ETV Bharat / sitara

ಸುದೀರ್ಘ ಸಮಯದ ಬಳಿಕ ಮತ್ತೆ ಕಿರುತೆರೆಗೆ ಬಂದ್ರು ಧರ್ಮ

ನಾನು ಬಣ್ಣದ ಪಯಣ ಆರಂಭಿಸಿದ್ದು, ಕಿರುತೆರೆಯಿಂದಲೇ. ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಅಭಿನಯಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಒಂದರ್ಥದಲ್ಲಿ ನಾನು ನನ್ನ ಮೂಲ ಮನೆಗೆ ಮರಳಿ ಬಂದ ಅನುಭವವಾಗುತ್ತಿದೆ ಎಂದು ಧರ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.

author img

By

Published : Oct 18, 2019, 6:11 PM IST

ಧರ್ಮ

ಸ್ಟಾರ್ ಸುವರ್ಣವಾಹಿನಿಯಲ್ಲಿ ಆರಂಭವಾಗಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಇಂತಿ ನಿಮ್ಮ ಆಶಾ' ಧಾರಾವಾಹಿಯೂ ಒಂದು. ವಿಭಿನ್ನ ಶೈಲಿಯ ಕಥಾ ಹಂದರವನ್ನು ಹೊಂದಿರುವ ಈ ಧಾರಾವಾಹಿಯಲ್ಲಿ ಆಶಾ ಪಾತ್ರಧಾರಿಯಾಗಿ ಸಂಗೀತಾ ಅನಿಲ್ ಕಾಣಿಸಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ.

Dharma
ನಟ ಧರ್ಮ

ಇನ್ನು ಸಂಗೀತ ಪತಿಯಾಗಿ ಹಿರಿತೆರೆ ಕಲಾವಿದ ಧರ್ಮ ನಟಿಸುತ್ತಿದ್ದು ಈ ಧಾರಾವಾಹಿ ಮೂಲಕ ಧರ್ಮ ಮತ್ತೆ ಕಿರುತೆರೆಗೆ ಕಾಲಿರಿಸಿದ್ದಾರೆ. ಆಶಾ ಪತಿ ಸಮರ್ಥ್ ಪಾತ್ರಧಾರಿಯಾಗಿ ಧರ್ಮ ಅವರು ಅಭಿನಯಿಸುತ್ತಿದ್ದು, ಸುಮಾರು 20 ವರ್ಷಗಳ ಬಳಿಕ ಅವರು ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಕಿರುತೆರೆಯಲ್ಲಿ ಮತ್ತೆ ನಟಿಸುತ್ತಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ಧರ್ಮ ಹೇಳಿಕೊಂಡಿದ್ದಾರೆ. 'ಇಂತಿ ನಿಮ್ಮ ಆಶಾ' ಧಾರಾವಾಹಿ ಮೂಲಕ ನಾನು ಮತ್ತೊಮ್ಮೆ ಕಿರುತೆರೆಯಲ್ಲಿ ನಟಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ ನಾನು ಬಣ್ಣದ ಪಯಣ ಆರಂಭಿಸಿದ್ದು, ಕಿರುತೆರೆಯಿಂದಲೇ. ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಅಭಿನಯಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಒಂದರ್ಥದಲ್ಲಿ ನಾನು ನನ್ನ ಮೂಲ ಮನೆಗೆ ಮರಳಿ ಬಂದ ಅನುಭವವಾಗುತ್ತಿದೆ' ಎಂದು ಹೇಳುತ್ತಾರೆ ಧರ್ಮ.

  • " class="align-text-top noRightClick twitterSection" data="">

'ನಾನು ಈ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್​ಗೆ ಇಬ್ಬರು ಮಕ್ಕಳು. ನನ್ನ ಪಾತ್ರ ನೆಗೆಟಿವ್ ಶೇಡ್​​​​ನಲ್ಲಿದೆ. ಈ ಧಾರಾವಾಹಿಯಲ್ಲಿ ನಾನು ಹೆಂಡತಿಗೆ ಗೌರವ ನೀಡದಿರುವ ಗಂಡನಾಗಿ ನಟಿಸಿದ್ದೇನೆ. ಆದರೆ, ಆಕೆ ನನಗೋಸ್ಕರ, ಮನೆಗೋಸ್ಕರ ಸಾಕಷ್ಟು ದುಡಿಯುತ್ತಾಳೆ. ಪ್ರೊಫೆಷನಲ್​​​​​​​​​ ಜೀವನದಲ್ಲಿ ಸಾಕಷ್ಟು ಒಳ್ಳೆಯ ಹೆಸರು ಪಡೆದಿರುವ ಸಮರ್ಥ್ ತನ್ನ ಹೆಂಡತಿಯ ಬೇಕು ಬೇಡಗಳನ್ನು ಪೂರೈಸುವಲ್ಲಿ ವಿಫಲನಾಗುತ್ತಾನೆ' ಎಂದು ತಮ್ಮ ಪಾತ್ರವನ್ನು ವಿವರಿಸುತ್ತಾರೆ ಧರ್ಮ. ಅಂತೂ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಧರ್ಮ ಅವರು ಸಮರ್ಥ್ ಆಗಿ ವೀಕ್ಷಕರ ಮನಸನ್ನು ಸೆಳೆಯುತ್ತಾರಾ ಎಂಬುದನ್ನು ನೋಡಬೇಕು.

