆದ ಪ್ರತಿಭೆ. ಮಂಜು ಪಾವಗಡ, ಶಿವರಾಜ್ ಕುಮಾರ್ ಅಭಿಮಾನಿ. ಹ್ಯಾಟ್ರಿಕ್ ಹೀರೊ ಸಿನಿಮಾಗಳು ಅಂದರೆ ಇಷ್ಟ ಆಗುವ ಮಂಜು ಪಾವಗಡಗೆ, ಫಿನಾಲೆ ಹಂತದಲ್ಲಿರುವಾಗ, ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಬಾ ಎಂದು ಶಿವರಾಜ್ ಕುಮಾರ್ ಶುಭ ಹಾರೈಸಿದ್ದರು.

ಇದು ಮಂಜು ಪಾವಗಡ ಜೀವನದಲ್ಲಿ ಎಂದೂ ಮರೆಯೋದಿಕ್ಕೆ ಆಗದ ಕ್ಷಣವಾಗಿತ್ತು. ಈಗ ಬಿಗ್‌ಬಾಸ್ ವಿನ್ನರ್ ಆದ್ಮೇಲೆ, ಮಂಜು ಪಾವಗಡ, ಶಿವರಾಜ್‌ಕುಮಾರ್ ಮನೆಗೆ ಭೇಟಿ ನೀಡಿ, ಸೆಂಚುರಿ ಸ್ಟಾರ್ ಆಶೀರ್ವಾದ ಪಡೆದಿದ್ದಾರೆ. ತಾವು ಗೆದ್ದಿರುವ ಬಿಗ್ ಬಾಸ್ ಟ್ರೋಫಿಯನ್ನ ಶಿವರಾಜ್ ಕುಮಾರ್ಗೆ ತೋರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವರಾಜ್ ಕುಮಾರ್ಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ಬಿಗ್‌ಬಾಸ್ ವಿಜೇತರಾದ ಮಂಜು ಪಾವಗಡ, ಈ ಬಾರಿಯ ಬಿಗ್‌ಬಾಸ್ ಶೋನಿಂದ 53 ಲಕ್ಷ ರೂಪಾಯಿ ನಗದು ಹಾಗೂ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.