ETV Bharat / sitara

ಅನ್ಯಾಯದ ವಿರುದ್ಧ ಹೋರಾಡಿ ಗೆಲ್ಲುವ 'ರಂಗನಾಯಕಿ' ಮೆಚ್ಚಿದ ಪ್ರೇಕ್ಷಕ

author img

By

Published : Nov 1, 2019, 3:12 PM IST

ಅದಿತಿ ಪ್ರಭುದೇವ

'ಈಸಬೇಕು ಇದ್ದು ಜಯಿಸಬೇಕು' ಎನ್ನುತ್ತದೆ ದಾಸವಾಣಿ. ಆದರೆ, ಈಗಿನ ಪ್ರಪಂಚದಲ್ಲಿ ಜಯಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಅತ್ಯಾಚಾರಕ್ಕೆ ಒಳಗಾದ ಒಂದು ಹೆಣ್ಣು ಮಗಳು ಸಮಾಜವನ್ನು ಎದುರಿಸಿ, ಬದುಕಿ, ಜಯ ಗಳಿಸುವುದು ಕಷ್ಟದ ಮಾತು. ನೈಜ ಘಟನೆಯೊಂದರ ಸ್ಫೂರ್ತಿಯಿಂದ ತಯಾರಾದ ‘ರಂಗನಾಯಕಿ’ ಚಿತ್ರದಲ್ಲಿ ಅತ್ಯಾಚಾರಕ್ಕೆ ಗುರಿಯಾದ ನಾಯಕಿ ಸಮಾಜವನ್ನು ಎದುರಿಸಿ ನಿಲ್ಲುವ ಅಂಶಗಳನ್ನು ತೋರಿಸಲಾಗಿದೆ.

Ranganayaki movie review, ರಂಗನಾಯಕಿ ಸಿನಿಮಾ ರಿವ್ಯೂ
ಶ್ರೀನಿವಾಸ್, ಅದಿತಿ ಪ್ರಭುದೇವ

ಚಿತ್ರದಲ್ಲಿನ ಕೆಲವೊಂದು ಪ್ರಮುಖ ಅಂಶಗಳಲ್ಲಿ ದಯಾಳ್ ಪದ್ಮನಾಭನ್ ನಿಜಕ್ಕೂ ಜಾಣ್ಮೆ ಪ್ರದರ್ಶಿಸಿದ್ದಾರೆ. ಚಿತ್ರದ ಮೊದಲಾರ್ಧ ಕುಂಟುತ್ತಾ ಸಾಗುತ್ತಿದೆ ಎನಿಸಿದರೂ, ದ್ವಿತೀಯಾರ್ಧದಲ್ಲಿ ಬೆಚ್ಚಿ ಬೀಳಿಸುವ ಘಟನೆಗಳು, ಕೆಲವು ಅನಿರೀಕ್ಷಿತ ಘಟನೆಗಳ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿ ತುದಿಗೆ ತಂದು ಕೂರಿಸುತ್ತದೆ. ಚುರುಕಿನಿಂದ, ಯಾವಾಗಲೂ ಚಟುವಟಿಕೆಯಿಂದ ಇರುವ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುವ 'ರಂಗನಾಯಕಿ' (ಅದಿತಿ ಪ್ರಭುದೇವ) ಎಂಬ ಹುಡುಗಿಯೊಬ್ಬಳ ಕಥೆ ಇದು. ಪಕ್ಕದ ಅಪಾರ್ಟ್​ಮೆಂಟ್​​​ನಲ್ಲಿ ವಾಸಿಸುವ ನಾಲ್ವರು ಯುವಕರು ಕೂಡಾ ಆ ಹುಡುಗಿಯನ್ನು ಸಿಸ್ಟರ್ ಎಂದು ಕರೆದೇ ಮಾತನಾಡಿಸುತ್ತಾರೆ. ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುವ ನಾಯಕಿಯನ್ನು ಮಾಧವ ಎಂಬಾತ ಇಷ್ಟಪಟ್ಟು ಆಕೆ ಒಪ್ಪಿಗೆ ಪಡೆದು ಮದುವೆಯಾಗಲು ನಿಶ್ಚಯಿಸುತ್ತಾನೆ.

