ರಾಘವೇಂದ್ರ ರಾಜಕುಮಾರ ಹಾಗೂ ಮಂಗಳ ಅವರ ಕಿರಿಯ ಪುತ್ರ ಯುವರಾಜಕುಮಾರ್ ಹಾಗೂ ಶ್ರೀದೇವಿ ಅವರ ಮದುವೆ ಆರತಕ್ಷತೆಯು ನಾಳೆ ಸಂಜೆ 6.30 ರಿಂದ ಅರಮನೆ ಮೈದಾನದಲ್ಲಿ ನಡೆಯಲಿದೆ.
ಡಾ.ರಾಜ್ಕುಮಾರ್ ಅವರ ಕುಟುಂಬ ಆರತಕ್ಷತೆಗೆ ಬಂಧು - ಮಿತ್ರರನ್ನು ನಿರೀಕ್ಷಿಸುತ್ತಿದ್ದು, ಮೌಂಟ್ ಕಾರ್ಮೆಲ್ ಕಾಲೇಜ್ ಬಳಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಯುವರಾಜಕುಮಾರ್ ಹಾಗೂ ಶ್ರೀದೇವಿ ಜಂಟಿಯಾಗಿ ಡಾ ರಾಜ್ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ನಡೆಸುತ್ತಿದ್ದಾರೆ.