ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ 2 ಹಾಡುಗಳು ಬಿಡುಗಡೆಯಾಗಿವೆ. ಇಂದು ಮಧ್ಯಾಹ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದ್ದು ಪುನೀತ್ ಅಭಿಮಾನಿಗಳು ಈ ಹೊಸ ಹಾಡನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ...ಧನ್ಯಾಗೆ ಶುಭ ಕೋರಿದ ಸ್ನೇಹಿತರು
'ಯುವರತ್ನ' ಚಿತ್ರದ ಪಾಠಶಾಲಾ ಹಾಡು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಪುನೀತ್ ರಾಜ್ ಕುಮಾರ್ ಹೇಳುವ ಹಾಗೆ, ಈ ಪಾಠಶಾಲಾ ಹಾಡು ಪ್ರತಿಯೊಬ್ಬರ ಶಾಲೆಯ ದಿನಗಳನ್ನು ನೆನಪಿಸಲಿದೆಯಂತೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. 'ರಾಜಕುಮಾರ' ಸಿನಿಮಾದ, ಬೊಂಬೆ ಹೇಳುತೈತೆ...ಹಾಡಿನಷ್ಟೇ ಈ ಪಾಠಶಾಲಾ ಹಾಡು ಕೂಡಾ ಸೂಪರ್ ಹಿಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. 'ಯುವರತ್ನ' ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಕಾಶ್ ರೈ, ಧನಂಜಯ್, ಸೋನುಗೌಡ, ದಿಗಂತ್ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ. ಎಸ್.ಎಸ್. ತಮನ್ ಸಂಗೀತ ನಿರ್ದೇಶನ ಇರುವ, ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಏಪ್ರಿಲ್ 1ರಂದು ಯುವರತ್ನ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.