ETV Bharat / sitara

ಕಿಡ್ನಾಪ್​​​​ ಆದ ಪ್ರಿಯತಮೆಗಾಗಿ ಪರದಾಟ... 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ರಿವ್ಯೂ

'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'
author img

By

Published : Aug 15, 2019, 7:47 PM IST

'ಒಂದು ಮೊಟ್ಟೆ ಕಥೆ' ಖ್ಯಾತಿಯ ರಾಜ್​ ಬಿ. ಶೆಟ್ಟಿ ಅಭಿನಯದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಇಂದು ಬಿಡುಗಡೆಯಾಗಿದೆ. ಮೊಟ್ಟೆ ಕಥೆ ಸಿನಿಮಾದಲ್ಲಿ ನಾಯಕನಿಗೆ ತಲೆಯಲ್ಲಿ ಕೂದಲು ಇಲ್ಲದೆ ಮದುವೆಗೆ ಹೆಣ್ಣು ಸಿಗುವುದು ಸಮಸ್ಯೆಯಾಗಿತ್ತು. ಈ ಸಿನಿಮಾದಲ್ಲಿ ಕೂಡಾ ಅದೇ ಸಮಸ್ಯೆ ಮುಂದುವರೆದಿದೆ.

gubbi
'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'

ಸಾಫ್ಟ್​​​ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುವ ವೆಂಕಟಕೃಷ್ಣ ಗುಬ್ಬಿ (ರಾಜ್ ಬಿ.ಶೆಟ್ಟಿ)ಗೆ 1.30 ಲಕ್ಷ ಸಂಬಳ. ಆದರೆ ಯಾವ ಹುಡುಗಿ ಕೂಡಾ ಇವನಿಗೆ ಸೆಟ್ ಆಗುವುದಿಲ್ಲ. ಇವನ ಆಪ್ತ ಸ್ನೇಹಿತ ನಾಣಿ (ಸುಜಯ್ ಶಾಸ್ತ್ರಿ) ವಿಚಿತ್ರ ಸ್ವಭಾವದವನು. ಸ್ನೇಹಿತನ ಮದುವೆಗೆ ಅಡ್ಡಗಾಲು ಹಾಕುತ್ತಿರುತ್ತಾನೆ. ಆದರೆ ಅದನ್ನು ಮೀರಿ ಗುಬ್ಬಿ ಮದುವೆ ಪರ್ಪಲ್ ಪ್ರಿಯ (ಕವಿತಾ ಗೌಡ) ಜೊತೆ ನಿಶ್ಚಯ ಆಯ್ತು ಎನ್ನುವ ವೇಳೆಗೆ ಆಕೆಯ ಕಿಡ್ನಾಪ್ ಆಗುತ್ತದೆ. ರಾಬಿನ್ ಹುಡ್ (ಪ್ರಮೋದ್ ಶೆಟ್ಟಿ) ಗುಬ್ಬಿ ಪ್ರಿಯತಮೆಯನ್ನು ಅಪಹರಿಸಿರುತ್ತಾನೆ. ಆಕೆಯನ್ನು ಬಿಟ್ಟುಕಳಿಸಲು ಗುಬ್ಬಿ ಬಳಿ ಒಂದು ಷರತ್ತು ಹಾಕುತ್ತಾನೆ. ಆ ಊರಿನ ದೊಡ್ಡ ರೌಡಿ (ಶೋಭರಾಜ್) ಮಗಳನ್ನು ಗುಬ್ಬಿ ಕಿಡ್ನಾಪ್ ಮಾಡಿದರೆ, ಪರ್ಪಲ್ ಪ್ರಿಯಳನ್ನು ಬಿಡುವುದಾಗಿ ಹೇಳುತ್ತಾನೆ. ಆದರೆ ಇದು ಬಹಳ ಕಷ್ಟದ ಕೆಲಸ. ರಾಬಿನ್ ಹುಡ್ ಹೇಳಿದಂತೆ ಗುಬ್ಬಿ ರೌಡಿಯ ಮಗಳನ್ನು ಕಿಡ್ನಾಪ್ ಮಾಡುವನೇ..? ತನ್ನ ಪ್ರಿಯತಮೆಯನ್ನು ಮರಳಿ ಪಡೆಯುವನೇ ಎಂಬುದು ಚಿತ್ರದ ಕಥೆ.