Aditi prabhudeva
ಅದಿತಿ ಪ್ರಭುದೇವ

ಎಲ್ಲ ಸುಖಮಯವಾಗಿದೆ ಅಂದುಕೊಳ್ಳುವಷ್ಟರಲ್ಲಿ ರಂಗನಾಯಕಿಯನ್ನು ಒಮ್ಮೆ ನಾಲ್ವರು ಹುಡುಗರು ಪಾರ್ಟಿಗೆ ಆಹ್ವಾನಿಸುತ್ತಾರೆ. ಆದರೆ, ಅಲ್ಲಿ ಮತ್ತು ಬೆರೆಸಿದ ಜ್ಯೂಸ್ ಕುಡಿದು ಆ ನಾಲ್ವರಿಂದ ಆಕೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ನಂತರ 'ರಂಗನಾಯಕಿ' ಹೇಗೆ ಪೊಲೀಸರ ಮೊರೆ ಹೋಗುತ್ತಾಳೆ. ಆಕೆಗೆ ನ್ಯಾಯ ದೊರೆಯುವುದೇ...? ಆ ನಾಲ್ವರು ಯುವಕರಿಗೆ ಶಿಕ್ಷೆ ಆಗುವುದೇ..? ಮದುವೆ ನಿಶ್ಚಯವಾದ ಹುಡುಗನೊಂದಿಗೆ ರಂಗನಾಯಕಿ ಮದುವೆಯಾಗುವುದೇ..? ಇವೆಲ್ಲ ವಿಷಯ ತಿಳಿಯಲು ನೀವು ಸಿನಿಮಾ ನೋಡಬೇಕು.

Ranganayaki movie review updates, ರಂಗನಾಯಕಿ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕರು
ತ್ರಿವಿಕ್ರಮ್ ಜೊತೆ ಅದಿತಿ

ಇನ್ನು ಚಿತ್ರದಲ್ಲಿ 'ರಂಗನಾಯಕಿ' ಆಗಿ ಅದಿತಿ ಪ್ರಭುದೇವ ಪಕ್ವವಾದ ಅಭಿನಯ ನೀಡಿದ್ದಾರೆ. ಅವರ ಅಭಿನಯಕ್ಕೆ ಪ್ರಶಸ್ತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಇದು ಅದಿತಿ ವೃತ್ತಿ ಜೀವನದ ಬಹಳ ಚಾಲೆಂಜಿಂಗ್ ಹಾಗೂ ಬೆಸ್ಟ್​ ಪಾತ್ರ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಶ್ರೀನಿವಾಸ್ (ಕೃಷ್ಣಮೂರ್ತಿ) ಹಾಗೂ ತ್ರಿವಿಕ್ರಮ್ (ಮಾಧವ) ನಟನೆ ಕೂಡಾ ಚೆನ್ನಾಗಿದೆ. ಪೊಲೀಸ್ ಅಧಿಕಾರಿಯಾಗಿ ಚಂದ್ರಚೂಡ್, ನ್ಯಾಯಾಧೀಶರಾಗಿ ಸುಚೇಂದ್ರ ಪ್ರಸಾದ್ ತೂಕದ ಅಭಿನಯ ನೀಡಿದ್ದಾರೆ. ಖದ್ರಿ ಮಣಿಕಾಂತ್ ಅವರ ಸಂಗೀತದಲ್ಲಿ ಹಳೆಯ ಶಾಸ್ತ್ರೀಯ ಗೀತೆಗಳು ಬಹಳ ಮಾಧುರ್ಯವಾಗಿ ಮೂಡಿ ಬಂದಿದೆ. ಛಾಯಾಗ್ರಾಹಕ ರಾಕೇಶ್ ಚಾಕಚಕ್ಯತೆಯನ್ನು ಭೇಷ್ ಎನ್ನಲೇಬೇಕು. ನವೀನ್ ಕೃಷ್ಣ ಅವರ ಸಂಭಾಷಣೆಯಲ್ಲಿ ಜವಾಬ್ದಾರಿಯುತ ಮಾತುಗಳು ಅಡಕವಾಗಿದೆ. ಒಟ್ಟಿನಲ್ಲಿ 'ರಂಗನಾಯಕಿ' ಒಮ್ಮೆ ಎಲ್ಲರೂ ನೋಡಲೇಬೇಕಾದಂತ ಸಿನಿಮಾ.

