ETV Bharat / sitara

ತಮ್ಮ ಮೆಚ್ಚಿನ ಧಾರಾವಾಹಿ, ಪಾತ್ರಧಾರಿಗಳನ್ನು ಹೊಗಳಿದ ಗೋಲ್ಡನ್ ಗರ್ಲ್ - Geeta is Amulya favorite serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯನ್ನು ನಟಿ ಅಮೂಲ್ಯ ಪ್ರತಿದಿನ ತಪ್ಪದೆ ನೋಡುತ್ತಾರಂತೆ. ಈ ಬಗ್ಗೆ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Actress Amulya praised Geeta serial and artists
ಗೋಲ್ಡನ್ ಗರ್ಲ್
author img

By

Published : Jul 22, 2020, 10:12 AM IST

ಧಾರಾವಾಹಿಪ್ರಿಯರು ಪ್ರತಿದಿನ ತಪ್ಪದೆ ತಮ್ಮ ಮೆಚ್ಚಿನ ಧಾರಾವಾಹಿಗಳನ್ನು ನೋಡುತ್ತಾರೆ ನಿಜ. ಆದರೆ ಸೆಲಬ್ರಿಟಿಗಳು ಕೂಡಾ ಕೆಲವೊಂದು ಧಾರಾವಾಹಿಗಳನ್ನು ಮಿಸ್ ಮಾಡದೆ ನೋಡುತ್ತಾರೆ. ಅದಕ್ಕೆ ಮುದ್ದು ಹುಡುಗಿ ಅಮೂಲ್ಯ ಕೂಡಾ ಸಾಕ್ಷಿ.

Actress Amulya praised Geeta serial and artists
ನಟಿ ಅಮೂಲ್ಯ

ಅಮೂಲ್ಯ ಬಹಳ ಇಷ್ಟಪಟ್ಟು ನೋಡುವ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ. ಈ ಧಾರಾವಾಹಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಇತ್ತೀಚೆಗಷ್ಟೇ ನೂರು ದಿನಗಳನ್ನು ಪೂರೈಸಿದೆ. ವಿಭಿನ್ನ ಕಥಾಹಂದರದ ಮೂಲಕ ಗೀತಾ ಧಾರಾವಾಹಿ ವೀಕ್ಷಕರ ಮನ ಗೆದ್ದಿದ್ದು ಅಮೂಲ್ಯ ಕೂಡಾ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೀತಾ ಧಾರಾವಾಹಿ (ಫೋಟೋ ಕೃಪೆ: ಕಲರ್ಸ್ ಕನ್ನಡ)

ಈ ಮುನ್ನ ಅಗ್ನಿಸಾಕ್ಷಿ ಧಾರಾವಾಹಿಯನ್ನು ತಪ್ಪದೆ ನೋಡುತ್ತಿದ್ದೆ. ಆ ಧಾರಾವಾಹಿ ಮುಗಿದದ್ದು ಸ್ವಲ್ಪ ಬೇಸರವಾಗಿದ್ದು ನಿಜ. ಆದರೆ ಆ ಜಾಗವನ್ನು ಗೀತಾ ಧಾರಾವಾಹಿ ಆವರಿಸಿದೆ. ಅದರಲ್ಲೂ ಗೀತಾ ಪಾತ್ರಧಾರಿಯಾಗಿ ನಟಿಸುತ್ತಿರುವ ಭವ್ಯಗೌಡ ಅವರ ಆ್ಯಕ್ಟಿಂಗ್ ಬಹಳ ಖುಷಿ ನೀಡಿದೆ. ಭವ್ಯ ನನ್ನ ಕಸಿನ್ ಆಗಬೇಕು. ಅವರನ್ನು ಈಗ ತೆರೆ ಮೇಲೆ ನೋಡುತ್ತಿರುವುದು ಖುಷಿ ತಂದಿದೆ. ಧಾರಾವಾಹಿ ಕಥೆ ಬಹಳ ಚೆನ್ನಾಗಿದೆ. ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ರಾತ್ರಿ 8 ಆದರೆ ಸಾಕು ಧಾರಾವಾಹಿ ನೋಡಲು ಟಿವಿ ಮುಂದೆ ಹಾಜರಾಗುತ್ತೇನೆ ಎಂದು ಅಮೂಲ್ಯ ಹೇಳಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭವ್ಯ ಗೌಡ

ಕೆ‌.ಎಸ್.ರಾಮ್ ಜಿ ನಿರ್ಮಾಣದ ಈ ಧಾರಾವಾಹಿಯಲ್ಲಿ ನಾಯಕಿ ಗೀತಾ ಆಗಿ ಭವ್ಯಗೌಡ ನಟಿಸಿದ್ದರೆ, ನಾಯಕ ವಿಜಯ್ ಆಗಿ ಧನುಷ್ ಗೌಡ ಬಣ್ಣ ಹಚ್ಚಿದ್ದಾರೆ. ಮಧ್ಯಮ ವರ್ಗದ ಹುಡುಗಿ ಗೀತಾ , ಶ್ರೀಮಂತ ವರ್ಗದ ವಿಜಯ್ ಎಂಬ ಹುಡುಗನಿಂದ ತೊಂದರೆ ಅನುಭವಿಸುತ್ತಾಳೆ. ಅವನು ನೀಡಿದ ಕಷ್ಟಗಳಿಗೆ ಸೇಡು ತೀರಿಸಿಕೊಳ್ಳಲು ಅವನ ಹೆಂಡತಿಯಾಗಿ ಬರುತ್ತಾಳೆ. ನಂತರ ಮನೆಯವರನ್ನೆಲ್ಲಾ ಹೇಗೆ ಎದುರಿಸುತ್ತಾಳೆ ? ವಿಜಯ್​​​​​​​​​​​​​​​​​​ಗೆ ಗೀತಾ ಮೇಲೆ ಪ್ರೀತಿ ಹುಟ್ಟುತ್ತದೆಯಾ? ವಿಜಯ್​​​​​​​​ನನ್ನು ಗೀತಾ ಬದಲಾಯಿಸುತ್ತಾಳಾ? ಎಂಬುದೇ ಗೀತಾ ಧಾರಾವಾಹಿಯ ಕಥಾ ಹಂದರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.