ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಅಶ್ವಿನಿ ಆಗಿ ಅಭಿನಯಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿರುವ ಚೆಂದುಳ್ಳಿ ಚೆಲುವೆ ಮಯೂರಿ ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಮಯೂರಿ ಕ್ಯಾತರಿ ಅವರ ಸೀಮಂತ ಶಾಸ್ತ್ರೋಕ್ತವಾಗಿ ನಡೆದಿದ್ದು, ಮುದ್ದು ಕಂದನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಡ್ಯಾನ್ಸ್ ಮಾಡುವ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸಂಕ್ರಾತಿ ವಿಶೇಷ ನಡೆದಿದ್ದು, ಅದರಲ್ಲಿ ಮಯೂರಿ ಅತಿಥಿಯಾಗಿ ಕಾಣಿಸಿಕೊಂಡಿರುವ ಜತೆಗೆ ಕಾಡು ಮಳೆಯನ್ನು, ಮಳೆಯ ನೆನಪನ್ನು, ನೆನಪು ಹಸಿವನ್ನು ಮರೆಸು ಬಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ತುಂಬು ಗರ್ಭಿಣಿಯಾಗಿರುವ ಮಯೂರಿ ನೃತ್ಯ ಮಾಡಿದ್ದು, ಇದನ್ನ ನೋಡಿ ವೀಕ್ಷಕರು ಆಶ್ಚರ್ಯದ ಜೊತೆಗೆ ಸಂತಸ ಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಯೂರಿ ಪತಿ ಅರುಣ್ ಕೂಡಾ ಭಾಗವಹಿಸಿದ್ದರು. ಹಿರಿಯ ನಟಿ ಸ್ಪರ್ಶ ರೇಖಾ, ವನಿತಾ ವಾಸು, ಸಂಗೀತಾ ಅನಿಲ್ ಜೊತೆಗೆ ಶಾಲಿನಿ ಸೇರಿ ಮಯೂರಿಗೆ ಸೀಮಂತ ಕಾರ್ಯವನ್ನು ಮಾಡಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಮಯೂರಿ, ಇದೀಗ ಚೊಚ್ಚಲ ಮಗುವಿನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.