ರಂಗನಾಯಕಿ ಚಿತ್ರ ವಿಮರ್ಶೆ

ರಾಂಗಾದ ರಂಗನಾಯಕಿ ಮನ ಮಿಡಿಯುವ ಚಿತ್ರ!

ಅವದಿ – 117 ನಿಮಿಷ, ಕ್ಯಾಟಗರಿ – ಸೇಡಿನ ಕಥಾವಸ್ತು ರೇಟಿಂಗ್ – 3.5/5

ಚಿತ್ರ – ರಂಗನಾಯಕಿ, ನಿರ್ಮಾಪಕ – ಎಸ್ ವಿ ನಾರಾಯಣ್, ನಿರ್ದೇಶನ – ದಯಾಳ್ ಪದ್ಮನಾಭನ್, ಸಂಗೀತ – ಖದ್ರಿ ಮಣಿಕಾಂತ್, ಛಾಯಾಗ್ರಹಣ – ರಾಕೇಶ್, ತಾರಾಗಣ – ಅದಿತಿ ಪ್ರಭುದೇವ, ಎಂ ಜಿ ಶ್ರೀನಿವಾಸ್, ತ್ರಿವಿಕ್ರಮ್, ಚಂದ್ರಚೂಡ್, ಸುಚೆಂದ್ರ ಪ್ರಸಾದ್, ಶ್ರುತಿ ನಾಯಕ್, ಶಿವರಾಮಣ್ಣ ಹಾಗೂ ಇತರರು.

ಈಸಬೇಕು ಇದ್ದು ಜಯಿಸಬೇಕು ಎನ್ನುತ್ತದೆ ದಾಸವಾಣಿ. ಆದರೆ ಜಯಿಸುವುದು ಅಷ್ಟೊಂದು ಸುಲಭದ ಮಾತಲ್ಲ ಈಗಿನ ಪ್ರಪಂಚದಲ್ಲಿ. ಅದರಲ್ಲೂ ಅತ್ಯಾಚಾರ ಆದ ಹೆಣ್ಣು ಮಗಳು ಜಯಿಸುವುದು ಅಂದರೆ ಏನು ಅರ್ಥ! ಅದೃಷ್ಟವಶಾತ್ ಈ ರಂಗನಾಯಕಿ ಸಿನಿಮಾದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕೆಲಸವಿಲ್ಲ. ಕೇವಲ ನ್ಯಾಯಾಂಗ ಹಾಗೂ ಪೊಲೀಸ್ ಇಲಾಖೆ ಅಷ್ಟೇ ಹೆಣ್ಣು ಮಗಳ ಹಿಂದೆ ನಿಂತು ನ್ಯಾಯ ಒದಗಿಸಿಕೊಡುವುದು. ಇಲ್ಲಿ ನಿರ್ದೇಶಕರ ಜಾಣ್ಮೆ ಗಮನಿಸಬೇಕು. ದಯಾಳ್ ಪದ್ಮನಾಭಾನ್ ಬೇಕಂತಲೆ ಇಲ್ಲಿ ಮಾಧ್ಯಮ ರಂಗವನ್ನು ಅತಿ ದೊಡ್ಡ ರೀತಿಯಲ್ಲಿ ಹೋರಾಟ ನಡೆದರೂ ವಿಷಯವನ್ನು ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಆಗದಂತೆ ನೋಡಿಕೊಂಡಿದ್ದಾರೆ. ಅದಕ್ಕೆ ಕಾರಣ ಅತ್ಯಾಚಾರ ಮಾಡಿದವರಲ್ಲಿ ನಾಲ್ಕು ಯುವಕರಲ್ಲಿ ಒಬ್ಬ ಸಂಪಾದಕರ ಮಗ ಕೂಡ.

ಈ ರೀತಿಯ ಪ್ರಶ್ನಿಸಬಹುದಾದ ಜಾಣ್ಮೆಯನ್ನು ದಯಾಳ್ ಪದ್ಮನಾಭನ್ ಅನೇಕ ಕಡೆ ತೋರಿದ್ದಾರೆ. ಆದರೆ ಅವರ ಉದ್ದೇಶ ಚನ್ನಾಗಿದೆ. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಒದಗಿಸುವುದು.

