ಬೆಂಗಳೂರು: ಕಲೆ ಅನ್ನೋದು ರಕ್ತವಾಗಿ ಬಂದಿರುತ್ತೆ ಅನ್ನೋದಕ್ಕೆ ನಾನೇ ಸಾಕ್ಷಿ. ಯಾಕೆಂದರೆ ಸಾಹೇಬ ಸಿನಿಮಾ ಮಾಡುವ ಟೈಮಲ್ಲಿ ನನಗೆ ಥೇಟ್ ನಿಮ್ಮ ಅಪ್ಪ ರವಿ ಸಾರ್ ತರ ಕಾಣುತ್ತಿಯಾ ಅಂತಾ ಹೇಳ್ತಾ ಇದ್ದರು. ಆದರೆ, ಮುಗಿಲ್ ಪೇಟೆ ಸಿನಿಮಾ ಡಬ್ಬಿಂಗ್ ಮಾಡುವಾಗ ನನಗೆ ಆ ರೀತಿ ಅನಿಸಿದ್ದು, ನಾನು ಡ್ಯಾಡಿ ತರ ಕಾಣಿಸ್ತೇನಿ ಅಂತಾ ಆಗ ಗೊತ್ತಾಯಿತ್ತು ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರಂಜನ್ ಹೇಳಿದ್ದಾರೆ.
ಮುಗಿಲ್ ಪೇಟೆ ಸಿನಿಮಾದ ಬ್ಯಾಕ್ ಬೋನ್ ಸಹೋದರ ವಿಕ್ರಮ್ ರವಿಚಂದ್ರನ್ ಹಾಗೂ ತಂಗಿ ಅಂಜು ಎಂದಿರುವ ಮನುರಂಜನ್, ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಮಾಡೋಲ್ಲ. ಯಾಕೆಂದರೆ ಮುಗಿಲ್ ಪೇಟೆ ಸಿನಿಮಾದಲ್ಲಿ ಲವರ್ ಬಾಯ್ ಆಗಿ, ಮಗನಾಗಿ, ಆಕ್ಷನ್ ಹೀರೋ ಆಗಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತೇನೆ. ಈ ಸಿನಿಮಾ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಹಾಗೂ ನನ್ನ ಫ್ಯಾನ್ಸ್‌ಗೆ ನಿರಾಸೆ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ಅನುರಂಜನ್ ಅವರು ನಟಿಸಿರುವ ಬಹು ನಿರೀಕ್ಷಿತ ಮುಗಿಲ್ ಪೇಟೆ ಸಿನಿಮಾ ಟ್ರೇಲರ್ ಹಾಗೂ ಹಾಡುಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನವೆಂಬರ್ 19ಕ್ಕೆ ಮುಗಿಲ್ ಪೇಟೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.
ಮುಗಿಲ್ ಪೇಟೆ ಕ್ಯೂಟ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಮೋಷನ್ ಇರುವ ಸಿನಿಮಾ. ಪ್ರತಿಯೊಬ್ಬ ಹುಡುಗನ ಜೀವನಕ್ಕೆ ಹತ್ತಿರವಾಗಿರುವ ವಿಷ್ಯಗಳನ್ನ ಒಳಗೊಂಡಿದ್ದು, ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್ ಹಾಗೂ ತಾರಾಮ್ಮ ಅಂತಂಹ ಹಿರಿಯ ನಟರ ಜೊತೆ ನಾನು ಅಭಿನಯಿಸಿರೋದು ನನಗೆ ಹೆಮ್ಮೆ ಇದೆ ಅಂತಾರೆ ಮನುರಂಜನ್.
ಭರತ್ ಎಸ್ ನಾವುಂದ ನಿರ್ದೇಶನದ ಮುಗಿಲ್ ಪೇಟೆ ಚಿತ್ರದ ಬಗ್ಗೆ ಮನುರಂಜನ್ ರವಿಚಂದ್ರನ್, ಹಲವಾರು ಅಚ್ಚರಿ ವಿಚಾರಗಳನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.