ETV Bharat / sitara

ರಶ್ಮಿ ಪ್ರಭಾಕರ್ ಕಿರುತೆರೆ ಜರ್ನಿಗೆ 6 ವರ್ಷಗಳ ಸಂಭ್ರಮ - Shubha vivaha Fame Rashmi Prabhakar

'ಲಕ್ಷ್ಮಿ ಬಾರಮ್ಮ' ಚಿನ್ನು ಖ್ಯಾತಿಯ ರಶ್ಮಿ ಪ್ರಭಾಕರ್ ಕಿರುತೆರೆಯಲ್ಲಿ 6 ವರ್ಷಗಳನ್ನು ಪೂರೈಸಿದ್ದಾರೆ. ಈ ಧಾರಾವಾಹಿ ನಂತರ ಆ್ಯಕ್ಟಿಂಗ್​​​​ನಿಂದ ಬ್ರೇಕ್ ಪಡೆದಿದ್ದ ರಶ್ಮಿ ಪ್ರಭಾಕರ್, ಈಗ ಶ್ರುತಿ ನಾಯ್ಡು ನಿರ್ದೇಶನದಲ್ಲಿ 'ಮನಸೆಲ್ಲಾ ನೀನೇ' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Actress Rashmi Prabhakar
ರಶ್ಮಿ ಪ್ರಭಾಕರ್
author img

By

Published : Nov 25, 2020, 9:09 AM IST

Updated : Nov 25, 2020, 9:23 AM IST

ರಶ್ಮಿ ಪ್ರಭಾಕರ್ ಕಿರುತೆರೆ ವೀಕ್ಷಕರಿಗೆ ಬಹಳ ಪರಿಚಿತ ಹೆಸರು. 'ಶುಭ ವಿವಾಹ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ರಶ್ಮಿ ನಂತರ 'ಜೀವನ ಚೈತ್ರ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಅಲಿಯಾಸ್ ಲಕ್ಷ್ಮಿ ಪಾತ್ರ. ತಮ್ಮ ಮುಗ್ಧ ಅಭಿನಯದ ಮೂಲಕ ಕನ್ನಡಿಗರ ಮನೆ ಮನ ಗೆದ್ದ ರಶ್ಮಿ ಕಿರುತೆರೆ ಜರ್ನಿಗೆ 6 ವರ್ಷಗಳ ಸಂಭ್ರಮ.

Actress Rashmi Prabhakar
ಕಿರುತೆರೆ ನಟಿ ರಶ್ಮಿ ಪ್ರಭಾಕರ್

ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿ, " ಇಂದು ನನ್ನ ಪಾಲಿಗೆ ಬಹಳ ಮುಖ್ಯವಾದ ದಿನ. ಟಿವಿ ಉದ್ಯಮದಲ್ಲಿ 6 ವರ್ಷಗಳನ್ನು ಮುಗಿಸಿದ್ದೇನೆ. ಅಂದ ಹಾಗೆ ಇದು ಸುಲಭದ ಪಯಣ ಆಗಿರಲಿಲ್ಲ. ಈ ಪಯಣದಲ್ಲಿ ಹಲವು ಏರಿಳಿತಗಳಿತ್ತು. ನನ್ನನ್ನು ಈ ಕ್ಷೇತ್ರದಲ್ಲಿ ಬೆಳೆಸಿದ್ದಕ್ಕೆ ನಿಮಗೆ ಕೃತಜ್ಞಳಾಗಿದ್ದೇನೆ. ತಮ್ಮ ಪ್ರಾಜೆಕ್ಟ್ ಗಳಲ್ಲಿ ಅವಕಾಶ ಕೊಟ್ಟವರಿಗೆ ಧನ್ಯವಾದಗಳು , ಕುಟುಂಬದವರಿಗೆ , ಹಿತೈಷಿಗಳಿಗೆ ನನ್ನ ಅಭಿಮಾನಿಗಳಿಗೆ ಕೃತಜ್ಞತೆಗಳು ಹಾಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ರಶ್ಮಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು " ಇನ್ನೂ ಹೀಗೆ ಸಾಧಿಸು ,ಭವಿಷ್ಯಕ್ಕೆ ಒಳಿತಾಗಲಿ" ಎಂದು ಅವರ ಸಹನಟಿ, ಗೆಳತಿ ನೇಹಾಗೌಡ ಹಾರೈಸಿದ್ದಾರೆ.ಶುಭವಿವಾಹ, ಜೀವನಚೈತ್ರ, ಅರುಂಧತಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ತೆಲುಗಿನ 'ಪೌರ್ಣಮಿ ' ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನಂತರ ಕನ್ನಡ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದ ರಶ್ಮಿ ಪ್ರಭಾಕರ್, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ, ಶ್ರುತಿ ನಾಯ್ಡು ನಿರ್ದೇಶನದಲ್ಲಿ ಪ್ರಸಾರವಾಗಲಿರುವ 'ಮನಸೆಲ್ಲಾ ನೀನೆ ' ಹೊಸ ಧಾರಾವಾಹಿಯಲ್ಲಿ ನಾಯಕಿ ರಾಗ ಆಗಿ ರಶ್ಮಿ ಮಿಂಚಲಿದ್ದಾರೆ. ಈ ಧಾರಾವಾಹಿ ಶೀಘ್ರವೇ ಪ್ರಸಾರವಾಗಲಿದೆ. ಆ್ಯಕ್ಟಿಂಗ್​​​ನಲ್ಲಿ ಮಾತ್ರವಲ್ಲ ಭರತ ನಾಟ್ಯ ಕಲಿತಿರುವ ರಶ್ಮಿ ಅನೇಕ ಸ್ಟೇಜ್ ಶೋಗಳನ್ನು ನೀಡಿದ್ದಾರೆ.

Actress Rashmi Prabhakar
ರಶ್ಮಿ ಕಿರುತೆರೆ ಜರ್ನಿಗೆ 6 ವರ್ಷಗಳ ಸಂಭ್ರಮ

Last Updated : Nov 25, 2020, 9:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.