ನಿಜ ಜೀವನದಲ್ಲಿ ನಡೆದ ಘಟನೆ ದಯಾಳ್ ಪದ್ಮನಾಭನ್ ಅವರ ರಂಗನಾಯಕಿ ಚಿತ್ರಕ್ಕೆ ಸ್ಪೂರ್ತಿ. ಆದರೆ ಅತ್ಯಾಚಾರ ಆದ ಮೇಲೆ ಅದು ಸುದ್ದಿ ಆಗಿ ಕೆಲವರಿಗೆ ಪನಿಷ್ಮೆಂಟ್ ಆಗಿ ಆಚೆ ಬರುವುದು ಕೇಳಿದ್ದೇವೆ. ಆದರೆ ಇಲ್ಲಿ ನಾಲ್ವರು ಯುವಕರಿಗೆ ಜೀವಾವದಿ ಶಿಕ್ಷೆ ಆಗುವಂತೆ ನಾಯಕಿ ಹೂರಡುತ್ತಾಳೆ.

ರಂಗನಾಯಕಿ ಮೊದಲಾರ್ಧ ಕುಂಟುತ್ತಾ ಸಾಗಿದರು ದ್ವಿತೀಯಾರ್ಧ ಬೆಚ್ಚಿ ಬೀಳಿಸುವ ಸಂಗತಿಗಳು ಹಾಗೂ ನೆಮ್ಮದಿಯ ನಿಟ್ಟುಸಿರು ರಾಗನಾಯಕಿ ಜೀವನದಲ್ಲಿ.

ಅದೊಂದು ಅಪಾರ್ಟ್ಮೆಂಟ್. ಅಲ್ಲಿ ರಂಗನಾಯಕಿ ಚುರುಕಿನ, ಚಟುವಟಿಕೆಯ ಹುಡುಗಿ. ಪಕ್ಕದ ಮನೆಯಲ್ಲಿ ನಾಲ್ವರು ಹುಡುಗರು ಇವಳನ್ನು ಸಿಸ್ಟರ್ ಅಂತಲೇ ಕರೆಯುತ್ತಾರೆ. ರಂಗನಾಯಕಿ ಶಾಲೆಯಲ್ಲಿ ಸಂಗೀತ ಶಿಕ್ಷಕಿ. ಶಾಲೆಯಲ್ಲಿ ರಂಗನಾಯಕಿಯನ್ನು ಇಷ್ಟ ಪಡುವವರು – ಮಾಧವ ಹಾಗೂ ಕೃಷ್ಣಮೂರ್ತಿ. ಇದರಲ್ಲಿ ಮಾಧವ ಮುಂದೆ ಬಂದು ಮದುವೆಯ ಪ್ರಸ್ತಾಪ ಒಪ್ಪಿಗೆ ಆಗುತ್ತದೆ. ಆದರೆ ರಂಗನಾಯಕಿ ಪಕ್ಕದ ಮನೆಯ ಹುಡುಗರು ಆಹ್ವಾನಿಸಿದ ಪಾರ್ಟಿಗೆ ಬಂದು ನಿಂಬೆ ಶರಬತ್ತು ಕುಡಿದು ಬೆಳಗಾಗುವುದರೊಳಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ.

ಇಲ್ಲಿಂದ ರಂಗನಾಯಕಿ ಗಟ್ಟಿ ಗಿತ್ತಿ ಆಗಿ ಪೊಲೀಸ್ ಹಾಗೂ ಕಾನೂನು ಮೊರೆ ಹೋಗುತ್ತಾಳೆ. ಅವಳಿಗೆ ಆದ ಅತ್ಯಾಚಾರದ ಧಾಖಲೆಗಲನ್ನು ಸಹ ಗುಡ್ಡೆ ಹಾಕುತ್ತಾಳೆ. ನಾನಿನ್ನೂ ವರ್ಜಿನ್ – ನಾನು ಯಾವಾಗ ಮನಸೋತು ಅರ್ಪಿಸಿಕೊಳ್ಳುತ್ತೇನೋ ಆಗ ನನ್ನ ವರ್ಜೀನಿಟಿ ಮುಗಿದಂತೆ. ಅತ್ಯಾಚಾರ ಇಂದ ನನ್ನ ವರ್ಜೀನಿಟಿ ಹಾನಿ ಆಗಿಲ್ಲ ಎಂದರು ಮಾಧವನ ಮನೆಯಲ್ಲಿ ಈಕೆಗೆ ಪ್ರೋತ್ಸಾಹ ಸಿಕ್ಕುವುದಿಲ್ಲ. ಆಗಲೇ ಇವಳ ರಕ್ಷಣೆಗೆ ಬರುವುದು ಕೃಷ್ಣಮೂರ್ತಿ.

