ETV Bharat / sitara

'ಮಾರಕಾಸ್ತ್ರ' ಡಿಟೆಕ್ಟಿವ್ ಪಾತ್ರದಲ್ಲಿ ಅಪ್ಪು ಹೋಲಿಕೆ ಇರುವ ಯುವ ನಟ ಚಿತ್ರರಂಗಕ್ಕೆ ಎಂಟ್ರಿ

author img

By

Published : Feb 23, 2022, 8:33 PM IST

ಈ ಹಿಂದೆ ಹಲವಾರು ಕಿರುಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಮೂರ್ತಿ ಸುನಾಮಿ, ಮಾರಕಾಸ್ತ್ರ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ‌. ಈ ಚಿತ್ರಕ್ಕೆ ಪವರ್​ ಸ್ಟಾರ್​ ಪುನೀತ್​ರಾಜಕುಮಾರ್​ ಹೋಲಿಕೆ ಇರುವ ಯುವನಟ ಎಂಟ್ರಿಯಾಗಿದ್ದಾರೆ.

cinema team
ಮಾರಕಾಸ್ತ್ರ ಸಿನೆಮಾ ತಂಡ

ಕನ್ನಡ ಚಿತ್ರರಂಗದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ ನಾಲ್ಕು ತಿಂಗಳು ಕಳೆಯುತ್ತಿವೆ. ಆದರೆ, ಪುನೀತ್ ರಾಜ್‍ಕುಮಾರ್ ತರ ಹೋಲಿಕೆ ಇರುವ ಯುವ ನಟನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಈ ಹಿಂದೆ ಛಾಯಾ ಸಿನಿಮಾದಲ್ಲಿ ನಟಿಸಿದ್ದ ಆನಂದ್ ಆರ್ಯ, ಈಗ ಮತ್ತೆ ಮಾರಕಾಸ್ತ್ರ ಎಂಬ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಈ ಮಾರಕಾಸ್ತ್ರ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪವರ್ ಸ್ಟಾರ್ ಅವರನ್ನು ಸ್ಮರಿಸಿದರು.

ಮಾರಕಾಸ್ತ್ರ ಸಿನೆಮಾ ತಂಡ

ಈ ಹಿಂದೆ ಹಲವಾರು ಕಿರುಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಮೂರ್ತಿ ಸುನಾಮಿ, ಮಾರಕಾಸ್ತ್ರ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ‌. ನಿರ್ದೇಶಕ ಗುರುಮೂರ್ತಿ ಹೇಳುವ ಹಾಗೆ ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ.

ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ ಮಾರಕಾಸ್ತ್ರ ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ ದೇಶದ ರಕ್ಷಣೆಗಾಗಿ ಎಂಬ ಅಡಿಬರಹವನ್ನ ಇಟ್ಟುಕೊಂಡು ಒಂದು ಸಂದೇಶ ಕೊಡೋದಿಕ್ಕೆ ಹೊರಟಿದ್ದಾರೆ ನಿರ್ದೇಶಕರು.

ಆನಂದ್ ಆರ್ಯ ಮಾತನಾಡಿ, ಈ ಸಿನಿಮಾವನ್ನ ಒಂಬತ್ತು ತಿಂಗಳ ಹಿಂದೆ ನಾನು ಒಪ್ಪಿಕೊಂಡಿದ್ದೆ, ನಾನು ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರ ಮಾಡುತ್ತೇನೆ. ಪುನೀತ್ ಸಾರ್ ಕಳೆದುಕೊಂಡಿರೋದು ದೊಡ್ಡ ನಷ್ಟ. ನಾನು ಅಪ್ಪು ಸಾರ್ ಅಭಿಮಾನಿ. ನಾನು ಅವರತರ ಹೋಲಿಕೆ ಇರುವುದರಿಂದ ತುಂಬಾ ಜನ‌ ಕೇಳುತ್ತಾರೆ ಪುನೀತ್​ರಾಜಕುಮಾರ್​ ಅವರನ್ನು ಸ್ಮರಿಸಿದರು. ಆನಂದ್ ಆರ್ಯಗೆ ಜೋಡಿಯಾಗಿ ಬಳ್ಳಾರಿ ಹುಡುಗಿ ಮಾಧುರ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಆನಂದ್ ಆರ್ಯ, ಮಾಧುರ್ಯ ಅಲ್ಲದೇ ಈ ಚಿತ್ರದಲ್ಲಿ ಶಿವಪ್ರಸಾದ್ ಹಾಗೂ ಪುರುಷೋತ್ತಮ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಮಿರಾಕಲ್ ಮಂಜು ಮಾತನಾಡಿ, ನಮ್ಮ ಚಿತ್ರದಲ್ಲಿ ಆರು ಹಾಡುಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಮೂರು ಹಾಡುಗಳನ್ನು ನಮ್ಮ ಚಿತ್ರದ ನಿರ್ಮಾಪಕರಾದ ನಟರಾಜ್ ಹಾಡಿದ್ದಾರೆ ಎಂದರು.

ಈ ಚಿತ್ರವನ್ನ ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಒಂದು ಹಾಡನ್ನ ಕೂಡ ಹಾಡಿದರು. ಈ ಬಗ್ಗೆ ಮಾತನಾಡಿದ ನಟರಾಜ್​ ಅವರು, ನಾನು ತುಮಕೂರು ಜಿಲ್ಲೆಯ ಕೊರಟಗೆರೆಯವನು. ಇದು ನನಗೆ ಮೊದಲ ಸಿನಿಮಾ ಕಾರ್ಯಕ್ರಮ. ನಿರ್ದೇಶಕರು ಹೇಳಿದ ಈ ಕಥೆಯಲ್ಲಿ ನಮ್ಮ ದೇಶ ರಕ್ಷಣೆಯ ಹಲವು ಅಂಶಗಳಿವೆ ಎಂದು ತಿಳಿಸಿದರು.

ಹಾಗಾಗಿ, ನಿರ್ಮಾಣಕ್ಕೆ ಮುಂದಾದೆವು. ಸಿಕ್ಕೀಂ, ದಾರ್ಜಲಿಂಗ್ ಮುಂತಾದ ಕಡೆ ಹೆಚ್ಚಿನ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಆರು ಹಾಡುಗಳ ಪೈಕಿ ಮೂರು ಹಾಡುಗಳನ್ನು ನಾನೇ ಹಾಡಿದ್ದೇನೆ. ಸದ್ಯ ಟೈಟಲ್​ನಿಂದಲೇ ಗಮನ‌ ಸೆಳೆಯುತ್ತಿರುವ ಮಾರಕೆ ಸಿನಿಮಾ ಮಾರ್ಚ್ ತಿಂಗಳಿಂದ ಚಿತ್ರೀಕರಣ ಆರಂಭ ಆಗಲಿದೆ. ಈ ಚಿತ್ರ ಯುವ ನಟ ಆನಂದ್ ಆರ್ಯಗೆ ಒಳ್ಳೆ ಹೆಸರು ತಂದುಕೊಡುತ್ತಾ ಎಂಬುದು ಸಿನಿಮಾ ತೆರೆಗೆ ಬಂದ ಮೇಲೆ ಗೊತ್ತಾಗಲಿದೆ ಎಂದು ಹೇಳಿದರು.

ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ಕಂಗನಾ ರಣಾವತ್​ಗೆ ಸಮನ್ಸ್​ ನೀಡಿದ ಬಟಿಂಡಾ ಕೋರ್ಟ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.