ಹೈದರಾಬಾದ್: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತದ ಮಹಿಳಾ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ 'ಚಕ್ಡಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅನುಷ್ಕಾ ಸಾಕಷ್ಟು ತಯಾರಿ ಆರಂಭಿಸಿದ್ದಾರೆ.
ಸಿನಿಮಾಗಾಗಿ ಪೂರ್ವ ಸಿದ್ಧತೆಯಲ್ಲಿರುವ ಅನುಷ್ಕಾ, ಎರಡು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಗ್ರಿಪ್ ಬೈ ಗ್ರಿಪ್ ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಪೋಸ್ಟ್ಗೆ ಕ್ರಿಕೆಟರ್ ಜೂಲನ್ ಗೋಸ್ವಾಮಿ ಪ್ರತಿಕ್ರಿಯಿಸಿದ್ದು, ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ವಿಶ್ವ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್‌ಗಳಲ್ಲಿವೊಬ್ಬರಾದ ಜೂಲನ್ ಗೋಸ್ವಾಮಿಯವರ ಅದ್ಭುತ ಪ್ರಯಾಣವನ್ನು ಆಧಾರವಾಗಿಟ್ಟುಕೊಂಡು ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಅನುಷ್ಕಾ ಜೂಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ದೇಹ ಮತ್ತು ಫಿಟ್‌ನೆಸ್ ತಯಾರಿ ನಡೆಸ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುತ್ತಾ, ಜೂಲನ್ ಅವರ ಜೀವನವು ಉತ್ಸಾಹ ಮತ್ತು ಪರಿಶ್ರಮ ಎಲ್ಲಾ ಪ್ರತಿಕೂಲತೆಗಳ ಮೇಲೆ ವಿಜಯಶಾಲಿಯಾಗಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಚಕ್ಡಾ ಎಕ್ಸ್‌ಪ್ರೆಸ್ ಮಹಿಳಾ ಕ್ರಿಕೆಟ್ ಜಗತ್ತಿನ ಅತ್ಯಂತ ನಿರ್ಣಾಯಕ ನೋಟವನ್ನು ತೋರಿಸಲಾಗಿದೆ ಎಂದು ಅನುಷ್ಕಾ ಹೇಳಿದ್ದಾರೆ.
ಪ್ರೋಸಿತ್ ರಾಯ್ ಅವರ ನೇತೃತ್ವದಲ್ಲಿ ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾ ಮೂಡಿ ಬರಲಿದ್ದು, ಅನುಷ್ಕಾ ಮತ್ತು ಅವರ ಸಹೋದರ ಕರ್ಣೇಶ್ ಶರ್ಮಾ ಅವರ ಬ್ಯಾನರ್ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಸಂಸ್ಥೆ ನಿರ್ಮಿಸುತ್ತಿದೆ.
ಇದನ್ನೂ ಓದಿ: ಶಾಹಿದ್ ಕಪೂರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ನಟನಿಗೆ ಸ್ಟಾರ್‌ಡಮ್ ನೀಡಿದ 5 ಚಿತ್ರಗಳಿವು