ETV Bharat / sitara

ಆಗ ಮಿಸ್ ಮಾಡಿಕೊಂಡಿದ್ದ ಖುಷಿಯನ್ನು ಈಗ ಪಡೆಯುತ್ತಿದ್ದಾರೆ ವಿಜಯ್ ಸೂರ್ಯ - Vijay surya spending time with son

ಲಾಕ್​​ ಡೌನ್ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಲ ಕಳೆಯುತ್ತಿದ್ದರೆ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ತನ್ನ ಮೂರು ತಿಂಗಳ ಪುಟ್ಟ ಮಗನೊಂದಿಗೆ ಎಂಜಾಯ್ ಮಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ.

Actor Vijay surya
ವಿಜಯ್ ಸೂರ್ಯ
author img

By

Published : Apr 8, 2020, 5:10 PM IST

ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ವೈರಸ್ ಕಾಟದಿಂದಾಗಿ ಇಡೀ ದೇಶವೇ ಲಾಕ್​ ಡೌನ್​ ಆಗಿದೆ. ಜನ ಸಾಮಾನ್ಯರಿಗೆ ಮಾತ್ರವಲ್ಲ ಪ್ರತಿದಿನ ಶೂಟಿಂಗ್​, ರೆಕಾರ್ಡಿಂಗ್, ಡಬ್ಬಿಂಗ್ ಎಂದು ಬ್ಯುಸಿಯಾಗಿರುತ್ತಿದ್ದ ನಟ ನಟಿಯರಿಗೆ ಕೂಡಾ ಹೇಗಪ್ಪಾ ಕಾಲ ಕಳೆಯುವುದು ಎನ್ನುವಂತಾಗಿದೆ.

ಕೆಲವರು ಟೈಂ ಪಾಸ್ ಮಾಡಲು ಏನಾದರೂ ಐಡಿಯಾ ಹುಡುಕುತ್ತಿದ್ದರೆ, ಮನೆಯಲ್ಲಿ ಮಕ್ಕಳು ಇರುವವರು ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ನಟ ವಿಜಯ್ ಸೂರ್ಯ ಕೂಡಾ ಹೊರತಾಗಿಲ್ಲ. ಮೂರು ತಿಂಗಳ ಹಿಂದೆ ತಂದೆಯಾಗಿರುವ ವಿಜಯಸೂರ್ಯ ಮಗನೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಮಗು ಜನಿಸಿದ ಸಂದರ್ಭದಲ್ಲಿ ವಿಜಯ್ ಸೂರ್ಯ ಸಿನಿಮಾ ಹಾಗೂ ಸೀರಿಯಲ್ ಎಂದು ಯಾವಾಗಲೂ ಬ್ಯುಸಿಯಾಗಿರುತ್ತಿದ್ದರು ಹೀಗಾಗಿ ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯ ಆಗಿರಲಿಲ್ಲ. ಆದರೆ ಈಗ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ.

ಸದ್ಯಕ್ಕೆ ಮೂರು ತಿಂಗಳ ಮುದ್ದಾದ ಮಗು ಸೋಹನ್ ಸೂರ್ಯ ಜೊತೆ ವಿಜಯ್ ಸೂರ್ಯ ದಿನ ಕಳೆಯುತ್ತಿದ್ದಾರೆ. ಮಗುವಿನೊಂದಿಗೆ ಸೆಲ್ಫಿ ಫೋಟೋ, ವಿಡಿಯೋಗಳನ್ನು ಮಾಡುತ್ತಿರುವ ವಿಜಯ್ ಸೂರ್ಯ ಅವುಗಳನ್ನು ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ವಿಜಯ್ ಸೂರ್ಯ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದು ಇನ್ನೂ ಹೆಚ್ಚಿನ ವಿಡಿಯೋ ಶೇರ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿರುವುದರಿಂದ ವಿಜಯ್ ಸೂರ್ಯ ಮತ್ತಷ್ಟು ಖುಷಿಯಾಗಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.