ETV Bharat / sitara

ಲಾಕ್​​ ಡೌನ್​​​ ಹಾಗೂ ಬಿಗ್​​ ಬಾಸ್ ಮನೆ ಎರಡೂ ಭಿನ್ನ....ಅನುಪಮಾ ಗೌಡ - Anupama gowda lock down days

ಲಾಕ್​ ಡೌನ್​​​ನಿಂದ ಮನೆಯಲ್ಲೇ ಎಂಜಾಯ್ ಮಾಡುತ್ತಿರುವ ಅನುಪಮಾ ಗೌಡ ಲಾಕ್​ ಡೌನ್​​​​ನಲ್ಲಿ ಸ್ನೇಹಿತರೊಂದಿಗೆ ಮಾತನಾಡಬಹುದು, ಟಿವಿ ನೋಡಬಹುದು. ಆದರೆ ಬಿಗ್​ಬಾಸ್​​​​ನಲ್ಲಿ ಯಾವುದಕ್ಕೂ ಅವಕಾಶ ಇರುವುದಿಲ್ಲ. ಎರಡೂ ಬಹಳ ಭಿನ್ನ ಎನ್ನುತ್ತಾರೆ.

Anupama Gowda Lock down Diary
ಅನುಪಮಾ ಗೌಡ
author img

By

Published : Jul 10, 2020, 8:29 PM IST

'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ನಟನಾ ಲೋಕಕ್ಕೆ ಬಂದ ಅನುಪಮಾ ಗೌಡ ಅವರನ್ನು ಜನರು ಗುರುತಿಸಿದ್ದು'ಅಕ್ಕ' ಧಾರಾವಾಹಿ ಮೂಲಕ. ಆ ಧಾರಾವಾಹಿಯಲ್ಲಿ ಅನುಪಮಾ ಭೂಮಿಕಾ, ದೇವಿಕಾ ಎಂಬ ದ್ವಿಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು.

Anupama Gowda Lock down Diary
ಅನುಪಮಾ ಗೌಡ ಲಾಕ್​​ ಡೌನ್​ ದಿನಗಳು

ಬಿಗ್​​ಬಾಸ್​ ಹೋಗಿ ಬಂದ ನಂತರ ಅನುಪಮಾ ಗೌಡ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇದಾದ ನಂತರ ಅವರ ಲಕ್ ಬದಲಾಯ್ತು. ಅನುಪಮಾ ಈಗ ಬೆಳ್ಳಿತೆರೆಯಲ್ಲಿ ಕೂಡಾ ಸಖತ್ ಬ್ಯುಸಿ ಇದ್ದಾರೆ. ಇನ್ನು ಅನುಪಮಾ ಲಾಕ್​ ಡೌನ್​ ಡೈರಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Anupama Gowda Lock down Diary
ಅಕ್ಕ ಖ್ಯಾತಿಯ ಅನುಪಮಾ ಗೌಡ

ಅಡುಗೆ ಮನೆಯಿಂದ ದೂರವೇ ಉಳಿದಿದ್ದ ಅನುಪಮಾ ಈಗ ಅಡುಗೆ ಮಾಡಲು ಕಲಿತಿದ್ದಾರಂತೆ. ಒಳಾಂಗಣ ವಿನ್ಯಾಸಕ್ಕೆ ಕೂಡಾ ಆದ್ಯತೆ ನೀಡಿರುವ ಅನುಪಮಾ ಗೌಡ ಈಗ ಕಣ್ತುಂಬ ನಿದ್ರೆ ಕೂಡಾ ಮಾಡುತ್ತಿದ್ದಾರಂತೆ. ಬಿಗ್​​ಬಾಸ್​​​​​ಗೂ ಲಾಕ್​​ ಡೌನ್​​ಗೂ ಬಹಳ ವ್ಯತ್ಯಾಸವಿದೆ. ದೊಡ್ಮನೆಯಲ್ಲಿ 15 ಜನ ಸ್ಪರ್ಧಿಗಳ ಜೊತೆ ಲಾಕ್ ಆಗಿರುತ್ತೇವೆ. ಅವರಿಗೆಲ್ಲಾ ಹೊಂದಿಕೊಂಡು ಹೋಗಬೇಕು, ಅವರ ಬಗ್ಗೆ ತಿಳಿಯಬೇಕು.

Anupama Gowda Lock down Diary
ಮಾಜಿ ಬಿಗ್​​​ಬಾಸ್ ಸ್ಪರ್ಧಿ ಅನುಪಮಾ

ಆದರೆ ಲಾಕ್ ಡೌನ್ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲೇ ಇರುತ್ತೀರಿ‌, ಇಲ್ಲಿ ಬೇಕಾದ ಹಾಗೆ ಎಂಜಾಯ್ ಮಾಡಬಹುದು. ಸಿನಿಮಾ, ಧಾರಾವಾಹಿ ನೋಡುತ್ತಾ ಕಾಲ ಕಳೆಯಬಹುದು. ಆದರೆ ಬಿಗ್ ಬಾಸ್ ಮನೆಯಲ್ಲಿ ಅಂಥ ಸೌಕರ್ಯ ಇರುವುದಿಲ್ಲ. ಹಾಗೆ ನೋಡಿದರೆ ಲಾಕ್ ಡೌನ್​​​​​ಗಿಂತ ಬಿಗ್ ಬಾಸ್ ಮನೆಯೇ ಉಸಿರು ಕಟ್ಟಿಸುತ್ತದೆ. ಲಾಕ್ ಡೌನ್​​​ನಲ್ಲಿ ಫ್ರೆಂಡ್ಸ್ , ಫ್ಯಾಮಿಲಿ ಜೊತೆಗಾದರೂ ಮಾತನಾಡಬಹುದು ಎಂದಿದ್ದಾರೆ.

Anupama Gowda Lock down Diary
ಬೆಳ್ಳಿ ತೆರೆಯಲ್ಲೂ ಮಿಂಚುತ್ತಿರುವ ನಟಿ

ಸಿನಿಮಾಗಳಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ನಿರೂಪಣೆಯಿಂದ ದೂರ ಉಳಿದಿರುವ ಅನುಪಮಾ, ನಟನೆಗೆ ಹೆಚ್ಚು ಅವಕಾಶ ಇರುವಂತ ಸ್ಕ್ರಿಪ್ಟ್​​​​ಗಳ ಆಯ್ಕೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಕೊರೊನಾ ಕಾರಣದಿಂದ ಚಿತ್ರರಂಗದಲ್ಲಿ ಮಿಂಚಬೇಕು ಎಂದುಕೊಂಡಿದ್ದ ಅನುಪಮಾ ಅವರಿಗೆ ಸ್ವಲ್ಪ ನಿರಾಶೆ ಆದಂತಿದೆ. ಅವಕಾಶ ದೊರೆತರೆ ಸಿನಿಮಾಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎನ್ನುತ್ತಾರೆ ಅನುಪಮಾ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.