ಅತ್ಯಾಧುನಿಕ ಸಿನಿಮಾ ತಂತ್ರಜ್ಞಾನಗಳನ್ನು ಹೊಂದಿರುವ ಈ ಮಲ್ಟಿಪ್ಲೆಕ್ಸ್, ತೀಕ್ಷ್ಣ ದೃಶ್ಯಗಳಿಗಾಗಿ ಸುಧಾರಿತ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಮತ್ತು ವೋಲ್ಫೋನಿ ಸಿಸ್ಟಮ್ಸ್‌ನ 3ಡಿ ಪ್ರಾಯೋಜಿತ ಸ್ಕ್ರೀನ್ ಹೊಂದಿದೆ. ಈ ಮಲ್ಟಿಫ್ಲೆಕ್ಸ್ ಕಾಗದ ರಹಿತವಾಗಿದ್ದು, ಸಾಕಷ್ಟು ಗ್ರಾಹಕ ಸ್ನೇಹಿ ಡಿಜಿಟಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರೇಕ್ಷಕರು ಉತ್ಸಾಹಭರಿತ ರಿಯಾಯಿತಿ ಕೌಂಟರ್‌ಗಳ ಮೂಲಕ ಐನಾಕ್ಸ್ ರೋಮಾಂಚಕಾರಿ ಆತಿಥ್ಯ ಅನುಭವಿಸಬಹುದು.
ಈಗಾಗಲೇ ಬೆಂಗಳೂರಿನ ಮ್ಯಾಗ್ರೆಥ್ ರಸ್ತೆಯಲ್ಲಿರುವ ಗರುಡಾ ಮಾಲ್, ಜಯನಗರದಲ್ಲಿರುವ ಗರುಡಾ ಸ್ವಾಗತ್ ಮಾಲ್, ವೈಟ್ ಫೀಲ್ಡ್‌ನಲ್ಲಿರುವ ಫೋರಂ ನೈಬರ್‌ಹುಡ್ ಮಾಲ್, ಜೆ.ಪಿ ನಗರದಲ್ಲಿರುವ ಸೆಂಟ್ರಲ್ ಮಾಲ್, ಹಲಸೂರಿನಲ್ಲಿರುವ ಲಿಡೋ ಮಾಲ್, ಮಲ್ಲೇಶ್ವರಂನಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್, ಯಲಹಂಕಾದಲ್ಲಿರುವ ಆರ್.ಎಂ.ಜೆಡ್ ಗ್ಯಾಲೇರಿಯಾ ಮಾಲ್ ಮತ್ತು ಬ್ರೂಕ್ ಫೀಲ್ಡ್‌ನಲ್ಲಿರುವ ಬ್ರೂಕ್ ಫೀಲ್ಡ್ ಮಾಲ್‌ಗಳಲ್ಲಿ ಐನಾಕ್ಸ್ನ 8 ಮಲ್ಟಿಪ್ಲೆಕ್ಸ್ ಕಾರ್ಯನಿರ್ವಹಿಸುತ್ತಿವೆ. ಸದ್ಯ 9ನೇ ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿದೆ. ಈ ಮೂಲಕ ಐನಾಕ್ಸ್ ಕರ್ನಾಟಕ ರಾಜ್ಯದಲ್ಲಿ ಒಟ್ಟು 45 ಸ್ಕ್ರೀನ್‌ಗಳೊಂದಿಗೆ 12 ಮಲ್ಟಿಪ್ಲೆಕ್ಸ್ ಹೊಂದಿದಂತಾಗುತ್ತದೆ.