Intro:Body:ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ ಹೊಚ್ಚ ಹಿಸ ಧಾರಾವಾಹಿಗಳ ಪೈಕಿ ಇಂತಿ ನಿಮ್ಮ ಆಶಾ ಧಾರಾವಾಹಿಯೂ ಒಂದು. ವಿಭಿನ್ನ ಶೈಲಿಯ ಕಥಾ ಹಂದರವನ್ನು ಹೊಂದಿರುವ ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಆಶಾ ಪಾತ್ರಧಾರಿಯಾಗಿ ಸಂಗೀತಾ ಅನಿಲ್ ಕಾಣಿಸಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಆಶಾ ಅವರ ಪತಿಯಾಗಿ ಹಿರಿತೆರೆ ಕಲಾವಿದ ಧರ್ಮ ಅವರು ನಟಿಸುತ್ತಿದ್ದಾರೆ.

ಆಶಾ ಪತಿ ಸಮರ್ಥ್ ಪಾತ್ರಧಾರಿಯಾಗಿ ಧರ್ಮ ಅವರು ಅಭಿನಯಿಸುತ್ತಿದ್ದು ಸುಮಾರು ಇಪ್ಪತ್ತು ವರುಷಗಳ ಸುದೀರ್ಘ ಗ್ಯಾಪ್ ನ ಬಳಿಕ ಅವರು ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಧರ್ಮ ಅವರಿಗೆ ಸಂತಸವನ್ನು ನೀಡಿದ್ದು ಸ್ವತಃ ಅವರೇ ಈ ವಿಚಾರವನ್ನು ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ.

"ಇಂತಿ ನಿಮ್ಮ ಆಶಾ ಧಾರಾವಾಹಿಯ ಮೂಲಕ ನಾನು ಮತ್ತೊಮ್ಮೆ ಕಿರುತೆರೆಯಲ್ಲಿ ನಟಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ ನಾನು ಬಣ್ಣದ ಪಯಣ ಆರಂಭಿಸಿದ್ದು ಕಿರುತೆರೆಯಿಂದಲೇ! ಇದೀಗ ಮಗದೊಮ್ಮೆ ಕಿರುತೆರೆಯಲ್ಲಿ ಅಭಿನಯಿಸುತ್ತಿರುವುದಕ್ಕೆ ನನಗೆ ಬಹಳ ಸಂತಸವಾಗುತ್ತಿದೆ. ಒಂದರ್ಥದಲ್ಲಿ ನಾನು ನನ್ನ ಮೂಲ ಮನೆಗೆ ಮರಳಿ ಬಂದ ಅನುಭವ ನನಗಾಗುತ್ತಿದೆ" ಎಂದು ಹೇಳುತ್ತಾರೆ ಧರ್ಮ.

"ನಾನು ಈ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಗೆ ಇಬ್ಬರು ಮಕ್ಕಳು. ನೆಗೆಟಿವ್ ಶೇಡ್ ನಲ್ಲಿ ನನ್ನ ಪಾತ್ರವಿದೆ. ಅಂದರೆ ಈ ಧಾರಾವಾಹಿಯಲ್ಲಿ ನಾನು ಹೆಂಡತಿಗೆ ಗೌರವ ಕೊಡುವುದೇ ಇಲ್ಲ. ಅವಳು ನನಗೋಸ್ಕರ, ಮನೆಗೋಸ್ಕರ ಸಾಕಷ್ಟು ದುಡಿಯುತ್ತಾಳೆ. ಫ್ರೋಫೆಶನಲ್ ನಲ್ಲಿ ಸಾಕಷ್ಟು ಒಳ್ಳೆಯ ಹೆಸರನ್ನು ಪಡೆದಿರುವ ಸಮರ್ಥ್ ತನ್ನ ಹೆಂಡತಿಯ ಬೇಕು ಬೇಡ ಗಳನ್ನು ಪೂರೈಸುವಲ್ಲಿ ವಿಫಲನಾಗುತ್ತಾನೆ" ಎಂದು ತಮ್ಮ ಪಾತ್ರವನ್ನು ವಿವರಿಸುತ್ತಾರೆ ಧರ್ಮ.

ಅಂತೂ ಕಿರಿತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಧರ್ಮ ಅವರು ಸಮರ್ಥ್ ಆಗಿ ವೀಕ್ಷಕರ ಮನ ಸೆಳೆಯುವುದಂತೂ ಸತ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.