ಕಿರುತೆರೆಯಲ್ಲಿ ಮತ್ತೆ ಪೌರಾಣಿಕ ಧಾರಾವಾಹಿಗಳ ಅಬ್ಬರ ಆರಂಭವಾಗಿವೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ 'ಪರಮಾವತಾರಿ ಶ್ರೀಕೃಷ್ಣ' ಎಂಬ ಧಾರಾವಾಹಿ ಆರಂಭವಾಗುತ್ತಿದೆ. ಈ ಧಾರಾವಾಹಿ ಶ್ರೀ ಕೃಷ್ಣನ ಲೀಲೆಗಳನ್ನು ಕನ್ನಡ ಕಿರುತೆರೆ ವೀಕ್ಷಕರಿಗೆ ಉಣಬಡಿಸಲಿದೆ.
- " class="align-text-top noRightClick twitterSection" data="
">
ಜೂನ್ 22 ರಿಂದ ಸಂಜೆ 6-7ರವರೆಗೆ ಸೋಮವಾರದಿಂದ ಶನಿವಾರದವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯ ಬ್ಯುಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿ 'ಕನ್ನಡ ವೀಕ್ಷಕರು ಪೌರಾಣಿಕ ಧಾರಾವಾಹಿಗಳನ್ನು ಬಹಳ ಇಷ್ಟಪಟ್ಟು ವೀಕ್ಷಿಸುತ್ತಾರೆ. ಜೀ ಕನ್ನಡ ವಾಹಿನಿಯು ವೀಕ್ಷಕರ ಅಭಿರುಚಿಯನ್ನು ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಈ ಸಾಲಿಗೆ 'ಪರಮಾವತಾರಿ ಶ್ರೀಕೃಷ್ಣ' ಕೂಡಾ ಸೇರ್ಪಡೆಯಾಗಿದೆ.
ಶ್ರೀಕೃಷ್ಣನ ಬಾಲ್ಯ, ಕೌಮಾರ್ಯ, ಯೌವನ ಹಾಗೂ ಕುರುಕ್ಷೇತ್ರದಲ್ಲಿ ಹೋರಾಟ, ಸೋದರ ಪ್ರೇಮ, ರಾಧೆಯ ಪ್ರೀತಿ ಎಲ್ಲವೂ ಈ ಧಾರಾವಾಹಿಯಲ್ಲಿ ಇರಲಿದೆ. ಈ ಮೂಲಕ ಜೀ ಕನ್ನಡ ವಾಹಿನಿಯು ವೀಕ್ಷಕರನ್ನು ಮನರಂಜನೆಯ ತುತ್ತ ತುದಿಗೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ' ಎಂದು ರಾಘವೇಂದ್ರ ಹುಣಸೂರು ಹೇಳುತ್ತಾರೆ.
ಇದೂ ಕೂಡಾ ಡಬ್ಬಿಂಗ್ ಧಾರಾವಾಹಿಯಾಗಿದ್ದು ಜೀ ಹಿಂದಿ ವಾಹಿನಿಯಲ್ಲಿ 2017 ರಲ್ಲಿ ಆರಂಭವಾಗಿ ಮೂರು ವರ್ಷಗಳ ಕಾಲ ಪ್ರಸಾರ ಕಂಡಿತ್ತು. ಇದೀಗ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ.