ETV Bharat / sitara

ಪ್ರೇಕ್ಷಕರ ಮನತಣಿಸಲು ಬರುತ್ತಿದೆ 'ಸನ್‌ ಆಫ್‌ ಸಾವಿತ್ರಮ್ಮ' - ಸನ್ ಆಫ್ ಸಾವಿತ್ರಮ್ಮ ಧಾರಾವಾಹಿ

ತಾಯಿ ಮಗನ ಸಂಬಂಧವನ್ನು ತಿಳಿಸಿ ಕೊಡಲು ಬರುತ್ತಿರುವ 'ಸನ್ ಆಫ್ ಸಾವಿತ್ರಮ್ಮ' ಧಾರಾವಾಹಿ ಇಂದಿನಿಂದ ನಿಮ್ಮ ನೆಚ್ಚಿನ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸೋಮವಾರ ದಿಂದ ಶುಕ್ರವಾರದ ವರೆಗೆ ಪ್ರತಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.

ಸನ್ ಆಫ್ ಸಾವಿತ್ರಮ್ಮ
ಸನ್ ಆಫ್ ಸಾವಿತ್ರಮ್ಮ
author img

By

Published : Aug 17, 2020, 10:32 AM IST

ತೆಲುಗಿನ ಜನಪ್ರಿಯ ಧಾರಾವಾಹಿ 'ಸಾವಿತ್ರಮ್ಮ ಗಾರಿ ಅಬ್ಬಾಯಿ' ಇದೀಗ ಕನ್ನಡಕ್ಕೆ ಡಬ್ ಆಗುತ್ತಿರುವ ವಿಚಾರ ಕಿರುತೆರೆ ಪ್ರಿಯರಿಗೆ ತಿಳಿದೇ ಇದೆ. "ಸನ್ ಆಫ್ ಸಾವಿತ್ರಮ್ಮ" ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿರುವ ಈ ಧಾರಾವಾಹಿ ಇಂದಿನಿಂದ ನಿಮ್ಮ ನೆಚ್ಚಿನ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸೋಮವಾರ ದಿಂದ ಶುಕ್ರವಾರದ ವರೆಗೆ ಪ್ರತಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ನಟ ಚಂದನ್ ಕುಮಾರ್, ನಾಯಕ ಬಾಲರಾಜ್ ಆಗಿ ಕಾಣಿಸಿಕೊಂಡಿದ್ದಾರೆ. ಚಂದನ್ ತಮ್ಮ ಸೀರಿಯಲ್ ಕೆರಿಯರ್​​​​ನಲ್ಲಿ ಇದೇ ಮೊದಲ ಬಾರಿಗೆ ರೆಸ್ಲರ್ ಲುಕ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ನಟಿ ಆಯೆಷಾ, ನಂದಿನಿ ಆಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ತೆಲುಗಿನ ಹಿರಿಯ ನಟಿ ಹರಿತ, ಸಾವಿತ್ರಮ್ಮ ಪಾತ್ರ ಮಾಡಿದ್ದಾರೆ. ಒಟ್ಟಿನಲ್ಲಿ 'ಸನ್ ಆಫ್ ಸಾವಿತ್ರಮ್ಮ' ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ನವಿರಾದ ಪ್ರೇಮ ಕಥೆಯನ್ನು ಹೊಂದಿದೆ.

ಹಲವು ಸಂಚಿಕೆಗಳ ನಂತರ ಆಯೆಷಾ ನಿರ್ವಹಿಸುತ್ತಿದ್ದ ನಂದಿನಿ ಪಾತ್ರದಲ್ಲಿ ಮತ್ತೋರ್ವ ಕನ್ನಡತಿ, ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಖ್ಯಾತಿಯ ಸುಪ್ರಿತಾ ಸತ್ಯನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ನಂದಿನಿಗೆ ಅಪಘಾತವಾಗಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಹಿನ್ನೆಲೆ ಸುಪ್ರಿತಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.