ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ ಸೇರಿ ಇತರ ಖ್ಯಾತ ನಟ-ನಟಿಯರು, ಗಾಯಕರು, ಅಭಿಮಾನಿಗಳು ಲತಾ ಮಂಗೇಶ್ಕರ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಜನ್ಮ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಗೌರವಾನ್ವಿತ ಲತಾ ದೀದಿಗೆ ಜನ್ಮ ದಿನದ ಶುಭಾಶಯಗಳು. ಅವರ ಆ ಸುಮಧುರ ಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ವಿನಮ್ರತೆ ಮತ್ತು ಅವರು ಭಾರತೀಯ ಸಂಸ್ಕೃತಿ ಮೇಲೆ ಹೊಂದಿರುವ ಉತ್ಸಾಹಕ್ಕಾಗಿ ಅವರನ್ನು ಗೌರವಿಸಲಾಗುತ್ತದೆ. ಅವರ ಆರ್ಶೀರ್ವಾದ ದೊಡ್ಡ ಶಕ್ತಿಯ ಮೂಲವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆಂದು ಪಿಎಂ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
-
Congratulations to my Ministerial colleagues, Shri @sarbanandsonwal Ji and Shri @Murugan_MoS Ji on being elected to the Rajya Sabha from Assam and Madhya Pradesh respectively. I am confident that they will enrich Parliamentary proceedings and further our agenda of public good.
— Narendra Modi (@narendramodi) September 28, 2021 " class="align-text-top noRightClick twitterSection" data="
">Congratulations to my Ministerial colleagues, Shri @sarbanandsonwal Ji and Shri @Murugan_MoS Ji on being elected to the Rajya Sabha from Assam and Madhya Pradesh respectively. I am confident that they will enrich Parliamentary proceedings and further our agenda of public good.
— Narendra Modi (@narendramodi) September 28, 2021Congratulations to my Ministerial colleagues, Shri @sarbanandsonwal Ji and Shri @Murugan_MoS Ji on being elected to the Rajya Sabha from Assam and Madhya Pradesh respectively. I am confident that they will enrich Parliamentary proceedings and further our agenda of public good.
— Narendra Modi (@narendramodi) September 28, 2021
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ತಮಗೆ 5 ವರ್ಷವಿರುವಾಗಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಮರಾಠಿ ಚಿತ್ರ ಪೇಲ್ ಮಂಗಳಲಾ-ಗೌರ್ ಚಿತ್ರಕ್ಕೆ ಹಾಡು ಹಾಡುವುದರ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿ ಅದೇ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಕೂಡ ಮಾಡಿದ್ದರು.
1942ರಲ್ಲಿ ಲತಾ ಮಂಗೇಶ್ಕರ್ ಅವರಿಗೆ 13 ವರ್ಷವಿದ್ದಾಗ ಅವರ ತಂದೆ ದೀನಾನಾಥ್ ಮಂಗೇಶ್ವರ್ ನಿಧನ ಹೊಂದಿದರು. ಈ ಸಮಯದಲ್ಲಿ ನವಯುಗ ಚಿತ್ರಪತಿ ಸಿನಿಮಾ ಕಂಪನಿ ನಷ್ಟದಲ್ಲಿತ್ತು. ಆ ವೇಳೆ ಚಲನಚಿತ್ರಗಳಲ್ಲಿ ನಟನೆ ಹಾಗೂ ಗಾಯಕಿಯಾಗಿ ಕಂಪನಿಗೆ ಸಹಾಯ ಮಾಡಲಾರಂಭಿಸಿದರು.
ಸಾಧನೆಗೆ ಸಂದ ಗೌರವ:
ಲತಾ ಮಂಗೇಶ್ಕರ್ ಅವರ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಸೇರಿದಂತೆ, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ, ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್ದಾ, ದಾಸಾಹೆಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನ, ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ.
ಇದನ್ನೂ ಓದಿ: Telangana State Tourism Award: ರಾಮೋಜಿ ಫಿಲ್ಮ್ ಸಿಟಿ ಎರಡು ಪ್ರಶಸ್ತಿಗೆ ಭಾಜನ
ಹಿಂದಿ ಭಾಷೆಯೊಂದರಲ್ಲೇ 1,000ಕ್ಕೂ ಅಧಿಕ ಹಾಡು ಹಾಡಿದ್ದಾರೆ ಲತಾ ಮಂಗೇಶ್ಕರ್.