ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ಜನಪ್ರಿಯ ಧಾರಾವಾಹಿಗಳ ಮಹಾಸಂಗಮ ಆರಂಭವಾಗಲಿದ್ದು ಕಿರುತೆರೆಪ್ರಿಯರಿಗೆ ಈ ವಾರವಿಡೀ ಮನರಂಜನೆಯ ಮಹಾಪೂರ ಗ್ಯಾರಂಟಿ. ಎರಡು ಧಾರಾವಾಹಿಗಳ ಸಂಗಮ ಎಂದರೆ ಧಾರಾವಾಹಿಪ್ರಿಯರು ಆ ಎಪಿಸೋಡ್ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ.
'ಮುದ್ದು ಲಕ್ಷ್ಮಿ' ಮತ್ತು 'ಪ್ರೇಮಲೋಕ' ಧಾರಾವಾಹಿಯ ಮಹಾಸಂಗಮ ಇಂದಿನಿಂದ ಫೆಬ್ರವರಿ 1 ವರೆಗೆ ಪ್ರತಿರಾತ್ರಿ 7.30 - 8.30 ರ ವರೆಗೆ ನಡೆಯಲಿದೆ. ಮುದ್ದು ಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ಮತ್ತು ಧೃವಂತ್ ಬೇರೆ ಬೇರೆಯಾಗಿ ಅದೆಷ್ಟು ಸಮಯಗಳಾಗಿದೆ. ಸಣ್ಣ ಪುಟ್ಟ ಮನಸ್ತಾಪಗಳಿಂದ ದೂರವಾಗಿರುವ ಈ ಜೋಡಿ ಇದೀಗ ಒಂದಾಗುವ ಸಮಯವೇನೋ ಬರುತ್ತಿದೆ. ಆದರೆ ಅದಕ್ಕೆ ತಡೆಯೊಡುತ್ತಿದ್ದಾಳೆ ಶಾರ್ವರಿ. ಮುದ್ದುಲಕ್ಷ್ಮಿ ಮತ್ತು ಧೃವಂತ್ ಒಂದಾಗುತ್ತಿರುವುದನ್ನು ಸಹಿಸದ ಶಾರ್ವರಿ, ಲಕ್ಷ್ಮಿ ಮಗಳು ದೃಷ್ಟಿ ಯನ್ನು ಕಿಡ್ನಾಪ್ ಮಾಡಿಸುತ್ತಾಳೆ. ಮಾತ್ರವಲ್ಲ ಲಕ್ಷ್ಮಿಯನ್ನು ಬ್ಲಾಕ್ಮೇಲ್ ಮಾಡಿಸುವ ಆಕೆ ಧೃವಂತ್ ಜೊತೆಗೆ ಒಂದಾಗದಂತೆ ತಡೆಯುತ್ತಾಳೆ. ಕಿಡ್ನಾಪ್ ಆಗಿರುವ ದೃಷ್ಟಿಗೆ ಸಹಾಯ ಮಾಡಲು ಪ್ರೇಮಲೋಕದ ನಾಯಕ ಸೂರ್ಯಕಾಂತ್ ಬರುತ್ತಾನೆ. ದೃಷ್ಟಿಯನ್ನು ಕಾಪಾಡುವ ಸೂರ್ಯ, ತಾನೇ ಅಪಾಯದಲ್ಲಿ ಸಿಲುಕುತ್ತಾನಾ? ದೃಷ್ಟಿ ಮರಳಿ ಲಕ್ಷ್ಮಿಯ ಮಡಿಲು ಸೇರುತ್ತಾಳಾ? ಧೃವಂತ್ ಮತ್ತು ಮುದ್ದುಲಕ್ಷ್ಮಿ ಮತ್ತೆ ಒಂದಾಗುತ್ತಾರಾ? ಇವರಿಬ್ಬರನ್ನು ಒಂದು ಮಾಡುವಲ್ಲಿ ಪ್ರೇಮಲೋಕದ ಪ್ರೇರಣಾ ಮತ್ತು ಸೂರ್ಯ ಪಾತ್ರ ಎಷ್ಟಿದೆ? ಕೊನೆಗೆ ಗೆಲುವು ಯಾರ ಪಾಲಾಗುತ್ತದೆ..? ಈ ಎಲ್ಲಾ ಪ್ರಶ್ನೆಗೆ ಮಹಾಸಂಗಮದಲ್ಲಿ ಉತ್ತರ ದೊರೆಯುತ್ತದೆ.
- " class="align-text-top noRightClick twitterSection" data="
">