ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಕನ್ನಡ ಭಾಷೆಗೆ ಡಬ್ ಆಗಿದ್ದು ಇದೇ ನವೆಂಬರ್ 15 ರಂದು ಕಿರುತೆರೆಯಲ್ಲಿ ಪ್ರಸಾರ ಕಾಣಲಿದೆ. ಶತಮಾನದ ಸಿನಿಮಾ ಎಂದೇ ಹೆಸರು ಗಳಿಸಿರುವ ಈ ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
- " class="align-text-top noRightClick twitterSection" data="
">
'ಬಾಹುಬಲಿ' ಮೊದಲ ಅಧ್ಯಾಯ 2015 ರಲ್ಲಿ ತೆರೆ ಕಂಡಿದ್ದು ಜನರು ಮೆಚ್ಚಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ನಲ್ಲೂ ಹೊಸ ದಾಖಲೆ ಬರೆದಿತ್ತು. 2017 ರಲ್ಲಿ ಬಿಡುಗಡೆಯಾದ ಭಾಗ 2 ಕೂಡಾ ಸಿನಿಪ್ರಿಯರ ಮನಸ್ಸು ಗೆದ್ದಿತ್ತು. ಡಬ್ಬಿಂಗ್ಪ್ರಿಯರು 'ಬಾಹುಬಲಿ', ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಬೇಕು ಎಂದು ಸಾಕಷ್ಟು ಮನವಿ ಮಾಡಿದ್ದರೂ ಅವರ ಆಸೆ ಈಡೇರಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಸಿನಿಮಾ ಬಿಡುಗಡೆಯಾಗಿ 5 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಸಿನಿಪ್ರಿಯರಿಗೆ ಅದರಲ್ಲೂ ಪ್ರಭಾಸ್, ಅನುಷ್ಕಾ ಅಭಿಮಾನಿಗಳಿಗೆ ಈ ವಿಚಾರ ಖುಷಿ ತಂದಿದ್ದು ತಮ್ಮ ಮೆಚ್ಚಿನ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.