ETV Bharat / sitara

ಅಪ್ಪ-ಅಮ್ಮನ ಪಡೆಯಲು ದೇವರನ್ನು ಹುಡುಕುವ ಮುಗ್ಧ ಮಗು! - ದೇವರು ಬೇಕಾಗಿದ್ದಾರೆ ಸಿನಿಮಾ ರಿವ್ಯೂ

'ದೇವರು ಬೇಕಾಗಿದ್ದಾರೆ'
author img

By

Published : Oct 12, 2019, 6:02 PM IST

ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಆ ಮಗುವೇ ದೇವರನ್ನು ಹುಡುಕಲು ಹೊರಟರೆ...? ಆ ಮುಗ್ಧತೆಯೇ 'ದೇವರು ಬೇಕಾಗಿದ್ದಾರೆ' ಚಿತ್ರದ ಜೀವಾಳ. ಕೆಂಜಾ ಚೇತನ್ ಕುಮಾರ್ ಪ್ರಥಮ ನಿರ್ದೇಶನದಲ್ಲಿ ಒಂದು ಗಮನಾರ್ಹ ವಿಚಾರವನ್ನು ಸಮಾಜದ ಮುಂದೆ ಇಟ್ಟಿದ್ದಾರೆ. ದೇಶದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಅನಾಥ ಮಕ್ಕಳು ಇದ್ದಾರೆ. ಕುಟುಂಬದಲ್ಲಿ ಎರಡನೇ ಮಗು ಬದಲು ಒಂದು ಮಗುವನ್ನು ದತ್ತು ಪಡೆದರೆ ಈ ದೇಶದಲ್ಲಿ ಅನಾಥ ಮಕ್ಕಳೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು.

ಒಂದು ಅಪಘಾತದಲ್ಲಿ 13 ವ್ಯಕ್ತಿಗಳು ಸಾವನಪ್ಪುತ್ತಾರೆ. ಆದರೆ ಅಲ್ಲಿ ಒಂದು ಹಸುಗೂಸು ಬದುಕಿ ಉಳಿಯುತ್ತದೆ. ಆ ಮಗುವನ್ನು ಹಿರಿಯರೊಬ್ಬರು (ಶಿವರಾಮ್) ತಮ್ಮ ಮನೆಯವರ ವಿರೋಧ ಕಟ್ಟಿಕೊಂಡು ಸಾಕುವ ಜವಾಬ್ದಾರಿ ಹೋರುತ್ತಾರೆ. ಆ ಮಗುವಿಗೆ ಅಪ್ಪು (ಮಾಸ್ಟರ್ ಅನೂಪ್) ಎಂದು ನಾಮಕರಣ ಮಾಡಿ ತನ್ನ ಸಿಡಿ ಅಂಗಡಿಯಲ್ಲಿ ಸಹಾಯಕ ಕಿಟ್ಟಿ ಜೊತೆ ಮಗುವಿನ ಲಾಲನೆ ಪಾಲನೆ ಮಾಡುತ್ತಾರೆ. ಮಗುವನ್ನು ಅಂಗನವಾಡಿ ಕನ್ನಡ ಶಾಲೆಗೆ ಸೇರಿಸುತ್ತಾರೆ. ಚೂಟಿ ಹುಡುಗ ಅಪ್ಪುಗೆ ಪ್ರತಿ ದಿನ ಡಾ. ರಾಜ್​ಕುಮಾರ್​ ಸಿನಿಮಾ ನೋಡುವ ಅಭ್ಯಾಸ ಆಗಿಹೋಗುತ್ತದೆ.

