ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯಲ್ಲಿ ನಾಯಕಿ ಅಮೃತಾಳಾಗಿ ರಾಜ್ಯಾದ್ಯಂತ ಮನೆ ಮಾತಾಗಿದ್ದ ದೀಪಿಕಾ ದಾಸ್, ಜನರಿಗೆ ಮಗದಷ್ಟು ಹತ್ತಿರವಾದದ್ದು ದೊಡ್ಮನೆಗೆ ಹೋದ ಬಳಿಕವೇ. ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್-7ರ ಸ್ಪರ್ಧಿಯಾಗಿದ್ದ ದೀಪಿಕಾ ಈಗ ಕೇವಲ ನಟಿ ಮಾತ್ರವಲ್ಲ, ಉದ್ಯಮಿ ಕೂಡ.
![actress Deepika Das](https://etvbharatimages.akamaized.net/etvbharat/prod-images/kn-bng-02-deepikadas-fashion-photo-ka10018_18082020104328_1808f_1597727608_658.jpg)
ದೀಪಿಕಾ ತಮ್ಮ ಫ್ಯಾಷನ್ ಮತ್ತು ಸ್ಟೈಲ್ನಿಂದಲೇ ಗಮನ ಸೆಳೆದಿರುವುದಂತೂ ನಿಜ. ಫ್ಯಾಷನ್ ಪ್ರಿಯೆಯಾಗಿರುವ ಅವರು, ಹೊಸದಾಗಿ ಕ್ಲಾಥಿಂಗ್ ಬ್ರಾಂಡ್ ಆರಂಭಿಸಿದ್ದು, ಅದಕ್ಕೆ ದಿ ದಾಸ್ ಫ್ಯಾಷನ್ಸ್ ಎಂದು ಹೆಸರಿಟ್ಟಿದ್ದಾರೆ. ಅಲ್ಲಿ ಎಲ್ಲಾ ರೀತಿಯ ಬಟ್ಟೆಗಳು ಲಭ್ಯ. ಸಾಂಪ್ರದಾಯಿಕ ಉಡುಗೆ, ಪಾಶ್ಚಾತ್ಯ, ಕ್ಯಾಜುವಲ್ ಬಟ್ಟೆಗಳು, ಪಾರ್ಟಿ ವೇರ್ಸ್ ಹೀಗೆ ಪ್ರತಿಯೊಂದು ಸಂದರ್ಭಗಳಿಗೂ ಸೂಕ್ತ ಎನಿಸುವ ವಸ್ತ್ರಗಳು ಲಭ್ಯವಿವೆ ಎನ್ನುತ್ತಾರೆ ನಟಿ ದೀಪಿಕಾ ದಾಸ್.
- " class="align-text-top noRightClick twitterSection" data="
">
ನಟಿಯಾಗಿದ್ದ ದೀಪಿಕಾ ಅವರನ್ನು ಇನ್ಮುಂದೆ ಉದ್ಯಮಿಯಾಗಿಯೂ ನೋಡುಬೇಕಾಗಿದೆ. ದೂದ್ ಸಾಗರ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಅವರು, ಜನಪ್ರಿಯತೆ ಪಡೆದಿದ್ದು ಮಾತ್ರ ನಾಗಿಣಿಯಲ್ಲಿ ಅಮೃತಾಳಾಗಿ ಬದಲಾದ ನಂತರ. ನಟನೆಯ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-1 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಪ್ರಾಣಿ ಪ್ರಿಯೆಯೂ ಆಗಿರುವ ಅವರು, ತಮ್ಮ ಮುದ್ದು ನಾಯಿ ಮರಿ ಕ್ಯಾಂಡಿಯ ಜನ್ಮದಿನವನ್ನೂ ಇತ್ತೀಚೆಗೆ ಆಚರಿಸಿದ್ದಾರೆ.
![actress Deepika Das](https://etvbharatimages.akamaized.net/etvbharat/prod-images/kn-bng-02-deepikadas-fashion-photo-ka10018_18082020104328_1808f_1597727608_272.jpg)