kavita gowda
ಕವಿತಾ ಗೌಡ

ಮೊಟ್ಟೆಯ ಕಥೆಯಂತೆಯೇ ಈ ಸಿನಿಮಾದಲ್ಲೂ ರಾಜ್ ಬಿ. ಶೆಟ್ಟಿ ಇಮೇಜ್ ಮುಂದುವರೆದಿದೆ. ಬಹಳಷ್ಟು ಕಡೆ ಅವರ ಸಹಜತೆ, ನೇರ ಹಾಗೂ ನಿರ್ಭಯ ನಟನೆ ಇಷ್ಟ ಆಗುತ್ತದೆ. ಅಲ್ಲಲ್ಲಿ ಸ್ವಲ್ಪ ಬೇಸರ ಕೂಡಾ ಆಗುತ್ತದೆ. ಸುಜಯ್ ಶಾಸ್ತ್ರಿ ಅವರ ಕಾಮಿಡಿ ಹಾಗೂ ಗಿರಿ ಅವರ ಇನ್ಸ್​ಪೆಕ್ಟರ್ ಪಾತ್ರ ಸಹಜವಾಗಿದೆ. ಅರುಣ ಬಾಲರಾಜ್​​​​, ಮಂಜುನಾಥ್ ಹೆಗ್ಡೆ ಹಾಗೂ ಶೋಭರಾಜ್ ಚೊಕ್ಕ ಅಭಿನಯದ ನೀಡಿದ್ದಾರೆ. ನಾಯಕಿ ಕವಿತಾ ಗೌಡ ಅವರ ಪ್ರತಿಭೆಗೆ ಈ ಸಿನಿಮಾದಲ್ಲಿ ಸೂಕ್ತ ಅವಕಾಶ ದೊರೆತಿಲ್ಲ ಎನ್ನಿಸುತ್ತದೆ.

shubha
ರಾಜ್ ಬಿ. ಶೆಟ್ಟಿ, ಶುಭಾ ಪೂಂಜಾ

ಸ್ವಾಗತಮ್ ಕೃಷ್ಣ.... ಹಾಡಿನಲ್ಲಿ ಮಣಿಕಾಂತ್ ಖದ್ರಿ ಹಳೆಯ ಶಾಸ್ತ್ರೀಯ​​​ ಗೀತೆಯ ಒಂದು ತುಣುಕಿನ ಜೊತೆಗೆ ಇಂದಿನ ಫಾಸ್ಟ್ ಬೀಟ್ ಸೇರಿಸಿರುವ, ಮೂವರು ನಾಯಕಿಯರ ಜೊತೆಗಿನ ನಾಯಕನ ಡ್ಯಾನ್ಸ್ ಚೆನ್ನಾಗಿದೆ. ಸುನೀತ್ ಹಲಗೇರಿ ಛಾಯಾಗ್ರಹಣ ಕೂಡಾ ಓಕೆ. ಒಟ್ಟಿನಲ್ಲಿ ಕಾಮಿಡಿ ಪ್ರಿಯರು ಈ ಸಿನಿಮಾವನ್ನು ನೋಡಬಹುದು.

tarunya
ರಾಜ್ ಬಿ. ಶೆಟ್ಟಿ, ಕಾರುಣ್ಯ ರಾಮ್

ಗುಬ್ಬಿ ನಲುಗಿತು ಬ್ರಹ್ಮಾಸ್ತ್ರ ಗೆದ್ದಿತು!

ಅವದಿ – 143 ನಿಮಿಷ, ಕ್ಯಾಟಗರಿ – ಲವ್ ಸ್ಟೋರಿ, ರೇಟಿಂಗ್ – 3/5

ಚಿತ್ರ – ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ನಿರ್ಮಾಪಕ – ಟಿ ಆರ್ ಚಂದ್ರಶೇಖರ್, ನಿರ್ದೇಶಕ – ಸುಜಯ್ ಶಾಸ್ತ್ರೀ, ಸಂಗೀತ – ಮಣಿಕಾಂತ್ ಖದ್ರಿ, ಛಾಯಾಗ್ರಹಣ – ಸುನೀತ್ ಹಲಗೇರಿ, ತಾರಾಗಣ - ರಾಜ್ ಬಿ ಶೆಟ್ಟಿ, ಕವಿತಾ ಗೌಡ ನಾಯಕಿ, ಪ್ರಮೋದ್ ಶೆಟ್ಟಿ, ಶೋಭರಾಜ್, ಮಂಜುನಾಥ್ ಹೆಗ್ಡೆ, ಬಾಬು ಹಿರಣ್ಣಯ್ಯ, ಗಿರೀಷ್, ಶಿವಣ್ಣ, ಅರುಣ ಬಾಲರಾಜ್ ಹಾಗೂ ಇತರರು.