ಈ ಅಣ್ಣಾವ್ರು ಯಾರು, ಅವರು ಎಲ್ಲಿದ್ದಾರೆ ಎಂದು ಆ ಪುಟ್ಟ ಹುಡುಗ ಪ್ರಶ್ನೆ ಮಾಡಿದಾಗ ಅಜ್ಜ, ಅವರು ದೇವರ ಹತ್ತಿರ ಹೋಗಿದ್ದಾರೆ. ನಿನ್ನ ಅಪ್ಪ-ಅಮ್ಮ ಕೂಡಾ ದೇವರ ಹತ್ತಿರ ಹೋಗಿದ್ದಾರೆ ಎಂದು ನೀಡುವ ಉತ್ತರ ಮುಗ್ಧ ಮಗುವನ್ನು ಕಾಡುತ್ತದೆ. ಮತ್ತೊಂದು ದಿನ ‘ಭಕ್ತ ಪ್ರಹ್ಲಾದ’ ಸಿನಿಮಾ ನೋಡಿದಾಗ ಡಾ. ರಾಜ್​ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಇಬ್ಬರ ನಡುವೆ ನಡೆಯುವ 'ದೇವರು ಎಲ್ಲಿಯೂ ಇದ್ದಾನೆ' ಸಂಭಾಷಣೆ ದೃಶ್ಯ, 'ಕಂಬದಿಂದ ಉಗ್ರ ನರಸಿಂಹ ಹೊರಬರುವ ದೃಶ್ಯ' ಮಗುವನ್ನು ಬಹಳ ಕಾಡುತ್ತದೆ. ಪುನೀತ್ ರಾಜ್​​​​ಕುಮಾರ್ ಅವರನ್ನು ಸಂಪರ್ಕಿಸಿದರೆ ದೇವರು ಸಿಗುತ್ತಾರೆ. ನಂತರ ನನ್ನ ಅಪ್ಪ, ಅಮ್ಮ ಎಲ್ಲಿದ್ದಾರೆ ತಿಳಿದುಕೊಳ್ಳಬಹುದು ಎಂದು ಪುಟ್ಟ ಬಾಲಕ ಆಲೋಚಿಸುತ್ತಾನೆ.

ಕೆಲವು ದಿನಗಳ ನಂತರ ಅಪ್ಪುವನ್ನು ಸಾಕಿ ಸಲಹಿದ ಅಜ್ಜ ಸಾವನ್ನಪ್ಪುತ್ತಾರೆ. ಆಗ ಈ ಮುಗ್ಧ ಅಪ್ಪು ಬೆಂಗಳೂರಿಗೆ ಬಂದು ಪುನೀತ್ ರಾಜಕುಮಾರ್​​ಗಾಗಿ ಹುಡುಕಾಟ ನಡೆಸುತ್ತಾನೆ. ಈ ಅಪ್ಪುವಿಗೆ ಪ್ರಸಾದ್ ಹಾಗೂ ರಾಮಣ್ಣ ಎಂಬುವವರು ಪರಿಚಯ ಆಗುತ್ತಾರೆ. ಇವರಿಬ್ಬರ ಸಹಾಯದಿಂದ ಅಪ್ಪು ಪುನೀತ್ ರಾಜ್​ಕುಮಾರ್ ಅವರನ್ನು ಹುಡುಕಲು ಹೊರಡುತ್ತಾನೆ. ಅಲ್ಲದೆ ಶ್ರೀಮಂತ ಕುಟುಂಬವೊಂದರಿಂದ ಮಗುವನ್ನು ದತ್ತು ಪಡೆಯುವ ಪ್ರಯತ್ನ ಕೂಡಾ ಆಗುತ್ತದೆ. ಅಪ್ಪುವಿಗೆ ಪುನೀತ್ ರಾಜ್​​ಕುಮಾರ್ ಸಿಗುತ್ತಾರಾ..? ಆತನನ್ನು ಯಾರಾದರೂ ದತ್ತು ಪಡೆಯುತ್ತಾರಾ ಎಂಬುದು ಮುಂದಿನ ಕಥೆ.

ಈ ಚಿತ್ರದ ಕೇಂದ್ರ ಬಿಂದು ಅಂದರೆ ಬಾಲ ನಟ ಮಾಸ್ಟರ್ ಅನೂಪ್. ಈ ಮಗುವಿನ ಕೋಪ, ನಗು, ನಿರಂತರ ಹುಡುಕಾಟದಲ್ಲಿ ಪಡುವ ಕಷ್ಟ ಬಹಳ ಮೆಚ್ಚುಗೆ ಆಗುತ್ತದೆ. ಅಯ್ಯೋ ಈ ಮಗುವಿಗೆ ಅಪ್ಪ-ಅಮ್ಮ ಸಿಗಬಾರದಾ ಎನ್ನುವಷ್ಟು ಮನಸ್ಸು ಮಿಡಿಯುತ್ತದೆ. ಹಿರಿಯ ನಟ ಶಿವರಾಮ್ ಅವರದ್ದು​​ ತೂಕದ ಅಭಿನಯ. ಪ್ರಸಾದ್ ವಸಿಷ್ಠ, ಸತ್ಯನಾಥ್, ಕಿಟ್ಟಿ ಪೋಷಕ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಟೈಟಲ್ ಕಾರ್ಡಿನಲ್ಲಿ ಬರುವ ಹಾಡು ಮತ್ತು ಆಕಾಶಕ್ಕೆ... ದೂರದ ಊರಿಗೆ.. ಹಾಡು ಜುವಿನ್ ಸಿಂಗ್​​ ಸಂಗೀತ ನಿರ್ದೇಶನದಲ್ಲಿ ಸುಂದರವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಅಣ್ಣಾವ್ರ ಸಿನಿಮಾಗಳ ಕೆಲವೊಂದು ತುಣುಕುಗಳನ್ನು ಕೂಡಾ ಕಾಣಬಹುದು. ರುದ್ರಮುನಿ ಅವರ ಛಾಯಾಗ್ರಹಣ ಕೂಡಾ ಮೆಚ್ಚುವಂತಿದೆ. ಒಟ್ಟಿನಲ್ಲಿ ಇದು ನಿಜಕ್ಕೂ ಹೃದಯ ತಟ್ಟುವ ಸಿನಿಮಾ ಎನ್ನಬಹುದು.

