ETV Bharat / sitara

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ನಟ ಅನಿರುದ್ಧ್ - ಜೊತೆಜೊತೆಯಲಿ ಖ್ಯಾತಿಯ ಅನಿರುದ್ಧ್

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಟ ಅನಿರುದ್ಧ್​ ಧೈರ್ಯ ಹೇಳಿದ್ದಾರೆ. ಇಂದು ಪಿಯುಸಿ ಫಲಿತಾಂಶ ಬಂದಿದ್ದು ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳು ಹಾಗೂ ಫೇಲ್ ಅದ ವಿದ್ಯಾರ್ಥಿಗಳು ಧೈರ್ಯ ಕೆಡಬೇಡಿ ಎಂದು ಧೈರ್ಯ ಹೇಳಿದ್ದಾರೆ.

Anirush courage words to PUC Students
ಅನಿರುದ್ಧ್
author img

By

Published : Jul 14, 2020, 1:05 PM IST

ಇಂದು ದ್ವಿತೀಯ ವಿದ್ಯಾರ್ಥಿಗಳ ಪಾಲಿಗೆ ಬಹಳ ಮಹತ್ತರವಾದ ದಿನ. ಇಂದು ಪಿಯುಸಿ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಕಾತರದಿಂದ ತಮ್ಮ ಫಲಿತಾಂಶ ತಿಳಿಯಲು ಕಾಯುತ್ತಿದ್ದಾರೆ. ಮತ್ತೆ ಕೆಲವು ವಿಧ್ಯಾರ್ಥಿಗಳು ಫಲಿತಾಂಶ ಏನಾಗುವುದೋ ಎಂಬ ಭಯದಲ್ಲಿದ್ದಾರೆ.

ಜೀವನವೆಂಬ ದೊಡ್ಡ ಪರೀಕ್ಷೆಯಲ್ಲಿ ಇದೊಂದು ಸಣ್ಣ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಗೆ ಕಿರುತೆರೆ ನಟ ಅನಿರುದ್ಧ್ ಶುಭ ಹಾರೈಸಿದ್ದಾರೆ. ನೀವು ಅಂದುಕೊಂಡ ರೀತಿಯಲ್ಲಿ ನಿಮ್ಮ ರಿಸಲ್ಟ್ ಬಂದಿಲ್ಲ ಅಂದರೆ ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಜೀವನದ ಹಾದಿಯಲ್ಲಿ ಇದೊಂದು ಮೆಟ್ಟಿಲಷ್ಟೇ. ಇದೇ ಜೀವನ ಅಲ್ಲ, ಬದುಕಿನಲ್ಲಿ ಜ್ಞಾನ ಮುಖ್ಯ, ಅಂಕಗಳಲ್ಲ ಅಥವಾ ಮಾರ್ಕ್ಸ್​​​​​​ಕಾರ್ಡ್​ ಅಲ್ಲ. ಸಾಧನೆಗೆ ನಾನಾ ದಾರಿಗಳಿವೆ, ಎಲ್ಲಕ್ಕಿಂತ ಬದುಕುವ ರೀತಿ ಬಹಳ ಮುಖ್ಯ. ಯಾರ ಮಾತಿಗೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಸಮಯ ಕಳೆದು ಹೋಗಲಿ, ನಿಧಾನವಾಗಿ ಕೂತು ಮುಂದೇನು‌ ಮಾಡಬಹುದು ಎಂದು ನಿರ್ಧರಿಸಬಹುದು.

ಹಾಗೆಯೇ ಪೋಷಕರು ಕೂಡಾ ದಯವಿಟ್ಟು ಯಾರೂ ಹೆಚ್ಚು ಅಂಕ ಬಂದಿಲ್ಲವೆಂದು ತಮ್ಮ ಮಕ್ಕಳನ್ನು ಬೈಯುವುದಾಗಲೀ ಅವರ ಮನಸ್ಸಿಗೆ ನೋವು ಮಾಡುವುದಾಗಲೀ ಮಾಡಬೇಡಿ. ಮತ್ತೊಬ್ಬರ ಮಕ್ಕಳ ಜೊತೆ ಹೋಲಿಕೆ ಮಾಡಿ ಮಾತನಾಡಬೇಡಿ. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಸ್ನೇಹಿತರಂತೆ ಜೊತೆಯಾಗಿ ನಿಂತು ಮುಂದಿನ ಜೀವನ ರೂಪಿಸಲು ಸಹಾಯ ಮಾಡಿ.

ಕಡಿಮೆ ಅಂಕ ಬಂತು ಎಂದು ಬೇಸರ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನನ್ನ ಜೊತೆ ಮಾತನಾಡಿ ಸಮಾಧಾನ ಎನಿಸಿದರೆ ದಯವಿಟ್ಟು‌ ಇನ್​​ಬಾಕ್ಸ್​​​ನಲ್ಲಿ 'ನಾನು ಪಿಯು ವಿದ್ಯಾರ್ಥಿ' ಎಂದು ಸಂದೇಶ ಕಳಿಸಿ, ನಾನು ಪ್ರತಿಕ್ರಿಯೆ ನೀಡುತ್ತೇನೆ. ನಿಮ್ಮೆಲ್ಲರ ಮುಂದಿನ ಜೀವನಕ್ಕೆ ಶುಭವಾಗಲಿ, ಧನ್ಯವಾದಗಳು ಎಂದು ಅನಿರುದ್ಧ್​ ಶುಭ ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.