ETV Bharat / sitara

ನನ್ನ ವೃತ್ತಿಬದುಕಿನಲ್ಲಿ ಕಿರುತೆರೆಗೆ ಮಹತ್ವದ ಸ್ಥಾನ ಇದೆ...ಅದಿತಿ ಪ್ರಭುದೇವ - Small screen actress Aditi

ಕಿರುತೆರೆ ಮೂಲಕ ವೃತ್ತಿ ಬದುಕು ಆರಂಭಿಸಿ ಈಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ಅದಿತಿ ಪ್ರಭುದೇ ತಮ್ಮ ಕಿರುತೆರೆ ಯಾನವನ್ನು ನೆನಪಿಸಿಕೊಂಡಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ಕಿರುತೆರೆಗೆ ಮಹತ್ವದ ಸ್ಥಾನ ಇದೆ ಎನ್ನುತ್ತಾರೆ ಅದಿತಿ ಪ್ರಭುದೇವ.

Aditi prabhudeva remains her serial days
ಅದಿತಿ ಪ್ರಭುದೇವ
author img

By

Published : Sep 12, 2020, 4:25 PM IST

'ಗುಂಡ್ಯಾನ ಹೆಂಡ್ತಿ' ಧಾರಾವಾಹಿ ಮೂಲಕ ಆ್ಯಕ್ಟಿಂಗ್ ಆರಂಭಿಸಿ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಕನ್ನಿಕೆ'ಯಲ್ಲಿ ಶಿವಾನಿ ಪಾತ್ರಧಾರಿಯಾಗಿ ಮಿಂಚಿ ಇದೀಗ ಬೆಳ್ಳಿತೆರೆಯಲ್ಲಿ ಹೆಸರು ಮಾಡಿರುವ ಅದಿತಿ ಪ್ರಭುದೇವ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

Aditi prabhudeva remains her serial days
ಕಿರುತೆರೆ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ಅದಿತಿ ಪ್ರಭುದೇವ

'ಧೈರ್ಯಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅದಿತಿ, ಬಜಾರ್, ಸಿಂಗ , ರಂಗನಾಯಕಿ, ಬ್ರಹ್ಮಚಾರಿ, ಆಪರೇಷನ್ ನಕ್ಷತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ಅಚಾನಕ್ ಆಗಿ ಬಣ್ಣದ ಲೋಕಕ್ಕೆ ಬಂದಿರುವ ಅದಿತಿ ಪ್ರಭುದೇವ ಸದ್ಯ ಬೆಳ್ಳಿತೆರೆಯಲ್ಲಿ ಸಖತ್ ಬ್ಯುಸಿ. 'ನಾನು ನಟನಾ ಲೋಕಕ್ಕೆ ಬರುತ್ತೇನೆ ಎಂದು ಎಂದಿಗೂ ಕನಸು ಕಂಡಿರಲಿಲ್ಲ. ಕಿರುತೆರೆಯಿಂದ ಆರಂಭವಾದ ನನ್ನ ಜರ್ನಿ ಬೆಳ್ಳಿತೆರೆಗೆ ಬಂದು ನಿಂತಿದೆ‌. ನನ್ನ ಸುಂದರವಾದ ಪಯಣದ ಬಗ್ಗೆ ನೆನಸಿಕೊಂಡರೆ ನಾನು ನಿಜವಾಗಿಯೂ ತುಂಬಾನೇ ಲಕ್ಕಿ ಎಂದೆನಿಸುತ್ತದೆ. ಧಾರಾವಾಹಿಗಳಿಗೆ ಆಡಿಷನ್ ನೀಡಿ ಆಯ್ಕೆಯಾದ ನಾನು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದೇನೆ. ನನ್ನ ಬಣ್ಣದ ಬದುಕಿನಲ್ಲಿ ಕಿರುತೆರೆಗೆ ಮಹತ್ವದ ಸ್ಥಾನ ಇದೆ' ಎನ್ನುತ್ತಾರೆ ಅದಿತಿ.

ಹಳೆಯ ದಿನಗಳನ್ನು ನೆನೆದ ಚೆಲುವೆ

'ಕಿರುತೆರೆ ನನಗೆ ಕೇವಲ ಮಾನಸಿಕ ದೃಢತೆ ಮಾತ್ರವಲ್ಲದೆ ಆರ್ಥಿಕ ದೃಢತೆ ಕೂಡಾ ನೀಡಿದೆ. ಧಾರಾವಾಹಿಗಳಲ್ಲಿ ಕೆಲಸ ಮಾಡುವ ಮೂಲಕ ನಾನು ನನ್ನ ಎಂಬಿಎ ಎಜುಕೇಶನ್ ಲೋನ್ ಕೂಡಾ ತೀರಿಸಿದೆ. ನಟನೆ ಬಗ್ಗೆ ಏನೂ ಗೊತ್ತಿಲ್ಲದೆ ನಾನು ಕಿರುತೆರೆಗೆ ಬಂದ ಬಳಿಕ ಸಾಕಷ್ಟು ವಿಚಾರಗಳನ್ನು ಅರಿತುಕೊಂಡೆ. ನಾನು ಕೆಲಸ ಮಾಡಿದ ಧಾರಾವಾಹಿಗಳಲ್ಲಿ ಉತ್ತಮ ತಂಡ, ಪ್ರೊಡಕ್ಷನ್ ಹೌಸ್ , ಚಾನೆಲ್ ಮತ್ತು ಡೈರೆಕ್ಷನ್ ಟೀಮ್ ಸಿಕ್ಕಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಅವರೆಲ್ಲರಿಂದ ಕಲಿತುಕೊಂಡ ವಿಚಾರಗಳು ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನೆರವಾಗಿದೆ' ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ ಅದಿತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.