ದೇವರು ಬೇಕಾಗಿದ್ದಾರೆ ಚಿತ್ರ ವಿಮರ್ಶೆ

ಕಾಣದ ಊರಲ್ಲಿ  ಕಲ್ಲು ಮುಳ್ಳುಗಳ ಗುಡಿಯಲ್ಲಿ

ಅವದಿ – 93 ನಿಮಿಷ, ಕ್ಯಾಟಗರಿ – ಮಕ್ಕಳ ಸಿನಿಮಾ, ರೇಟಿಂಗ್ – 3/5

ಚಿತ್ರ – ದೇವರು ಬೇಕಾಗಿದ್ದಾರೆ = ನಿರ್ಮಾಣ – ಹೊರೈಜಾನ್ ಮೂವೀಸ್, ನಿರ್ದೇಶಕ – ಕೆಂಜಾ ಚೇತನ್ ಕುಮಾರ್, ಸಂಗೀತ – ಜುಎವಿನ್, ಛಾಯಾಗ್ರಹಣ – ರುದ್ರಮುನಿ, ತಾರಾಗಣ – ಮಾಸ್ಟೆರ್ ಅನೂಪ್, ಶಿವರಾಮ್ ಎಸ್, ಪ್ರಸಾದ್ ವಸಿಷ್ಠ, ಸತ್ಯನಾಥ್, ಶಾರದ ಹಾಗೂ ಇತರರು.

ಮಗುವನ್ನು ದೇವರಿಗೆ ಹೊಲಿಸುತ್ತಾರೆ. ಆದರೆ ಆ ಮಗುವೇ ದೇವರನ್ನು ಹುಡುಕಲು ಹೊರಟರೆ. ಅದೇ ಮುಗ್ಧತೆ ಈ ಚಿತ್ರದ ಜೀವಾಳ. ಕೆಂಜಾ ಚೇತನ್ ಕುಮಾರ್ ಪ್ರಥಮ ನಿರ್ದೇಶನದಲ್ಲಿ ಒಂದು ಗಮನಾರ್ಹ ವಿಚಾರವನ್ನು ಸಮಾಜದ ಮುಂದೆ ಇಟ್ಟಿದ್ದಾರೆ. ಅನಾಥ ಮಕ್ಕಳು ಭಾರತ ದೇಶದಲ್ಲಿ 2 ಕೋಟಿಗೂ ಹೆಚ್ಚು. ಕುಟುಂಬದಲ್ಲಿ ಎರಡನೇ ಮಗು ಬದಲು ಒಂದು ಮಗುವನ್ನು ದತ್ತು ತೆಗೆದುಕೊಡರೆ ಈ ದೇಶದಲ್ಲಿ ಅನಾಥ ಮಕ್ಕಳೇ ಇರುವುದಿಲ್ಲ ಎಂಬ ನೋಟ ನಿರ್ದೇಶಕರದು.

ಒಂದು ಸಾದರಣವಾದ ಚಿತ್ರ ಕಥೆಯಲ್ಲಿ ಮುಗ್ಧತೆಯ ಮೆರವಣಿಗೆ ಚಿತ್ರದ ಪ್ರಮುಖಾಂಶ. ದೇವರು ಎಲ್ಲರಿಗೆ ಒಂದಲ್ಲ ಒಂದು ರೂಪದಲ್ಲಿ ಆಶೀರ್ವಾದದ ಮೂಲಕ ಬೇಕಾಗಿದೆ. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ...ಎಂದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರು ಹೇಳಿದ್ದು ಜ್ಞಾಪಕಕ್ಕೆ ಬರುವುದು ಈ ಚಿತ್ರ ನೋಡಿದ ಮೇಲೆ.

