ಅಪ್ಪು ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಇತ್ತೀಚೆಗಷ್ಟೇ ತೆರೆಕಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಕಿರುತೆರೆಯಲ್ಲಿ ಸದ್ಯದಲ್ಲೇ ಪ್ರಸಾರವಾಗಲಿದೆ.
ಕಳೆದ ತಿಂಗಳಷ್ಟೇ ಪವರ್ಸ್ಟಾರ್ ನಟನೆಯ ಯುವರತ್ನ ಚಿತ್ರ ತೆರೆಕಂಡಿತ್ತು. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಕೂಡ ಸಿಕ್ಕಿತ್ತು. ಆದರೆ ಯುವರತ್ನ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಮಿತಿ ಹೇರಿ ಆದೇಶ ಹೊರಡಿಸಿತ್ತು. ಇದಕ್ಕೆ ಪುನೀತ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ನಂತರ ಕೇವಲ ಒಂದೇ ವಾರಕ್ಕೆ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು.
ಇದೀಗ ‘ಯುವರತ್ನ’ ಚಿತ್ರ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿರುವ ಬಗ್ಗೆ ಸುದ್ದಿ ತಿಳಿದು ಬಂದಿದೆ. ಸದ್ಯದಲ್ಲೇ ಉದಯ ವಾಹಿನಿಯಲ್ಲಿ ಯುವರತ್ನ ಸಿನಿಮಾ ಪ್ರಸಾರವಾಗಲಿದೆಯಂತೆ. ಆದರೆ ದಿನಾಂಕ ಇನ್ನೂ ತಿಳಿದು ಬಂದಿಲ್ಲ.
ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿದೆ. ನಾಯಕಿ ಸಾಯೇಷಾ ಸೈಗಲ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದು, ಇದು ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದೆ.
ಯುವರತ್ನದಲ್ಲಿ 'ನೀನಾದೆ ನಾ' ಸೇರಿದಂತೆ ಕೆಲವು ಉತ್ತಮ ಹಾಡುಗಳಿವೆ. ಛಾಯಾಗ್ರಹಣ ಕೂಡ ಉತ್ತಮವಾಗಿದೆ. ಆ್ಯಕ್ಷನ್ ಮತ್ತು ನೃತ್ಯ ಸಂಯೋಜನೆ ಚೆನ್ನಾಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್, ಪ್ರಕಾಶ್ ರಾಜ್ ಸೇರಿದಂತೆ ಮುಂತಾದ ನಟರು ನಟಿಸಿದ್ದಾರೆ.