ETV Bharat / sitara

ರಗಡ್​​ ಫೋಟೋಶೂಟ್ ಮೂಲಕ ಮಿಂಚುತ್ತಿರುವ ಚಂದನ್ ಕುಮಾರ್ - Lakshmi Baramma fame Chandankumar

ಬಿಗ್​ಬಾಸ್, ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಹೊಸ ಪೋಟೋಶೂಟ್ ಮಾಡಿಸಿದ್ದಾರೆ. ಇವರ ಹೊಸ ಪೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Actor Chandan new Photo shoot
ಚಂದನ್ ಹೊಸ ಫೋಟೋಶೂಟ್
author img

By

Published : Jun 19, 2020, 4:17 PM IST

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ಹೆಸರಾದ ಚಂದನ್ ಕುಮಾರ್ ನಿಮಗೆ ನೆನಪಿರಬಹುದು. 2011 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಚಂದನ್ ವೀಕ್ಷಕರಿಗೆ ಪರಿಚಯವಾದರು.

Actor Chandan new Photo shoot
ಚಂದನ್ ಹೊಸ ಫೋಟೋಶೂಟ್

ಚಂದನ್ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದು ಚಂದು ರಗಡ್​ ಲುಕ್ಕನ್ನು ಜನರು ಮೆಚ್ಚಿದ್ದಾರೆ. ಇವರ ಹೊಸ ಫೋಟೋಗಳನ್ನು ನೋಡಿ ಹುಡುಗಿಯರು ಕೂಡಾ ಫಿದಾ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಹೊಸ ಫೋಟೋಗಳನ್ನು ಅಪ್​​ಲೋಡ್ ಮಾಡಿದ್ದಾರೆ.

Actor Chandan new Photo shoot
ಚಂದನ್ ಹೊಸ ಫೋಟೋಶೂಟ್

ಚಂದನ್ ಮೊದಲು ನಟಿಸಿದ್ದು 'ರಾಧಾ ಕಲ್ಯಾಣ ' ಧಾರಾವಾಹಿಯಲ್ಲಿ. ಇದರಲ್ಲಿ ನಾಯಕ ವಿಶು ಆಗಿ ಅಭಿನಯಿಸಿದ ಚಂದನ್, ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸಿದ್ದ ಚಂದನ್ , ಸೀಸನ್ 3 ರ ಬಿಗ್​​ಬಾಸ್​​​ಗೆ ಹೋದ ನಂತರ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಸ್ಟಾರ್ ಸುವರ್ಣ ವಾಹಿನಿಯ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಕೂಡಾ ಚಂದನ್ ಪರಮಶಿವನ ಭಕ್ತ ಮಹಾಶಂಕರನಾಗಿ ನಟಿಸಿದ್ದಾರೆ.

Actor Chandan new Photo shoot
ಚಂದನ್ ಹೊಸ ಫೋಟೋಶೂಟ್

ಚಂದನ್ ತೆಲುಗು ಕಿರುತೆರೆಯಲ್ಲೂ ಅಭಿನಯಿಸುತ್ತಿದ್ದಾರೆ. 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಬಾಲರಾಜು ಆಗಿ ನಟಿಸುತ್ತಿರುವ ಚಂದನ್, ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಮಿಂಚಿದ್ದಾರೆ. ಲೈಫು ಇಷ್ಟೇನೆ, ಪರಿಣಯ, ಕಟ್ಟೆ, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023 ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇವರು ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ್ದು 'ಪ್ರೇಮಬರಹ' ಚಿತ್ರದಲ್ಲಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.