'ಮಂಗಳ ಗೌರಿ ಮದುವೆ' ರಾಜೀವನ ಬಣ್ಣದ ಲೋಕದ ಪಯಣಕ್ಕೆ ಎರಡು ವರ್ಷ - Gagan chinnappa two years completed in cine field
'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ರಾಜೀವನಾಗಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಕೊಡಗಿನ ಕುವರ, ಗಗನ್ ಚಿನ್ನಪ್ಪ ಅವರು ಯಶಸ್ವಿಯಾಗಿ ಬಣ್ಣದ ಲೋಕದಲ್ಲಿ ಎರಡು ವರ್ಷ ಪೂರೈಸಿದ್ದಾರೆ. ಈ ವೇಳೆ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ರಾಜೀವ್ ಆಗಿ ಅಭಿನಯಿಸುತ್ತಿರುವ ಕೊಡಗಿನ ಕುವರ, ಗಗನ್ ಚಿನ್ನಪ್ಪ ಕಿರುತೆರೆಯ ಮೂಲಕವೇ ಹೆಚ್ಚು ಜನಪ್ರಿಯ. ಮಂಗಳಗೌರಿಯ ರಾಜೀವನಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಗಗನ್ ಅವರು 'ಅಲೆಕ್ಸಾಂಡರ್' ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಆ ಮೂಲಕ ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ.
ಬಣ್ಣದ ಲೋಕಕ್ಕೆ ಬರುವ ಮೊದಲು ಗಗನ್ ಚಿನ್ನಪ್ಪ ಅವರು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂನಲ್ಲಿ ಫಾರ್ಮಲ್ ಸೂಟ್ ಧರಿಸಿರುವ ಫೋಟೋ ಹಂಚಿಕೊಂಡಿರುವ ಗಗನ್, ಕೆಲಸ ಮಾಡುತ್ತಿರುವಾಗ ತೆಗೆದ ಫೋಟೋ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ "ನಟನೆಯೇ ನನ್ನ ಫ್ಯಾಷನ್, ಅದನ್ನು ಅನುಸರಿಸುವ ಸಲುವಾಗಿಯೇ ನಾನು ಅಂದು ಕಾರ್ಪೊರೇಟ್ ಜಗತ್ತನ್ನು ತೊರೆದೆ. ಕಾರ್ಪೊರೇಟ್ ಜಗತ್ತಿಗೆ ಬೈ ಹೇಳಿ ನಟನಾ ಲೋಕಕ್ಕೆ ಹಾಯ್ ಹೇಳಿದೆ. ಇದೊಂದು ಕಲರ್ ಫುಲ್ ಜರ್ನಿ. ಈ ಪಯಣಕ್ಕೆ ಈಗ ಎರಡು ವರ್ಷ. ನಿಮ್ಮ ಪ್ರೀತಿಗೆ ಧನ್ಯವಾದ, ಪ್ರೀತಿ ಸದಾ ಹೀಗೆ ಇರಲಿ " ಎಂದಿದ್ದಾರೆ.
ಯಶಸ್ವಿಯಾಗಿ ಬಣ್ಣದ ಲೋಕದಲ್ಲಿ ಎರಡು ವರ್ಷ ಪೂರೈಸಿರುವ ಗಗನ್, 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ರಾಜೀವನಾಗಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ.