ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ ​​ಯಂಗ್ ರೆಬಲ್ ಸ್ಟಾರ್​​​​​​​​​​​, ಡಿಂಪಲ್ ಕ್ವೀನ್ - ಬಿಂದಿಯಾ ರಾಮ್

ಸ್ಯಾಂಡಲ್​​​ವುಡ್​​​ ನಟಿ ರಚಿತಾ ರಾಮ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಬ್ಬರೂ ಕೂಡಾ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲವಾದ್ರೂ ಸ್ನೇಹಿತರು ಹಾಗೂ ಅಭಿಮಾನಿಗಳು ಮೆಚ್ಚಿನ ನಟ-ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಅಭಿಷೇಕ್​, ರಚಿತಾ
author img

By

Published : Oct 3, 2019, 5:49 PM IST

ರಚಿತಾ ರಾಮ್​​​​​

rachita ram
ರಚಿತಾ ರಾಮ್​​

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಡಿಂಪಲ್ ಕ್ವೀನ್ ರಚಿತಾ ರಾಮ್​​, ಮೂಲತ: ಭರತನಾಟ್ಯ ಕಲಾವಿದೆ. ಕಥಕ್ ಕಲಿತಿರುವ ರಚಿತಾ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ರಚಿತಾ ಸಹೋದರಿ ನಿತ್ಯಾರಾಮ್​ ಕೂಡಾ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಿತ್ಯಾ ನಟಿಸುತ್ತಿದ್ದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿ ಮೂಲಕ ರಚಿತಾ ಕಿರುತೆರೆಗೆ ಕಾಲಿಟ್ಟರು. ನಂತರ 'ಅರಸಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಬುಲ್​​ಬುಲ್​' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ರಚಿತಾ ಬೆಳ್ಳಿತೆರೆಯಲ್ಲಿ ಕರಿಯರ್ ಆರಂಭಿಸಿದರು. ರಚಿತಾ ಮೂಲ ಹೆಸರು ಬಿಂದಿಯಾ ರಾಮ್​​​. ಆದರೆ ಈಗಾಗಲೇ ಸ್ಯಾಂಡಲ್​​​​ವುಡ್​​​ನಲ್ಲಿ 'ಬಿಂದಿಯಾ' ಹೆಸರು ಖ್ಯಾತಿ ಆಗಿದ್ದರಿಂದ ರಚಿತಾ ಎಂದು ಹೆಸರು ಬದಲಿಸಿಕೊಂಡರು. ದರ್ಶನ್, ಪುನೀತ್ ರಾಜ್​ಕುಮಾರ್, ಸುದೀಪ್​​, ಶಿವರಾಜ್​​​ಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ನಟರೊಂದಿಗೆ ರಚಿತಾ ನಟಿಸಿದ್ದಾರೆ.

ಅಭಿಷೇಕ್​​​​

ahishek
ಅಭಿಷೇಕ್​​ ಅಂಬರೀಶ್

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್, ಯಂಗ್ ರೆಬಲ್ ಸ್ಟಾರ್ ಎಂದೇ ಫೇಮಸ್. ಅಂಬರೀಶ್​​​-ಸುಮಲತಾ ಸ್ಟಾರ್ ದಂಪತಿ ಪುತ್ರನಾಗಿ ಜನಿಸಿದ ಅಭಿಷೇಕ್​​​​ 'ಅಮರ್' ಚಿತ್ರದ ಮೂಲಕ ಸ್ಯಾಂಡಲ್​​​ವುಡ್​​ಗೆ ಬಂದವರು. ಸ್ಟಾರ್ ನಟನ ಪುತ್ರನಾದರೂ 'ಅಮರ್' ಚಿತ್ರಕ್ಕಿಂತ ಮೊದಲು ಅಭಿಷೇಕ್ ತಾನಾಯಿತು, ತನ್ನ ಓದಾಯಿತು ಎಂದು ಇದ್ದವರು. ಈ ಮುನ್ನ 150 ಕಿಲೋ ತೂಕ ಇದ್ದ ಅಭಿಷೇಕ್​​​​ 'ಅಮರ್' ಚಿತ್ರಕ್ಕಾಗಿ ಜಿಮ್​​​ಗೆ ಹೋಗಿ ಭಾರೀ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡು ಫಿಟ್ ಆದರು. ಸಂದೇಶ್​ ನಾಗರಾಜ್​ ನಿರ್ಮಾಣದ 'ಅಮರ್​' ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದರು. 'ಅಮರ್​' ಸಿನಿಮಾ ಹಿಟ್ ಸಾಲಿಗೆ ಸೇರದಿದ್ದರೂ ಅಭಿಷೇಕ್ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಹೊಸ ಚಿತ್ರಕ್ಕಾಗಿ ಅಭಿಷೇಕ್ ತಯಾರಿ ನಡೆಸಿದ್ದಾರೆ. ತಂದೆ ನಿಧನ ಹಾಗೂ ಇತ್ತೀಚೆಗೆ ಸಂಬಂಧಿಕರೊಬ್ಬರು ಕೂಡಾ ನಿಧನರಾಗಿದ್ದರಿಂದ ಅಭಿಷೇಕ್ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.

ಸಂಜಿತ್ ಹೆಗ್ಡೆ

sanjit hegde
ಸಂಜಿತ್ ಹೆಗ್ಡೆ

ಗಾಯಕ ಸಂಜಿತ್ ಹೆಗ್ಡೆ ಕೂಡಾ ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯ ಖ್ಯಾತ ರಿಯಾಲಿಟಿ ಶೋ ಸರಿಗಮಪ ಮೂಲಕ ರಾಜ್ಯದ ಜನತೆಗೆ ಪರಿಚಿತರಾದ ಸಂಜಿತ್ ಹೆಗ್ಡೆ, ಪ್ರೇಮ್​ ಹಾಗೂ ಕೃತಿ ಕರಬಂಧ ನಟನೆಯ 'ದಳಪತಿ' ಚಿತ್ರದ 'ಗುನು ಗುನುಗುವ ಹಾಡಿನಂತೆ' ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಸ್ಯಾಂಡಲ್​​​ವುಡ್​​​​ಗೆ ಪರಿಚಯವಾದರು. ತಮ್ಮ ಹಾಡಿನ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಪಡೆದ ಸಂಜಿತ್​ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾಗಳಲ್ಲೂ ಹಾಡಿದ್ದಾರೆ.

ಮೂವರೂ ಸ್ಟಾರ್​​ಗಳಿಗೆ ಈ ಟಿವಿ ಭಾರತದ ವತಿಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು.

Intro:Body:

Abhi rachita ram birthday

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.