ಒಂದು ಅಪಘಾತದಲ್ಲಿ 13 ವ್ಯಕ್ತಿಗಳು ಸಾವನಪ್ಪುತ್ತಾರೆ ಆದರೆ ಒಂದು ಹಸುಗೂಸು ಬದುಕಿ ಉಳಿಯುವುದು. ಆ ಮಗುವನ್ನು ಒಬ್ಬ ಹಿರಿಯಜ್ಜ ಶಿವರಾಮಣ್ಣ ಸಾಕುವ ಜವಾಬ್ದಾರಿ ಹೊತ್ತುತಾನೆ ತನ್ನ ಮನೆಯ ವಿರೋಧ ಕಟ್ಟಿಕೊಂಡು. ಆ ಮಗುವಿಗೆ ಅಪ್ಪು (ಮಾಸ್ಟೆರ್ ಅನೂಪ್) ಎಂದು ನಾಮಕರಣ ಮಾಡಿ ತನ್ನ ಸಿ ಡಿ ಅಂಗಡಿಯಲ್ಲಿ ಸಹಾಯಕ ಕಿಟ್ಟಿ ಜೊತೆ ಶಿವರಾಮಣ್ಣ ಮಗುವಿಗೆ ಲಾಲನೆ ಪಾಲನೆ ಮಾಡುತ್ತಾನೆ. ಮಗುವನ್ನು ಅಂಗನವಾಡಿ ಕನ್ನಡ ಶಾಲೆಗೆ ಸೇರಿಸುತ್ತಾನೆ. ಚೂಟಿ ಹುಡುಗ ಅಪ್ಪು ದಿವಸಕ್ಕೆ ಒಂದು ಡಾ ರಾಜಕುಮಾರ್ ಸಿನಿಮಾವನ್ನು ನೋಡುವುದು ಅಭ್ಯಾಸ ಆಗಿಬಿಡುತ್ತದೆ.

ಈ ಅಣ್ಣಾವ್ರು ಯಾರು, ಅವರು ಎಲ್ಲಿದ್ದಾರೆ ಎಂದು ಆ ಪುಟ್ಟ ಹುಡುಗ ಪ್ರಶ್ನೆ ಮಾಡಿದಾಗ ಶಿವರಾಮಣ್ಣ ಅವರು ದೇವರ ಹತ್ತಿರ ಹೋಗಿದ್ದಾರೆ. ನಿನ್ನ ಅಪ್ಪ ಅಮ್ಮ ಸಹ ದೇವರ ಹತ್ತಿರ ಹೋಗಿದ್ದಾರೆ ಎಂಬ ಉತ್ತರ ಮುಗ್ಧ ಮಗುವನ್ನು ಕಾಡುತ್ತದೆ. ಮತ್ತೊಂದು ದಿನ ಭಕ್ತ ಪ್ರಹ್ಲಾದ ಸಿನಿಮಾ ನೋಡಿದಾಗ ಡಾ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಮುಖಾಮುಖಿಯಾಗಿ ಅದರಿಂದ ಪ್ರಹಳ್ಳಾದ ಪಾತ್ರ ದೇವರನ್ನು ಕರೆಯುವುದು ಆಗ ಶ್ರೀ ನರಸಿಂಹನ ರೂಪದಲ್ಲಿ ದೇವರು ಬರುವುದು ಈ ಬಾಲಕನ ಕುತೂಹಲ ಹೆಚ್ಚಾಗುತ್ತದೆ. ಓಹೋ....ಪುನೀತ್ ರಾಜಕುಮಾರ್ ಅವರನ್ನು ಸಂಪರ್ಕಿಸಿದರೆ ದೇವರು ಸಿಗುತ್ತಾರೆ ಆಮೇಲೆ ತನ್ನ ಅಪ್ಪ ಅಮ್ಮನನ್ನು ಕೇಳಬಹುದು ಎಂಬುದು ಈ ಪುಟ್ಟ ಮನಸಿನ ದೊಡ್ಡ ಆಲೋಚನೆ.

