ETV Bharat / sitara

VIDEO: "ಜೀನೆ ಕೆ ಹೈ ಚಾರ್ ದಿನ್" ಸಾಂಗ್​ಗೆ ಸಖತ್​ ಸ್ಟೆಪ್​ ಹಾಕಿದ ಸಲ್ಮಾನ್ ಖಾನ್ - ಟೈಗರ್ 3 ಸಿನಿಮಾ ಚಿತ್ರೀಕರಣ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ಟರ್ಕಿಯಲ್ಲಿ 'ಟೈಗರ್ 3' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ "ಜೀನೆ ಕೆ ಹೈ ಚಾರ್ ದಿನ್" ಗೆ ಸಖತ್​ ಸ್ಟೆಪ್​ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​​ ಆಗಿದೆ.

salman khan dance for jeene ke hain char din song
"ಜೀನೆ ಕೆ ಹೈ ಚಾರ್ ದಿನ್" ಸಾಂಗ್​ಗೆ ಸಖತ್​ ಸ್ಟೆಪ್​ ಹಾಕಿದ ಸಲ್ಮಾನ್ ಖಾನ್
author img

By

Published : Sep 15, 2021, 6:53 AM IST

Updated : Sep 15, 2021, 6:58 AM IST

ಬಾಲಿವುಡ್ ನಟ ನಟಿಯರ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ನಟ ಸಲ್ಮಾನ್ ಖಾನ್ ಡ್ಯಾನ್ಸ್​ ವಿಡಿಯೋ ಕೂಡ ಸಾಮಾಜಿಕ ಜಾಲಾತಾಣದಲ್ಲಿ ಸಖತ್​ ವೈರಲ್​ ಆಗಿ ಸದ್ದು ಮಾಡುತ್ತಿದೆ.

"ಜೀನೆ ಕೆ ಹೈ ಚಾರ್ ದಿನ್" ಸಾಂಗ್​ಗೆ ಸಖತ್​ ಸ್ಟೆಪ್​ ಹಾಕಿದ ಸಲ್ಮಾನ್ ಖಾನ್

ಹೌದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ಟರ್ಕಿಯಲ್ಲಿ ತಮ್ಮ ಮುಂಬರುವ 'ಟೈಗರ್ 3' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಪಾಪ್ಯುಲರ್​​ ಸಾಂಗ್​ "ಜೀನೆ ಕೆ ಹೈ ಚಾರ್ ದಿನ್" ಗೆ ಸಖತ್​ ಸ್ಟೆಪ್​ ಹಾಕಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್​​ ಆಗಿದೆ. ವಿಡಿಯೋ ನೋಡಿದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ತಲೈವಿ' ಆಯ್ತು ಇದೀಗ 'ಸೀತಾ' ಚಿತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್

ಟೈಗರ್​ 3, ಇದು ಮನೀಶ್ ಶರ್ಮಾ ನಿರ್ದೇಶನದ ಸಿನಿಮಾ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿದ್ದಾರೆ. 2012ರಲ್ಲಿ ಕಬೀರ್ ಖಾನ್ ನಿರ್ದೇಶನದ 'ಏಕ್ ಥಾ ಟೈಗರ್' ಹಾಗೂ 2017ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಸ್ಪೈ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಭಾಗವಾಗಿ 'ಟೈಗರ್​ 3' ತೆರೆ ಮೇಲೆ ಬರಲಿದೆ.

Last Updated : Sep 15, 2021, 6:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.