ಬಿಗ್ ಬಾಸ್ ಖ್ಯಾತಿಯ ಧನರಾಜ್ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದ್ದು, ತಮ್ಮ ಮುದ್ದು ಮಗನಿಗೆ ಸರಳವಾಗಿ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 6 ರ ಸ್ಪರ್ಧಿ ಧನರಾಜ್ ಅವರ ಪತ್ನಿ ಶಾಲಿನಿ ಇದೇ ಜುಲೈ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮುದ್ದಾದ ದಂಪತಿ ತಮ್ಮ ಕಂದಮ್ಮನಿಗೆ ಇದೀಗ ಹೆಸರಿಟ್ಟಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಧನರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. " ಈ ದಿನ ಮುದ್ದು ಕಂದ ಹೆಸರು ಪಡೆದ ಸಂಭ್ರಮದ ದಿನ, ಅದೇ ಅಗಸ್ತ್ಯ ಧನರಾಜ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಧನರಾಜ್ ತಮ್ಮ ಮಡದಿ ಶಾಲಿನಿ ಜೊತೆ ತೊಟ್ಟಿಲಿನ ಪಕ್ಕ ಕುಳಿತುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಧನರಾಜ್ ಅವರು ಎಲ್ಲಿಯೂ ತಮ್ಮ ಕಂದನ ಫೊಟೋವನ್ನು ರಿವೀಲ್ ಮಾಡಿಲ್ಲ, ಮುದ್ದು ಕಂದನ ಮುದ್ದಾದ ದರ್ಶನ ವೀಕ್ಷಕರಿಗೆ ಯಾವಾಗ ಸಿಗುತ್ತದೆ ಎಂದು ಕಾದು ನೋಡಬೇಕಾಗಿದೆ.