ETV Bharat / sitara

ನಾಳೆ 300 ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ ಪಾಪ್ ಕಾರ್ನ್ ಮಂಕಿ ಟೈಗರ್! - ಪಾಪ್ ಕಾರ್ನ್ ಮಂಕಿ ಟೈಗರ್

ಗಾಂಧಿನಗರದಲ್ಲಿ ಕುತೂಹಲ ಹುಟ್ಟಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಶಿವರಾತ್ರಿ ಹಬ್ಬದ ಪ್ರಯುಕ್ತ ನಾಳೆ 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿದೆ.

popcorn monkey tiger
ನಾಳೆ 300 ಚಿತ್ರಮಂದಿರಗಲ್ಲಿ ಅಬ್ಬರಿಸಲಿದೆ ಪಾಪ್ ಕಾರ್ನ್ ಮಂಕಿ ಟೈಗರ್!
author img

By

Published : Feb 20, 2020, 9:10 PM IST

ಸ್ಯಾಂಡಲ್​​ವುಡ್​​ನಲ್ಲಿ ಸಖತ್​​ ಸದ್ದು ಮಾಡುತ್ತಿರುವ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಮೇಕಿಂಗ್ ಹಾಗೂ ಡಾಲಿ ಧನಂಜಯ್ ಲುಕ್​​ನಿಂದಲೇ ಗಾಂಧಿನಗರದಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರ ಶಿವರಾತ್ರಿ ಹಬ್ಬದ ಪ್ರಯುಕ್ತ ನಾಳೆ 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಡಾಲಿ ಧನಂಜಯ್​ ಅಂತಾನೇ ನೇಮ್​ ಆಗಿರುವ ಧನಂಜಯ್​​ ಸಿನಿಮಾವೊಂದು ಮೊದಲ ಬಾರಿಗೆ ಮುಂಜಾನೆ ಪ್ರದರ್ಶನ ಕಾಣುತ್ತಿದೆ. ಧನಂಜಯ ಫ್ಯಾನ್ಸ್ ಒತ್ತಾಯದ ಮೇರೆಗೆ ಜೆಪಿ ನಗರ ಸಿದ್ದೇಶ್ವರ ಥಿಯೇಟರ್​​ನಲ್ಲಿ ನಾಳೆ ಬೆಳ್ಳಗ್ಗೆ 7ಗಂಟೆಗೆ ಪಾಪ್ ಕಾರ್ನ್ ಮಂಕಿ‌ ಟೈಗರ್ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.

ಈಗಾಗಲೇ ಬೆಂಗಳೂರು, ತುಮಕೂರು, ಮೈಸೂರು, ಹಾಸನ, ಮಂಡ್ಯ, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಕೋಲಾರದ ಚಿತ್ರಮಂದಿರಗಳ ಮುಂದೆ ಧನಂಜಯ ಕಟೌಟ್​ಗಳು ರಾರಾಜಿಸುತ್ತಿವೆ. ಸಿನಿಮಾದಲ್ಲಿ ಡಾಲಿ ಜೊತೆ ನಿವೇದಿತಾ, ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ.

ಟಗರು ಚಿತ್ರಕ್ಕೆ ಟ್ರೆಂಡಿ ಸಂಗೀತ ಕೊಟ್ಟು ಕಮಾಲ್ ಮಾಡಿದ್ದ ಚರಣ್ ರಾಜ್ ಈ ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾಕ್ಕೆ ಶೇಖರ್ ಛಾಯಾಗ್ರಹಣವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.