ETV Bharat / sitara

ಬಾಲ್ಯದ ಕ್ರಶ್ ಜೊತೆ ತಮಿಳಿನಲ್ಲಿ ನಟಿಸಲು ಮುಂದಾದರಾ ರಶ್ಮಿಕಾ ಮಂದಣ್ಣ?

author img

By

Published : Jun 25, 2020, 10:36 AM IST

Updated : Jun 25, 2020, 10:54 AM IST

'ಗೀತಾ ಗೋವಿಂದಂ' ನಿಂದ ಜಾಕ್ ಪಾಟ್ ಹೊಡೆದ ನಂತರ ನಟಿ ರಶ್ಮಿಕಾ ಮಂದಣ್ಣಗೆ ಅನೇಕ ಅವಕಾಶಗಳು ದೊರೆಯುತ್ತಲೇ ಇವೆ. ಇದೀಗ ತಮಿಳು ಸೂಪರ್ ಸ್ಟಾರ್ ವಿಜಯ್ ಜೊತೆ ನಟಿಸಲು ಅವಕಾಶವೊಂದು ಒದಗಿ ಬಂದಿದೆ ಎನ್ನಲಾಗಿದೆ.

Rashmika mandanna
Rashmika mandanna

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಕನ್ನಡ, ತೆಲುಗು ಭಾಷೆಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.‌ ಸಂತಸದ ವಿಷಯ ಅಂದ್ರೆ ಸಿನಿಮಾ ವೃತ್ತಿ ಜೀವನದಲ್ಲಿ ಮತ್ತೊಂದು ದೊಡ್ಡ ಸಿನಿಮಾ ಅವರ ಪಾಲಾಗಿದೆ.

'ಗೀತಾ ಗೋವಿಂದಂ' ಇಂದ ಜಾಕ್ ಪಾಟ್ ಹೊಡೆದ ನಂತರ ವಿಜಯ್ ದೇವರಕೊಂಡ, ಮಹೇಶ್ ಬಾಬು, ನಿತಿನ್, ಅಲ್ಲೂ ಅರ್ಜುನ್ ಸಿನಿಮಾಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ ಅವರಿಗೆ ತಮಿಳು ಸಿನಿಮಾವೊಂದರಲ್ಲಿ ಅಭಿನಯಿಸಲು ಅವಕಾಶ ಬಂದಿದೆ.

ಹೌದು, ತಮಿಳು ಸೂಪರ್ ಸ್ಟಾರ್ ತಳಪತಿ ವಿಜಯ್ ಜೊತೆ ‘ಮಾಸ್ಟರ್’ ಸಿನಿಮಾದಲ್ಲಿ ಅಭಿನಯಿಸಲು ರಾಶ್ಮಿಕಾಗೆ ಆಹ್ವಾನ ಬಂದಿದೆ ಎನ್ನಲಾಗಿದೆ. ತೆಲುಗಿನ ‘ಸರಿಲೇರು ನಿಕೇವ್ವರು’ ಸಿನಿಮಾದಲ್ಲಿ ಅವರು ಅಭಿನಯ ಮಾಡಿದ ರೀತಿ ನಿರ್ದೇಶಕರಿಗೆ ಇಷ್ಟವಾದ ಹಿನ್ನೆಲೆ ಈ ಬಂಪರ್ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ವಿಜಯ್ ಅವರ ‘ಮಾಸ್ಟರ್’ ಚಿತ್ರದ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ರಶ್ಮಿಕಾ ಮಂದಣ್ಣ ಸಹ ಕೆಲವು ತಿಂಗಳುಗಳ ಹಿಂದೆ ನನ್ನ ಬಾಲ್ಯದ ಕ್ರಶ್ ವಿಜಯ್ ಎಂದು ಹೇಳಿಕೊಂಡಿದ್ದರು. ವಿಜಯ್ 64 ನೇ ಸಿನಿಮಾ ‘ತಳಪತಿ 64’ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಲೋಕೇಶ್ ನಿರ್ದೇಶನ ಮಾಡಲಿದ್ದಾರೆ.

Last Updated : Jun 25, 2020, 10:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.