ETV Bharat / sitara

ಒಮಿಕ್ರಾನ್​ ಭೀತಿ: ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಟಿ ಕಾಜೋಲ್​​ಗೆ ಟ್ರೋಲಿಗರ ಟಾಂಗ್​.. - ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಜೋಲ್​

ಮುಂಬೈ ಏರ್​ಪೋರ್ಟ್​ನಲ್ಲಿ ನಟಿ ಕಾಜೋಲ್​ ಕೋವಿಡ್​​ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ವಿಡಿಯೋ ಸಖತ್ ಟ್ರೋಲ್​ ಆಗಿದೆ.

Bollywood actress Kajol took covid measures at Mumbai airport
ಕೋವಿಡ್​ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಟಿ ಕಾಜೋಲ್​​ಗೆ ಟ್ರೋಲಿಗರ ಟಾಂಗ್
author img

By

Published : Jan 4, 2022, 8:25 AM IST

ಮುಂಬೈ: ದೇಶದಲ್ಲಿ ಒಮಿಕ್ರಾನ್​​ ಭೀತಿ ಹೆಚ್ಚುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್​ ಸೆಲೆಬ್ರಿಟಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಅದರಂತೆ ಮುಂಬೈ ಏರ್​ಪೋರ್ಟ್​ನಲ್ಲಿ ನಟಿ ಕಾಜೋಲ್​ ಕಾಣಿಸಿಕೊಂಡಿದ್ದು, ಅವರೂ ಕೂಡ ಪಾಪರಾಜಿಗಳಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಫೋಟೋಗ್ರಾಫರ್​ಗಳು ಹತ್ತಿರ ಬರುತ್ತಿದ್ದಂತೆ ದೂರ ನಿಲ್ಲಿ ಎಂದ ಕಾಜಲ್​, ಸೋಷಿಯಲ್​ ಡಿಸ್ಟೆನ್ಸ್​ ಮೈಂಟೈನ್​ ಮಾಡುವಂತೆ ಸೂಚಿಸಿದ್ದಾರೆ. ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಟಾಗಿ ಪಾಲಿಸುತ್ತಿರುವಂತೆ ಕಾಣಿಸಿಕೊಂಡಿದ್ದಾರೆ.

ಕೋವಿಡ್​ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಟಿ ಕಾಜೋಲ್​​ಗೆ ಟ್ರೋಲಿಗರ ಟಾಂಗ್

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಖತ್​ ಟ್ರೋಲ್​ ಆಗಿದೆ. ವಾಶ್​ ರೂಮ್​ಗೆ ಹೋಗಬೇಕೇನೋ ಎಂದು ಒಬ್ಬರು ಕಮೆಂಟ್​ ಮಾಡಿದ್ದರೆ, ಮತ್ತೊಬ್ಬರು ರಾಜಧಾನಿ ಎಕ್ಸ್​ಪ್ರೆಸ್​ ಎಂದು ಹೇಳಿದ್ದಾರೆ. ಅರೇ, ಆಂಟಿಯನ್ನು ಸಂಬಾಳಿಸಿ, ಬಿದ್ದು ಹೋಗಬಹುದು ಎಂದೆಲ್ಲ ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' ಬಿಡುಗಡೆಗೆ ಸಿದ್ಧ

ಒಟ್ಟಿನಲ್ಲಿ ಕೋವಿಡ್​, ರೂಪಾಂತರಿ ಒಮಿಕ್ರಾನ್​ ಹೆಚ್ಚುತ್ತಿರುವ ಈ ವೇಳೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಉತ್ತಮ ವಿಚಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.