ETV Bharat / sitara

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು..ಗರ್ಭಿಣಿ ಆನೆ ಸಾವಿಗೆ ಅನಿರುದ್ಧ್ ಬೇಸರ - Pregnant Elephant murder in Kerala

ಸ್ಫೋಟಕ ಇರಿಸಿದ ಹಣ್ಣು ತಿಂದು ಸಾವನ್ನಪ್ಪಿದ ಗರ್ಭಿಣಿ ಆನೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್​​​​​ಬುಕ್​​​ನಲ್ಲಿ ಪ್ರತಿಕ್ರಿಯಿಸಿರುವ ಅವರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Actor Anirudh
ಗರ್ಭಿಣಿ ಆನೆ ಸಾವಿಗೆ ಅನಿರುಧ್ ಬೇಸರ
author img

By

Published : Jun 5, 2020, 12:43 PM IST

Updated : Jun 5, 2020, 4:24 PM IST

ಕಳೆದ 2 ದಿನಗಳಿಂದ ಕೇರಳ ಮಣಪ್ಪುರಂನಲ್ಲಿ ಸ್ಫೋಟಕವಿರಿಸಿದ್ದ ಹಣ್ಣು ತಿಂದು ದುರಂತ ಸಾವನ್ನಪ್ಪಿದ ಗರ್ಭಿಣಿ ಆನೆ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಎಲ್ಲರೂ ಈ ಘಟನೆಗೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರು ಸೇರಿ ಸೆಲಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಇನ್ನು ನಿನ್ನೆಯಷ್ಟೇ ಸ್ಯಾಂಡಲ್​ವುಡ್​​​ ನಟ ಶಿವರಾಜ್​​ಕುಮಾರ್, ಆನೆ ಸಾವಿಗೆ ತಮ್ಮ ಟ್ಟಿಟ್ಟರ್​​ನಲ್ಲಿ ಬೇಸರ ವ್ಯಕ್ತಪಡಿಸಿದ್ದರು, ನಟಿ, ಮಾಜಿ ಸಂಸದೆ ರಮ್ಯಾ ಆನೆ ಕೊಲೆಗೈದ ಪಾಪಿಗಳಿಗೆ ಶಿಕ್ಷೆ ಆಗಲು ಪಿಟಿಷನ್​​​​​ಗೆ ಸಹಿ ಹಾಕುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಕಿರುತೆರೆ ನಟ-ನಟಿಯರೂ ಕೂಡಾ ಈ ಘಟನೆಯನ್ನು ಖಂಡಿಸಿದ್ದರು.

ಈಗ 'ಜೊತೆಜೊತೆಯಲಿ' ಖ್ಯಾತಿಯ ಅನಿರುದ್ಧ್ ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್​​​​ಬುಕ್​​​ನಲ್ಲಿ ಬೇಸರ ವ್ಯಕ್ತಪಡಿಸಿರುವ ಅನಿರುದ್ಧ್ 'ಆನೆ ಸಾವು ಪ್ರಕರಣ ಸಂಕಟ ಹಾಗೂ ನೋವು ತಂದಿದೆ. ಅಪರಾಧ ಸಾಬೀತಾದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಈ ಭೂಮಿ ಮೇಲೆ ನಮ್ಮಷ್ಟೇ ಬದುಕುವ ಅಧಿಕಾರ ಎಲ್ಲಾ ಜೀವಿಗಳಿಗೂ ಇದೆ. ಪ್ರೀತಿ, ಪ್ರೇಮ, ಮಮತೆ, ವಿಶ್ವಾಸ, ಸ್ನೇಹ ಮಾತ್ರ ಸಿಗಬೇಕು. ಇಂತಹ ಘಟನೆಗಳು ಮರುಕಳಿಸಬಾರದು' ಎಂದು ಮರುಗಿದ್ದಾರೆ.

​​​​​,

Last Updated : Jun 5, 2020, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.