'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಅನುಪಮಾ ಗೌಡ 'ಚಿ.ಸೌ. ಸಾವಿತ್ರಿ' ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ನಂತರ 'ಅಣ್ಣತಂಗಿ' ಧಾರಾವಾಹಿಯಲ್ಲಿ ನಟಿಸಿದ ಅನುಪಮಾ ಗೌಡ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ 'ಅಕ್ಕ' ಧಾರಾವಾಹಿ.

'ಅಕ್ಕ' ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ದೇವಿಕಾ ಎಂಬ ಅವಳಿ ಪಾತ್ರದಲ್ಲಿ ಅನುಪಮಾ ಗೌಡ ಕಾಣಿಸಿಕೊಂಡಿದ್ದರು. ಈಕೆ ವೀಕ್ಷಕರಿಗೆ ಹತ್ತಿರವಾದದ್ದು ಬಿಗ್ಬಾಸ್ಗೆ ಹೋಗಿ ಬಂದ ನಂತರವೇ. ಬೆಳ್ಳಿತೆರೆಗೂ ಕಾಲಿಟ್ಟಿರುವ ಅನುಪಮಾ ನಿರೂಪಕಿಯಾಗಿ ಕೂಡಾ ಗುರುತಿಸಿಕೊಂಡಿರುವುದು ನಮಗೆಲ್ಲಾ ತಿಳಿದ ವಿಚಾರ. ಆದರೆ ಅನುಪಮಾ ಗೌಡ ಅವರಿಗೆ ಒಬ್ಬ ತಂಗಿ ಇರುವ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ವಿಶೇಷ ಎಂದರೆ ಅನುಪಮಾ ಗೌಡ ತಂಗಿ ತೇಜಸ್ವಿನಿ ಕೂಡಾ ಅಕ್ಕನಂತೆ ಬಣ್ಣದ ಹಾದಿ ಹಿಡಿದಿದ್ದಾರೆ.

ತೇಜಸ್ವಿನಿ ಬಣ್ಣದ ಲೋಕಕ್ಕೆ ಮುನ್ನುಡಿ ಬರೆಯುವ ಸಲುವಾಗಿ ಅಕ್ಕನಂತೆ ಕಿರುತೆರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಯಕಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆ ಪ್ರಯಾಣ ಆರಂಭಿಸಿರುವ ತೇಜಸ್ವಿನಿ ಟಿಕ್ಟಾಕ್ ಸ್ಟಾರ್ ಕೂಡಾ ಹೌದು. ಅಲ್ಲದೆ ಅಕ್ಕನಂತೆಯೇ ಆಗಾಗ ಫೋಟೋಶೂಟ್ ಕೂಡಾ ಮಾಡಿಸುತ್ತಾರೆ. ತೇಜಸ್ವಿನಿ ಅಕ್ಕನ ಹಾಗೆ ಹೆಸರು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.
