'ಅಗ್ನಿಸಾಕ್ಷಿ' ಧಾರಾವಾಹಿಯ ಅಣ್ಣ ಅಖಿಲ್ ಹಾಗೂ ತಂಗಿ ಅಂಜಲಿ ಈಗ ಮತ್ತೆ ಒಂದಾಗಿದ್ದಾರೆ. ಅಗ್ನಿಸಾಕ್ಷಿ ಮುಕ್ತಾಯಗೊಂಡು ಒಂದು ವರ್ಷದ ನಂತರ ಈ ಅಣ್ಣ ತಂಗಿ ಮತ್ತೊಮ್ಮೆ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಜೊತೆಯಾಗಿ ಶೋವೊಂದರಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಟೈಲಿಶ್ ಡಾನ್ ಆಯಿಲ್ ಕುಮಾರ್ ಆಗಿ ಬದಲಾದ ಪ್ರಶಾಂತ್ ಸಂಬರಗಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಾಟ್ ಕಾರ್ನರ್ ಎಂಬ ಶೋ ಇತ್ತೀಚೆಗಷ್ಟೇ ಆರಂಭವಾಗಿದ್ದು, ಅದರಲ್ಲಿ ಸೆಲಬ್ರಿಟಿಗಳು ಬಂದು ತಮ್ಮ ಜೀವನದ ಆಸಕ್ತಿಕರ ವಿಚಾರಗಳನ್ನು ಮಾತನಾಡುತ್ತಾರೆ. ಈ ಕಾರ್ಯಕ್ರಮ ವೀಕ್ಷಕರಿಗೂ ಮನರಂಜನೆ ನೀಡುತ್ತದೆ. ಈಗ ರಾಜೇಶ್ ಧ್ರುವ ಹಾಗೂ ಸುಕೃತಾ ನಾಗ್ ಇಬ್ಬರೂ ಒಟ್ಟಿಗೆ ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಂದು ಗೌಡ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ರಾಜೇಶ್ ಹಾಗೂ ಸುಕೃತಾ ಬಹಳ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮತ್ತೊಮ್ಮೆ ಈ ಅಣ್ಣ ತಂಗಿಯನ್ನು ಕಿರುಪರದೆ ಮೇಲೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.ಇಂದು ಈ ಸಂಚಿಕೆ ಪ್ರಸಾರವಾಗಲಿದೆ.