ಬಾಲಿವುಡ್ನಲ್ಲಿ ಬಿಗ್ ಹಿಟ್ ನೀಡಿದ ಸಿನಿಮಾಗಳ ಪೈಕಿ ಅಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ಅಮಿರ್ ಖಾನ್ ಪುತ್ರಿಯಾಗಿ ನಟಿಸಿದ್ದ ಝೈರಾ ವಾಸಿಂ ಕೂಡ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದರು. ಆದ್ರೆ, ಇದೀಗ ಅಭಿಮಾನಿಗಳಲ್ಲಿ ಈ ನಟಿ ಮನವಿಯೊಂದನ್ನು ಮಾಡಿದ್ದಾರೆ.
ಆಕ್ರಮಿತ ಕಾಶ್ಮೀರದಲ್ಲಿರುವ ಝೈರಾ ವಾಸಿಂ ಕಳೆದ ವರ್ಷ ಬಾಲಿವುಡ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರು. ಇಸ್ಲಾಮಿಕ್ ಬೋಧನೆಗಳನ್ನು ಅನುಸರಿಸಿದ್ದಕ್ಕಾಗಿ ಕಳೆದ ವರ್ಷ ಝೈರಾ ಈ ನಿರ್ಧಾರಕ್ಕೆ ಬಂದಿದ್ದರು.
ಇದೀಗ ಝೈರಾ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ದಯಮಾಡಿ ಇಂಟರ್ನೆಟ್ ಮತ್ತು ಫ್ಯಾನ್ ಪೇಜ್ಗಳಿಂದ ನನ್ನ ಫೋಟೋಗಳನ್ನು ತೆಗೆದು ಹಾಕಿ. ಇಂಟರ್ನೆಟ್ನಿಂದ ತೆಗೆಯಲು ಕಷ್ಟವಾದರೆ, ಫ್ಯಾನ್ ಪೇಜ್ನಿಂದನಾದ್ರೂ ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಮೆಸೇಜ್ ಮಾಡಿದ್ದ ಝೈರಾ ಇದೀಗ ಮತ್ತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಜೀವನದ ಹೊಸ ಪಯಣ ಆರಂಭಿಸುತ್ತಿದ್ದೇನೆ. ಆದ್ದರಿಂದ ನಾನು ನಿಮ್ಮ ಬಳಿ ಫೋಟೋಗಳನ್ನು ಡಿಲೀಟ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">