ನಾಯಕ ರಾಜ್ ಬಿ ಶೆಟ್ಟಿ ಅವರಿಗೆ ಅಂದು ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ತಲೆ ಮೇಲೆ ಕೂದಲು ಇಲ್ಲದೆ ಇರುವ ಸಮಸ್ಯೆ, ಇಂದು ಅವರಿಗೆ ಹೆಣ್ಣು ಸಿಗದೇ ಇರುವುದೇ ಸಮಸ್ಯೆ. ಅಂದು ಕೂಡ ಬಕ್ಕ ತಲೆಗೆ ಕನ್ಯೆ ಸಿಕ್ಕುವುದೇ ಸಮಸ್ಯೆ ಆಗಿತ್ತು. ಇಲ್ಲಿ ಅದೇ ಸಮಸ್ಯೆ ಮುಂದುವರೆದಿದೆ. ಆದರೆ ನವ ನಿರ್ದೇಶಕ ಎಲ್ಲವನ್ನೂ ಸಿಲ್ಲಿ ಕಾಮಿಡಿ ಇಂದ ನಿಧಾನ ಗತಿಯಲ್ಲಿ ಬೇಕಾದ್ದು, ಬೇಡವಾದದ್ದನ್ನು ಹೇಳುತ್ತಾ ಹೋಗುತ್ತಾರೆ. ಒಂದು ಹಂತದಲ್ಲಿ ಇವರ ಚಿತ್ರಕಥೆ ಒಬ್ಬ ಡಾಕ್ಟರ್ ಅವಶ್ಯಕತೆ ಇತ್ತು ಎನ್ನಿಸಿಬಿಡುತ್ತದೆ. ಪ್ರೇಕ್ಷಕ ಆಕಳಿಸುವುದನ್ನು ನಿರ್ದೇಶಕರು ಗಮನ ಹರಿಸಿ ಇನ್ನಷ್ಟು ಲವಲವಿಕೆಯನ್ನು ತುಂಬಬೇಕಾಗಿತ್ತು. ಇಲ್ಲಿ ಪ್ರೇಕ್ಷಕ ಗುಬ್ಬಿ ಹಾಗೂ ಅವನ ಮೇಲೆ ತಂಡದ ಬ್ರಹ್ಮಾಸ್ತ್ರ ಪ್ರಯೋಗ ಆಗಿದೆ.

ಈತ ವೆಂಕಟಕೃಷ್ಣ ಗುಬ್ಬಿ (ರಾಜ್ ಬಿ ಶೆಟ್ಟಿ). ಸಾಫ್ಟ್ ವೇರ್ ಇಂಜಿನಿಯರ್, 1 ಲಕ್ಷ 30 ಸಾವಿರ ಸಂಬಳ. ಆದರೆ ಯಾವ ಹುಡುಗಿ ಸಹ ಇವನಿಗೆ ಸೆಟ್ ಆಗುತ್ತಿಲ್ಲ. ಇವನ ಆಪ್ತ ಸ್ನೇಹಿತ ನಾಣಿ (ಸುಜೈ ಶಾಸ್ತ್ರೀ) ವಿಚಿತ್ರ ಸ್ವಭಾವದವನು. ಸ್ನೇಹಿತನ ಮದುವೆಗೆ ಅಡ್ಡಗಾಲು ಹಾಕಿಬಿಡುತ್ತಾನೆ. ಆದರೆ ಅದನ್ನು ಮೀರಿ ಗುಬ್ಬಿ (ಇವನಿಗೆ ಕ್ರಿಶ್ ಅಂತ ಕರೆದರೆ ಸತೋಷ) ಪರ್ಪಲ್ ಪ್ರಿಯ (ಕವಿತಾ ಗೌಡ) ಜೊತೆ ಮದುವೆ ಆಗಲು ನಿಶ್ಚಯ ಆಯಿತು ಅನ್ನುವ ಹೊತ್ತಿಗೆ ಆಕೆಯ ಕಿಡ್ನ್ಯಾಪ್ ಆಗುತ್ತದೆ. ಯಾರು ಪರ್ಪಲ್ ಪ್ರಿಯಾಳನ್ನು ಕಿಡ್ನ್ಯಾಪ್ ಮಾಡಿದ್ದು ಅಂತ ಇಂಟರ್ವಲ್ ನಂತರ ನೋಡಿದರೆ ರಾಬಿನ್ ಹುಡ್ ಕಾಣಿಸುತ್ತಾನೆ. ರಾಬಿನ್ ಹುಡ್ (ಪ್ರಮೋದ್ ಶೆಟ್ಟಿ) ಗುಬ್ಬಿ ಪ್ರಿಯತಮೆಯನ್ನು ಬಿಟ್ಟು ಕೊಡಬೇಕಾದರೆ ಒಂದು ಷರತ್ತು ಒಡ್ಡುತ್ತಾನೆ. ಆ ಊರಿನ ದೊಡ್ಡ ರೌಡಿ (ಶೋಭರಾಜ್) ಮಗಳನ್ನು ಕಿಡ್ನ್ಯಾಪ್ ಮಾಡಬೇಕು ಎಂದು. ಇದು ಬಹಳ ತ್ರಾಸದ ಕೆಲಸ ಆಗುತ್ತದೆ. ಇಲ್ಲಿಂದ ಗಂಟು, ಕಗ್ಗಂಟು ಸಾಗುತ್ತಾ ಹೋಗುತ್ತದೆ. ಕೊನೆಗೆ ಗುಬ್ಬಿಗೆ ಪರ್ಪಲ್ ಪ್ರಿಯ ಸಿಕ್ಕಿದಳ ಎಂಬುದು ಕ್ಲೈಮಾಕ್ಸ್.

