ETV Bharat / sitara

ಅಂಬಿ ಅಂಕಲ್​​​ನನ್ನು ನೆನೆದ ಗಟ್ಟಿಮೇಳ ಖ್ಯಾತಿಯ ಅಭಿಷೇಕ್ ದಾಸ್ - Abhishek das remind ambareesh

ರೆಬಲ್ ಸ್ಟಾರ್ ಅಂಬರೀಶ್ ಅವರೊಂದಿಗೆ ನಟಿಸಿರುವುದು ನನ್ನ ಅದೃಷ್ಟ, ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಿರುತೆರೆ ನಟ ಅಭಿಷೇಕ್ ದಾಸ್ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

Abhishek das reminds Rebel star Ambareesh
ಅಭಿಷೇಕ್ ದಾಸ್
author img

By

Published : Sep 29, 2020, 2:53 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಠ ಆಗಿ ಅಭಿನಯಿಸುತ್ತಿರುವ ನಟ ಅಭಿಷೇಕ್ ದಾಸ್, ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಂತ ಸ್ವತ: ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Abhishek das reminds Rebel star Ambareesh
ಕಿರುತೆರೆ ನಟ ಅಭಿಷೇಕ್ ದಾಸ್

ರೆಬಲ್ ಸ್ಟಾರ್ ಜೊತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ನಟಿಸಿದ್ದ ಅಭಿಷೇಕ್, ಆ ಚಿತ್ರದಲ್ಲಿ ಅಂಬಿ ಜೊತೆ ಇರುವ ಫೋಟೋವೊಂದರನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. "ಅಂಬಿ ನಿಂಗ್​​​ ವಯಸ್ಸಾಯ್ತೋ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಯ್ತು. ಸಿನಿಮಾ ಬಿಡುಗಡೆಯಾಗಿ 2 ವರ್ಷಗಳಾಯ್ತು ಎನ್ನುವುದು ಇಲ್ಲಿ ವಿಷಯವಲ್ಲ. ನಾನು ಇಂತಹ ಲೆಜೆಂಡ್ ಜೊತೆಗೆ ನಟಿಸಿದ್ದೇನೆ‌ ಎಂಬುದೇ ಸಂತಸದ ಹಾಗೂ ಮುಖ್ಯವಾದ ವಿಚಾರ. ಅಷ್ಟೇ ಅಲ್ಲ, ಈ ಫೋಟೋದಲ್ಲಿ ಹಲವು ನೆನಪುಗಳಿವೆ. ಅಂಬಿ ಅಂಕಲ್ ನನಗೆ ಆಶೀರ್ವದಿಸಿ " ಎಂದು ಅಭಿಷೇಕ್ ದಾಸ್ ಬರೆದುಕೊಂಡಿದ್ದಾರೆ.

ಗಟ್ಟಿಮೇಳ ಖ್ಯಾತಿಯ ವಿಕ್ರಾಂತ್ ವಸಿಷ್ಠ

'ಅಂಬಿ ನಿಂಗ್ ವಯಸ್ಸಾಯ್ತೋ' ಅಂಬರೀಶ್​​​​​​​​ ಅಭಿನಯದ ಕೊನೆಯ ಸಿನಿಮಾವಾಗಿತ್ತು. ಇದರಲ್ಲಿ ಅಭಿಷೇಕ್ ಕೂಡಾ ಅಂಬರೀಶ್ ಜೊತೆ ನಟಿಸಿದ್ದರು. ಸದ್ಯಕ್ಕೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಠ ಆಗಿ ಮನೆ ಮಾತಾಗಿರುವ ಅಭಿಷೇಕ್, ಉದಯ ವಾಹಿನಿಯ 'ಸರಯೂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನಾ ರಂಗಕ್ಕೆ ಕಾಲಿಟ್ಟರು.

ಇತ್ತೀಚೆಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ದಾಸ್ ಅವರನ್ನು ಐಎಸ್​​ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದರೆ ಕೆಲವರು ಇದನ್ನೇ ಮುಂದಿಟ್ಟುಕೊಂಡು ನನ್ನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಭಿಷೇಕ್ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.