ETV Bharat / sitara

ಕೊರೊನಾ ಎಫೆಕ್ಟ್: 'ಸೂರ್ಯವಂಶಿ' ಸಿನಿಮಾ ಬಿಡುಗಡೆ ಮುಂದೂಡಿಕೆ - ಸೂರ್ಯವಂಶಿ ಸಿನಿಮಾ ಬಿಡುಗಡೆ ದಿನಾಂಕ

ಭಯೋತ್ಪಾದನೆಯನ್ನು ಮಟ್ಟಹಾಕುವ ಕಥೆ ಆಧಾರಿತ ಬಹು ನಿರೀಕ್ಷಿತ ಚಿತ್ರ 'ಸೂರ್ಯವಂಶಿ' ದೀಪಾವಳಿಯಲ್ಲಿ ಬಿಡುಗಡೆಯಾಗುತ್ತಿಲ್ಲ. ಇದೀಗ ಮತ್ತೆ ಚಿತ್ರ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
author img

By

Published : Oct 2, 2020, 2:28 PM IST

ಮುಂಬೈ: ಆ್ಯಕ್ಷನ್​ ಕಿಂಗ್​ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಸೂರ್ಯವಂಶಿ' ದೀಪಾವಳಿಯಲ್ಲಿ ಬಿಡುಗಡೆಯಾಗುತ್ತಿಲ್ಲ ಎಂದು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಸಿಇಒ ಸಿಬಾಶಿಶ್ ಸರ್ಕಾರ್ ತಿಳಿಸಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಸಿನಿಮಾ ಮಾರ್ಚ್ 24 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಕೊರೊನಾ ಹಿನ್ನೆಲೆ ದೀಪಾವಳಿಯಂದು ಸಹ ಸಿನಿಮಾ ಬಿಡುಗಡೆ ಮಾಡಲು ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ್ ಹೇಳಿದ್ದಾರೆ. ಇದು ಸಿನಿಮಾ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿಸಿದೆ.

ಈಗಾಗಲೇ ಟ್ರೇಲರ್ ನಲ್ಲಿ ಕೆಲವು ಡೈಲಾಗ್ ಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಅಕ್ಷಯ್‌ ಕುಮಾರ್‌ ನಾಯಕರಾಗಿ ಮಿಂಚಿದ್ದಾರೆ. ಅವರಿಗೆ ರಣವೀರ್‌ ಸಿಂಗ್‌, ಅಜಯ್‌ ದೇವಗನ್‌ ಕೂಡ ಸಾಥ್‌ ನೀಡಿದ್ದಾರೆ. ನಾಯಕಿಯಾಗಿ ಕತ್ರಿನಾ ಕೈಫ್‌ ನಟಿಸಿದ್ದು, ಚಿತ್ರದಲ್ಲಿ ಆ್ಯಕ್ಷನ್ ಅಬ್ಬರ ಜೋರಾಗಿದೆ.

ಕೊರೊನಾ ಹಿನ್ನೆಲೆ ಈಗಾಗಲೇ ಚಿತ್ರಮಂದಿರಗಳು ಮುಚ್ಚಿದ್ದು, ಸಂಕಷ್ಟ ಎದುರಿಸುವಂತಾಗಿದೆ. ಅಕ್ಟೋಬರ್ 15 ರಿಂದ ಮತ್ತೆ ಚಿತ್ರಮಂದಿರಗಳು ತೆರೆಯುವ ನಿರೀಕ್ಷೆಯಿದ್ದು, ಇನ್ನೂ ಖಚಿತವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.