ಅಪ್ಪು ಸಾಕಿ ಸಲುಹಿದ ಶಿವರಾಮಣ್ಣ ಹಾರ್ಟ್ ಆಟಾಕ್ ಇಂದ ಸಾವನ್ನಪ್ಪಿದಾಗ. ಈ ಮುಗ್ಧ ಅಪ್ಪು ಬೆಂಗಳೂರಿಗೆ ಬಂದು ಅಪ್ಪು = ಪುನೀತ್ ರಾಜಕುಮಾರ್ ಹುಡುಕಾಟ ನಡೆಸುತ್ತಾನೆ. ಈ ಅಪ್ಪುವಿಗೆ ಒಬ್ಬ ತಾಳ್ಳೋ ಗಾಡಿಯಲ್ಲಿ ಆಹಾರ ಸರಬರಾಜು ಮಾಡುವ ಪ್ರಸಾದ್ ಮತ್ತು ರಾಮಣ್ಣ ಸೆಕ್ಯೂರಿಟೀ ಗಾರ್ಡ್ ಪರಿಚಯ ಆಗಿ ನಿರಂತರ ಹುಡುಕಾಟ ಅಪ್ಪು – ಪುನೀತ್ ರಾಜಕುಮಾರ್ ಹುಡುಕಲು ಪ್ರಯತ್ನ ಪಡುತ್ತಾನೆ. ಈ ಮುಗ್ಧ ಹುಡುಗನಿಗೆ ಒಂದು ಒಳ್ಳೆಯ ಕುಟುಂಬದಲ್ಲಿ ದತ್ತು ಪಡೆಯುವಂತೆ ಪ್ರಯತ್ನ ಸಹ ಆಗುತ್ತದೆ. ಕೊನೆಗೆ ಮುಗ್ಧ ಮಗುವಿಗೆ ಪುನೀತ್ ರಾಜಕುಮಾರ್ ಸಿಕ್ಕುವುದೇ ಇಲ್ಲ. ಪುಟ್ಟ ಬಾಲಕ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಈ ಚಿತ್ರದ ಕೇಂದ್ರ ಬಿಂದು ಅಂದರೆ ಬಾಲ ನಟ ಮಾಸ್ಟೆರ್ ಅನೂಪ್. ಈ ಮಗುವಿನ, ಕೋಪ, ನಗು, ನಿರಂತರ ಹುಡುಕಾಟದಲ್ಲಿ ಪಡುವ ಕಷ್ಟ ಬಹಳ ಮೆಚ್ಚುಗೆ ಆಗುತ್ತದೆ. ಅಯ್ಯೋ ಈ ಮಗುವಿಗೆ ಅಪ್ಪ ಅಮ್ಮ ಸಿಗಬಾರದ ಎನ್ನುವಷ್ಟು ಮನಸ್ಸು ಮಿಡಿಯುತ್ತದೆ. ಹಿರಿಯ ನಟ ಶಿವರಾಮಣ್ಣ ತೂಕದ ಅಭಿನಯ. ಪ್ರಸಾದ್ ವಸಿಷ್ಠ, ಸತ್ಯನಾಥ್, ಕಿಟ್ಟಿ ಪಾತ್ರದಾರಿ ಪೋಷಕ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಟೈಟಲ್ ಕಾರ್ಡ್ ಅಲ್ಲಿ ಬರುವ ಹಾಡು ಮತ್ತು ಆಕಾಶಕ್ಕೆ...ದೂರದ ಊರಿಗೆ.. ಮೊಂಟೆಜ್ ಹಾಡು ಜುಎವಿನ್ ಸಂಗೀತದಲ್ಲಿ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಕೆಲವು ಅಣ್ಣಾವ್ರ ಸಿನಿಮಾಗಳ ತುಣುಕು ಸಹ ಕಾಣಬಹುದು. ಛಾಯಾಗ್ರಾಹಕ ರುದ್ರಮುನಿ ಹಳ್ಳಿ ಪರಿಸರ, ಶಿವರಾಮಣ್ಣ ಹಾಗೂ ಮಾಸ್ಟೆರ್ ಅನೂಪ್ ಕ್ಲೋಸ್ ಅಪ್ ಅನ್ನು ಚನ್ನಾಗಿ ಸೆರೆ ಹಿಡಿದಿದ್ದಾರೆ.

ಇದು ಹೃದಯ ತಟ್ಟುವ ಸಿನಿಮಾ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.