ನಟಿ ಸುಪ್ರಿತಾ ಸತ್ಯನಾರಾಯಣ ಚಿತ್ರೀಕರಣದಿಂದ ಬ್ರೇಕ್ ಪಡೆದು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪ್ರಕೃತಿಯ ನಡುವೆ ಕಾಲ ಕಳೆಯುತ್ತಿದ್ದಾರೆ. ಸುಪ್ರಿತಾ ಕೇರಳದ ಸಮುದ್ರ ತೀರದಲ್ಲಿ ಸಮಯ ಕಳೆಯುತ್ತಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸೂರ್ಯಾಸ್ತದ ವೇಳೆ ಸುಂದರ ಸಮುದ್ರ ತೀರದಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ಸುಪ್ರಿತಾ " ನೊರೆಯು ತಿಳಿ ಹಾಲಿನಂತೆ ಕಾಣುತ್ತಿದೆ.. ಅಲೆಗಳು ಬೂದು ಬಣ್ಣಕ್ಕೆ ತಿರುಗಿದೆ..ಸೂರ್ಯಾಸ್ತದ ಹಿಂದೆ ನನ್ನ ದಾರಿ ಕಾಣುತ್ತಿದೆ" ಎಂದು ಬರೆದುಕೊಂಡಿದ್ದಾರೆ. 'ಸೀತಾ ವಲ್ಲಭ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದ ಸುಪ್ರಿತಾ ಸತ್ಯನಾರಾಯಣ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ವೈಯಕ್ತಿಕ ವಿಚಾರ ಹಾಗೂ ಕರಿಯರ್ಗೆ ಸಂಬಂಧಿಸಿದ ವಿಚಾರಗಳು, ಫೋಟೋ, ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಪ್ರಶಾಂತ್ ನೀಲ್ ಟ್ವೀಟ್ ನೋಡಿ ಥ್ರಿಲ್ ಆದ ಅಭಿಮಾನಿಗಳು...ಟ್ವೀಟ್ನಲ್ಲಿ ಅಂಥದ್ದೇನಿದೆ...?
ಸುಪ್ರಿತಾ ಸದ್ಯಕ್ಕೆ 'ಸರಸು' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಜೊತೆಗೆ 'ರಹದಾರಿ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಸುಪ್ರಿತಾ, ಮೊದಲ ಸಿನಿಮಾದಲ್ಲಿ ದರೋಡೆಕೋರರ ಗ್ಯಾಂಗ್ ಲೀಡರ್ ಆಗಿ ನಟಿಸಿದ್ದಾರೆ. ಈ ಚಿತ್ರದ ಜೊತೆ 'ಲಾಂಗ್ ಡ್ರೈವ್' ಸಿನಿಮಾದಲ್ಲಿಯೂ ಈಕೆ ನಾಯಕಿಯಾಗಿ ನಟಿಸುತ್ತಿದ್ದು ಡಬ್ಬಿಂಗ್ ಕೆಲಸಗಳು ನಡೆಯುತ್ತಿದೆ. ಸಾಂಸ್ಕೃತಿಕ ನಗರಿಯ ಈ ಚೆಲುವೆ ಕಿರುತೆರೆ, ಬೆಳ್ಳಿತೆರೆ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.