ETV Bharat / sitara

ಮೈಸೂರು ರಂಗಾಯಣ ನೂತನ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ ನೇಮಕ - ರಂಗಾಯಣ ನೂತನ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ

ಕೊಡಗು ಜಿಲ್ಲೆಯವರಾದ ಕಾರ್ಯಪ್ಪ ಅವರಿಗೆ, ಹೆಗ್ಗೋಡಿನ ನೀನಾಸಂ, ತಿರುಗಾಟ ಸಂಸ್ಥೆಗಳ ರಂಗಭೂಮಿ ಚಟುವಟಿಯಲ್ಲಿ ಪಾಲ್ಗೊಂಡ ಅನುಭವವಿದೆ. ಸಾಹಿತಿಯೂ ಆಗಿರುವ ಅವರು ಕೊಡವ ಹಾಗೂ ಕನ್ನಡ ಭಾಷೆಗಳಲ್ಲಿ ಒಟ್ಟು 15 ಕೃತಿಗಳನ್ನು ರಚಿಸಿದ್ದಾರೆ.

Addanda kariyappa
ಅಡ್ಡಂಡ ಕಾರ್ಯಪ್ಪ
author img

By

Published : Dec 28, 2019, 9:52 AM IST

ಮೈಸೂರು: ಸುಮಾರು ಮೂರುವರೆ ತಿಂಗಳಿನಿಂದ ಖಾಲಿಯಾಗಿದ್ದ ರಂಗಾಯಣಕ್ಕೆ ನಿರ್ದೇಶಕರ ಸ್ಥಾನಕ್ಕೆ ನೂತನ ಸಾರಥಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಂಗಾಯಣ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ರಂಗಾಯಣ ನಿರ್ದೇಶಕಿಯಾಗಿದ್ದ ಭಾಗೀರಥಿ ಬಾಯಿ ಕದಂ ಅವರು ಸೇರಿದಂತೆ ರಾಜ್ಯದ ನಾಲ್ಕು ರಂಗಾಯಣ ಹಾಗೂ ರಂಗಸಮಾಜದ ಸದಸ್ಯರನ್ನು ಸೆಪ್ಟೆಂಬರ್ 14ರಂದು ರಾಜ್ಯ ಸರ್ಕಾರ ವಜಾಗೊಳಿಸಿತ್ತು. ಅಂದಿನಿಂದ ತೆರವಾಗಿದ್ದ ನಿರ್ದೇಶಕನ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ಅವರನ್ನು ನೇಮಕ ಮಾಡಲಾಗಿದೆ. ನೂತನ ನಿರ್ದೇಶಕ ಕಾರ್ಯಪ್ಪ ಅವರು ಸುಮಾರು 40 ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯವರಾದ ಕಾರ್ಯಪ್ಪ ಅವರಿಗೆ, ಹೆಗ್ಗೋಡಿನ ನೀನಾಸಂ, ತಿರುಗಾಟ ಸಂಸ್ಥೆಗಳ ರಂಗಭೂಮಿ ಚಟುವಟಿಯಲ್ಲಿ ಪಾಲ್ಗೊಂಡ ಅನುಭವವಿದೆ. ಸಾಹಿತಿಯೂ ಆಗಿರುವ ಕಾರ್ಯಪ್ಪ ಅವರು ಕೊಡವ ಹಾಗೂ ಕನ್ನಡ ಭಾಷೆಗಳಲ್ಲಿ ಒಟ್ಟು 15 ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭಾಷಾ ಸಮ್ಮಾನ್ ಪ್ರಶಸ್ತಿ ಕೂಡಾ ಲಭಿಸಿದೆ. ಅಲ್ಲದೆ, ಕೊಡವ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

Intro:ರಂಗಾಯಣBody:ಮೈಸೂರು:ಮೂರುವರೆ ತಿಂಗಳಿನಿಂದ ಖಾಲಿಯಾಗಿದ್ದ ರಂಗಾಯಣಕ್ಕೆ ನಿರ್ದೇಶನ ಸ್ಥಾನಕ್ಕೆ ನೂತನ ಸಾರಥಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರಂಗಾಯಣ ನಿರ್ದೇಶಕಿಯಾಗಿದ್ದ ಭಾಗಿರಥಿ ಬಾಯಿ ಕದಂ ಅವರು ಸೇರಿದಂತೆ ರಾಜ್ಯದ ನಾಲ್ಕು ರಂಗಾಯಣ  ಹಾಗೂ ರಂಗಸಮಾಜದ ಸದಸ್ಯರನ್ನು ಸೆಪ್ಟೆಂಬರ್ ೧೪ರಂದು ರಾಜ್ಯ ಸರ್ಕಾರ ವಜಾಗೊಳಿಸಿತು. ಅಂದಿನಿಂದ ತೆರವಾಗಿದ್ದ ನಿರ್ದೇಶನ ಸ್ಥಾನಕ್ಕೆ ನೇಮಕ ಮಾಡಲಾಗಿದ್ದು ಮೈಸೂರು ರಂಗಾಯಣ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ರಂಗಾಯಣದ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ಅಡ್ಡಂಡ ಕಾರಿಯಪ್ಪ ಅವರು ಸುಮಾರು ೪೦ ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯವರಾದ ಕಾರಿಯಪ್ಪ, ಹೆಗ್ಗೋಡಿನ ನೀನಾಸಂ, ತಿರುಗಾಟ ಸಂಸ್ಥೆಗಳ ರಂಗಭೂಮಿ ಚಟುವಟಿಯಲ್ಲಿ ಪಾಲ್ಗೊಂಡ ಅನುಭವಿ. ಸಾಹಿತಿಯೂ ಆಗಿರುವ ಕಾರಿಯಪ್ಪ ಅವರು ಕೊಡವ ಹಾಗೂ ಕನ್ನಡ ಭಾಷೆಗಳಲ್ಲಿ ಒಟ್ಟು ೧೫ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭಾಷಾ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅಲ್ಲದೆ, ಕೊಡವ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
Conclusion:ರಂಗಾಯಣ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.