ETV Bharat / sitara

ಧಾರಾವಾಹಿ ಚಿತ್ರೀಕರಣವಾಗಿದ್ದರೂ ಪ್ರಸಾರವಾಗಲೇ ಇಲ್ಲ...ಬೇಸರ ಹೊರ ಹಾಕಿದ ನಟಿ - Nandini 2 heroin Meghashree

ನಂದಿನಿ 2 ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಆದ ಮೇಘಶ್ರೀ ಇದೀಗ ಬೇಸರ ಹೊರ ಹಾಕಿದ್ದಾರೆ. ನಂದಿನಿ 2 ಚಿತ್ರೀಕರಣ ಆದರೂ ಧಾರಾವಾಹಿ ಇನ್ನೂ ಪ್ರಸಾರ ಕಾಣದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮೇಘಶ್ರೀ ಸಮಯ, ಶ್ರಮ ಎರಡೂ ವ್ಯರ್ಥವಾಗಿದೆ ಎಂದಿದ್ದಾರೆ.

Actress Meghashree
ಮೇಘಶ್ರೀ
author img

By

Published : Feb 22, 2021, 12:00 PM IST

ಉದಯ ವಾಹಿನಿಯಲ್ಲಿ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಂದಿನಿ' ನವಿರಾದ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಳೆದ ವರ್ಷ ನಂದಿನಿ ಧಾರಾವಾಹಿ ಮುಕ್ತಾಯಗೊಂಡಿದ್ದು, ಅದರ ಸೀಕ್ವೆಲ್ ಅರ್ಥಾತ್ ನಂದಿನಿ ಭಾಗ 2 ಅತಿ ಶೀಘ್ರದಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಸೆಪ್ಟೆಂಬರ್​​​​​​​ನಲ್ಲೇ ಕೇಳಿ ಬಂದಿತ್ತು‌.

Actress Meghashree
ಕಿರುತೆರೆ ನಟಿ ಮೇಘಶ್ರಿ

ನಂದಿನಿ ಭಾಗ 1 ರಲ್ಲಿ ನಿತ್ಯಾ ರಾಮ್ ಹಾಗೂ ಛಾಯಾ ಸಿಂಗ್ ನಟಿಸಿದ್ದು, ಸೀಸನ್ 2 ರ ನಾಯಕಿಯಾಗಿ ಮೇಘಶ್ರೀ ಆಯ್ಕೆ ಆಗಿದ್ದರು. ಧಾರಾವಾಹಿಯ ಪ್ರೋಮೋ ಜೊತೆಗೆ ಒಂದಷ್ಟು ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಶ್ಚರ್ಯ ಎಂಬಂತೆ 'ನಂದಿನಿ 2' ಧಾರಾವಾಹಿಯ ಶೂಟಿಂಗ್ ಆರಂಭವಾಗಿದ್ದರೂ, ಧಾರಾವಾಹಿ ಪ್ರಸಾರವಾಗಲೇ ಇಲ್ಲ. ಈ ಕುರಿತು ನಟಿ ಮೇಘಶ್ರೀ ಬೇಸರ ಹೊರಹಾಕಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೂಪರ್ ನ್ಯಾಚುರಲ್ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಾನು ನಾಗಿಣಿ ಶೇಷಳಾಗಿ ಅಭಿನಯಿಸಿದ್ದೆ. ಇದೀಗ ಮತ್ತೆ ನಾಗಿಣಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದೆ. ಜೊತೆಗೆ ಸೀರಿಯಲ್ ಪ್ರಿಯರು ಈ ಧಾರಾವಾಹಿ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾಯುತ್ತಿದ್ದೆ. ಈಗಾಗಲೇ ನಂದಿನಿ ಭಾಗ 2 ರ ಪ್ರೋಮೋ ಜೊತೆಗೆ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶೂಟಿಂಗ್ ಕೂಡಾ ಆರಂಭವಾಗಿತ್ತು. ಕೊನೆಯಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ವಿಚಾರ ಕೇಳಿ ಬಂದಾಗ ನಿಜವಾಗಿಯೂ ಶಾಕ್ ಆಯ್ತು. ಆದರೆ ಈಗಲೂ ಕೂಡಾ ಧಾರಾವಾಹಿ ಪ್ರಸಾರ ಆಗದಿರುವುದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ಸಮಯದ ಜೊತೆಗೆ ಶ್ರಮವೂ ವ್ಯರ್ಥವಾಗಿದೆ" ಎಂದು ಕಿರುತೆರೆಪ್ರಿಯರೊಂದಿಗೆ ಬೇಸರ ಹಂಚಿಕೊಂಡಿದ್ದಾರೆ.

Actress Meghashree
ನಂದಿನಿ 2 ನಾಯಕಿ ಮೇಘಶ್ರೀ

ಇದನ್ನೂ ಓದಿ: ರಜನಿಯನ್ನು ಭೇಟಿಯಾದ ಕಮಲ್​ ಹಾಸನ್​​​

ಕಲರ್ಸ್ ಸೂಪರ್ ವಾಹಿನಿಯ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ಶೇಷಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಮೇಘಶ್ರೀ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. 'ಮಾರ್ಚ್ 22' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಕಮಾಲ್ ಮಾಡಿದ್ದ ಮೇಘಶ್ರೀ 'ಕದ್ದು ಮುಚ್ಚಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ 'ದಶರಥ' ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳಾಗಿ ನಟಿಸಿ ಸಿನಿಮಾ ವೀಕ್ಷಕರ ಮನ ಸೆಳೆದ ಮೇಘಶ್ರೀ 'ಕೃಷ್ಣ ತುಳಸಿ' ಸಿನಿಮಾದಲ್ಲಿ ನಾಯಕಿ ತುಳಸಿ ಆಗಿ ಅಭಿನಯಿಸಿದ್ದಾರೆ. 'ಇವಳು ಸುಜಾತಾ' ಧಾರಾವಾಹಿಯ ಸುಜಾತಾಳಾಗಿ ಕಿರುತೆರೆಗೆ ಕಂ ಬ್ಯಾಕ್ ಆದ ಮೇಘಶ್ರೀ ಅಲ್ಲೂ ಮನೆ ಮಾತಾದರು. ಮುಂದೆ ನಂದಿನಿ-2 ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಬೇಕು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಮೇಘಶ್ರೀಗೆ ಒಳ್ಳೆಯ ಅವಕಾಶ ದೊರೆಯಲಿದೆಯಾ ಕಾದು ನೋಡಬೇಕು.

Actress Meghashree
ಧಾರಾವಾಹಿ ಪ್ರಸಾರವಾಗದಿದ್ದಕ್ಕೆ ಬೇಸರ ಹೊರ ಹಾಕಿದ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.