ETV Bharat / sitara

ಮನೆಯಲ್ಲೇ ಮಾಸ್ಕ್​ ಹೊಲಿದ ಕುಲವಧು ಖ್ಯಾತಿಯ ವಚನಾ - Kulavadhu fame Amruta Ramamurhty using home made mask

ವೈರಸ್​​​​​ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಆದರೆ ಮೆಡಿಕಲ್ ಮಾಸ್ಕ್​​​​​ಗಳನ್ನು ಬಿಟ್ಟು ಮನೆಯಲ್ಲೇ ಸುಲಭವಾಗಿ ಮಾಸ್ಕ್ ಹೊಲಿಯಿರಿ ಎಂದು ಕುಲವಧು ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ರಾಮಮೂರ್ತಿ ಜನರಿಗೆ ಮನವಿ ಮಾಡಿದ್ದಾರೆ.

Amruta rammurhty
ಅಮೃತಾ ರಾಮಮೂರ್ತಿ
author img

By

Published : Apr 9, 2020, 5:26 PM IST

ಹೋಮ್​ ಕ್ವಾರಂಟೈನ್​​​ನಿಂದಾಗಿ ಎಲ್ಲರೂ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ಲಾಕ್​​​​ಡೌನ್​​​​​ನಿಂದಾಗಿ ಮನೆಯಿಂದ ಹೊರಗೆ ಕಾಲಿಡದಂತಹ ಸ್ಥಿತಿ. ಇನ್ನು ಪ್ರತಿದಿನ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕಲಾವಿದರು ಇದೀಗ ಶೂಟಿಂಗ್ ಇಲ್ಲದ ಕಾರಣ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

Amruta Rammurthy
ಅಮೃತಾ ಹೊಲಿದಿರುವ ಮಾಸ್ಕ್​​​

'ಕುಲವಧು' ಧಾರಾವಾಹಿಯ ವಚನಾ ಆಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿರುವ ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ ಲಾಕ್​​​ಡೌನ್​​​​​​​ ಸಮಯದಲ್ಲಿ ಜನರಿಗೆ ಬಹು ಉಪಯುಕ್ತವಾದ ಮಾಹಿತಿ ನೀಡಿದ್ದಾರೆ‌. 'ಕೊರೊನಾ ವೈರಸ್ ಸೋಂಕದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳುವ ಸಲುವಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಧರಿಸದೇ ಓಡಾಡುವುದು ಅಕ್ಷಮ್ಯ ಅಪರಾಧ' ಎಂದು ಅಮೃತಾ ಜನರಿಗೆ ತಿಳಿಹೇಳಿದ್ದಾರೆ.

ಶೂಟಿಂಗ್ ಇಲ್ಲದೆ ಮನೆಯಲ್ಲಿ ಪತಿ ರಘು ಅವರೊಡನೆ ಕಾಲ ಕಳೆಯುತ್ತಿರುವ ಅಮೃತಾ ರಾಮಮೂರ್ತಿ ತಾವೇ ಕೈಯ್ಯಾರ ಮಾಸ್ಕ್ ಹೊಲಿದಿದ್ದಾರೆ. ಮಾತ್ರವಲ್ಲ ನಿಮಗೆ ಬೇಸಿಕ್ ಹೊಲಿಗೆ ತಿಳಿದಿದ್ದರೆ ಮನೆಯಲ್ಲೇ ಸುಲಭವಾಗಿ ಮಾಸ್ಕ್​ ಹೊಲಿಯಬಹುದು. ಮನೆಯಲ್ಲೇ ತಯಾರಿಸಿದ ಮಾಸ್ಕ್​​ ಧರಿಸಿದರೆ ಇನ್ನೂ ಒಳ್ಳೆಯದು. ಎಂದು ಮಾಸ್ಕ್​ ಧರಿಸಿ ಪತಿಯೊಂದಿಗೆ ಇರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್​ ಮಾಡಿದ್ಧಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.