ರಾಜ್ ಬಿ ಶೆಟ್ಟಿ ಅವರ ಇಮೇಜ್ ಈ ಚಿತ್ರದಲ್ಲಿ ಹಾಗೆ ಕಂಟಿನ್ಯೂ ಆಗಿದೆ. ಬಹಳಷ್ಟು ಕಡೆ ಅವರ ಸಹಜತೆ, ನೇರ ಹಾಗೂ ನಿರ್ಭಯ ರೀತಿ ಇಷ್ಟ ಆಗುತ್ತದೆ. ಅಲ್ಲಲ್ಲಿ ಬಹಳ ಸಿಲ್ಲಿ ಅನ್ನಿಸುವುದು ಸಹ ಇದೆ. ಸುಜೈ ಶಾಸ್ತ್ರಿ ಅವರ ಕಾಮಿಡಿ ಹಾಗೂ ಇನ್ಸ್ಪೆಕ್ಟರ್ ಪಾತ್ರದಲ್ಲಿ ಗಿರಿ ಅವರ ಅಭಿನಯ ಸಹಜವಾಗಿದೆ. ಅರುಣ ಬಾಲರಾಜ್, ಮಂಜುನಾಥ್ ಹೆಗ್ಡೆ ಹಾಗೂ ಶೋಭರಾಜ್ ಚೊಕ್ಕದಾದ ಅಭಿನಯ ನೀಡಿದ್ದಾರೆ. ನಾಯಕಿ ಕವಿತಾ ಗೌಡ ಅವರ ಪ್ರತಿಭೆಗೆ ತಕ್ಕಂತೆ ಇಲ್ಲಿ ಅವಕಾಶ ಒದಗಿಬಂದಿಲ್ಲ.

ಮಣಿಕಾಂತ್ ಖದ್ರಿ ಸ್ವಾಗತಮ್ ಕೃಷ್ಣ....ಹಳೆಯ ಕ್ಲಾಸ್ಸಿಕಲ್ ಗೀತೆ ಒಂದು ತುಣುಕಿನ ಜೊತೆಗೆ ಇಂದಿನ ಫಾಸ್ಟ್ ಬೀಟ್ ಬೆರೆಸಿ ಮೂವರು ನಾಯಕಿಯರ ನೃತ್ಯದ ಜೊತೆಗೆ ಪರ್ವಗಿಲ್ಲ. ಸುನೀತ್ ಹಲಗೇರಿ ಛಾಯಾಗ್ರಹಣ ಕೆಲಸ ಕಣ್ಣಿಗೆ ಡಿಸ್ಟರ್ಬ್ ಆಗದ ರೀತಿ ಇದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ....ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರ ಹಿಂದಿನ ಮೂರು ಸಿನಿಮಾಗಳಿಗೆ ಹೊಲಿಸಿದರೆ ಸ್ವಲ್ಪ ವೀಕ್ ಆಗಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.