ಪೊಲೀಸ್ ಹಾಗೂ ಕಾನೂನು ಇಲಾಖೆ ಕ್ಷಿಪ್ರ ಗತಿಯಲ್ಲಿ ಕೆಲಸ ಮಾಡುವುದು ರಂಗನಾಯಕಿಗೆ ಜಯ ಸಿಕ್ಕುವಂತೆ ಆಗುತ್ತದೆ.

ರಂಗನಾಯಕಿ ಆಗಿ ಅದಿತಿ ಪ್ರಭುದೇವ್ ಪಕ್ವವಾದ ಅಭಿನಯ. ಏರಿಳಿತಗಳನ್ನು ಬಯಸುವ ಪಾತ್ರ. ಕೆಲವು ಅವಾರ್ಡ್ ಅದಿತಿ ಪ್ರಭುದೇವ ಪಾಲಿಗೆ ಬಂದರು ಆಶ್ಚರ್ಯ ಪಡಬೇಕಿಲ್ಲ. ಅದಿತಿ ಪ್ರಭುದೇವ ಅವರ ವೃತ್ತಿ ಜೀವನದ ಬೆಸ್ಟ್ ಪಾತ್ರ. ಶ್ರೀನಿವಾಸ್ (ಕೃಷ್ಣಮೂರ್ತಿ) ಹಾಗೂ ತ್ರಿವಿಕ್ರಮ್ (ಮಾಧವ) ಪಾತ್ರಪೋಷಣೆ ಬಿಗಿಯಾಗಿದೆ. ಆದರೆ ಶ್ರೀನಿವಾಸ್ ಎಂ ಜಿ ಇಲ್ಲಿ ಮಿಂಚುವುದು ಹೆಚ್ಚು. ಚಂದ್ರಚೂಡ್ ಪೊಲೀಸ್ ಅಧಿಕಾರಿ ಆಗಿ, ನ್ಯಾಯಾಧೀಶರಾಗಿ ಸುಚೆಂದ್ರ ಪ್ರಸಾದ್ ತೂಕದ ಅಭಿನಯ ನೀಡಿದ್ದಾರೆ.

ಹಳೆಯ ಕ್ಲಾಸ್ಸಿಕಲ್ ಹಾಡುಗಳನ್ನು ಖದ್ರಿ ಮಣಿಕಾಂತ್ ಮರು ಸೃಷ್ಟಿ ಮಾಧುರ್ಯವಾಗಿದೆ. ಛಾಯಾಗ್ರಾಹಕ ರಾಕೇಶ್ ಚಕಚಕ್ಯತೆ ಬೇಷ್ ಅನ್ನಲೇಬೇಕು. ನವೀನ್ ಕೃಷ್ಣ ಅವರ ಸಂಭಾಷಣೆಯಲ್ಲಿ ಜವಾಬ್ದಾರಿಯುತ ಮಾತುಗಳು ಅಡಕವಾಗಿದೆ. ಸಂಕಲನದಲ್ಲಿ ಮೊದಲಾರ್ಧದಲ್ಲಿ ಕತ್ತರಿ ಪ್ರಯೋಗ ಬೇಕಿತ್ತು.

ರಂಗನಾಯಕಿ ರಾಂಗ್ ಆಗಿ ಸಿಡಿದೆಳುವುದು ಮಹಿಳಾ ಪ್ರಪಂಚದಲ್ಲಿ ಅಷ್ಟೇ ಅಲ್ಲೇ ಪುರುಷರು ಸಹ ಬೆಚ್ಚಿ ಬೀಳುವಂತೆ ಹೊರಡುವುದು ಈಗಿನ ಕಾಲಕ್ಕೆ ಸರಿಯಾದ ಚಿತ್ರ.

ಈ ಚಿತ್ರಕ್ಕೆ ಹಣ ಹೂಡಿದ ಎಸ್ ವಿ ನಾರಾಯಣ್ ಅವರ ಆಯ್ಕೆಯಲ್ಲಿ ತಕರಾರಿಲ್ಲ. ಇದು ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.