ನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಅಕುಲ್ ಬಾಲಾಜಿ, ನಿರೂಪಕನಾಗಿ ಎಲ್ಲರ ಗಮನ ಸೆಳೆದವರು. ಇದೀಗ ಸಾವಯವ ಬೆಳೆ ಬೆಳೆಯುವ ಮೂಲಕ ರೈತ ಎನಿಸಿಕೊಂಡಿದ್ದಾರೆ. ತಮ್ಮ ಮನೆಯ ಗಾರ್ಡನ್ನಲ್ಲಿ ಸಾವಯವ ಬಾಳೆಹಣ್ಣನ್ನು ಬೆಳೆದಿದ್ದಾರೆ.
- " class="align-text-top noRightClick twitterSection" data="
">
'ನನಗೆ ತುಂಬಾ ಇಷ್ಟವಾದದ್ದು ಬಾಳೆಹಣ್ಣು. ಇದರಲ್ಲಿ ಕಬ್ಬಿಣಾಂಶ ಹಾಗೂ ಇತರ ಸತ್ವಯುತ ಅಂಶಗಳಿವೆ. ಹೀಗಾಗಿ ನೀವೂ ಕೂಡಾ ನಿಮ್ಮ ಕೈತೋಟದಲ್ಲಿ ಸಾವಯವ ಬಾಳೆ ಬೆಳೆಯಿರಿ...ಈ ಮೂಲಕ ರೈತನಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ' ಎಂದು ಅಕುಲ್ ಹೇಳಿದ್ದಾರೆ. ಅಲ್ಲದೆ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.
ಅಕುಲ್ ತಮ್ಮ ತಾಯಿಯ ಸಲಹೆಯಂತೆ ಬಾಳೆಹಣ್ಣನ್ನು ಬೆಳೆದಿದ್ದಾರೆ. ಸದ್ಯಕ್ಕೆ ಅಕುಲ್ ಬಾಲಾಜಿ, ಕಿರುತೆರೆಯ ಖ್ಯಾತ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.