ಕಳೆದ ಒಂದೂವರೆ ತಿಂಗಳಿಂದ ಎಲ್ಲರನ್ನೂ ಕಾಡುತ್ತಾ ವಿಶ್ವದಲ್ಲೆಡೆ ಎಷ್ಟೋ ಜೀವಗಳನ್ನು ಬಲಿ ಪಡೆದಿರುವ ಕೊರೊನಾ ಆರ್ಭಟ ಯಾವಾಗ ತಗ್ಗಲಿದೆಯೋ ಯಾರಿಗೂ ಗೊತ್ತಿಲ್ಲ. ಕೊರೊನಾ ಹಾವಳಿಯಿಂದ ಜನರ ಜೀವನಶೈಲಿಯೇ ಬದಲಾಗಿದೆ. ಜನರು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೆ.
ಇಂತಹ ಸಮಯದಲ್ಲಿ ಸಿನಿಮಾ ತಾರೆಯರು ಒಬ್ಬೊಬ್ಬರು ಒಂದೊಂದು ರೀತಿ ಈ ಲಾಕ್ಡೌನ್ ದಿನಗಳನ್ನು ಕಳೆಯುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ನಲ್ಲಿ ಲೂಸ್ ಮಾದ ಯೋಗಿ ಬಹಳ ದಿನಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಸಾಹಿತ್ಯ ಜೊತೆ ಮಸ್ತ್ ಡ್ಯಾನ್ಸ್ ಮಾಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಮಗುವಿಗೆ ಕೆಲವು ದಿನಗಳ ಹಿಂದಷ್ಟೇ ನಾಮಕರಣ ಮಾಡಿದ್ದ ಯೋಗೀಶ್, ದಯಾಳ್ ಪದ್ಮನಾಭನ್ ಅವರ 'ಒಂಭತ್ತನೇ ದಿಕ್ಕು' ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಆದ ಕಾರಣ ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿರಲಿಲ್ಲ. ಆದರೆ ಈಗ ಲಾಕ್ಡೌನ್ ಇರುವ ಕಾರಣ ಯೋಗೀಶ್ ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಸಾಹಿತ್ಯ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.
ಯೋಗೀಶ್ ಮಾತ್ರವಲ್ಲದೆ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡಾ ಪತ್ನಿ ರಾಗಿಣಿ ಚಂದ್ರನ್ ಜೊತೆ ಇಂಗ್ಲೀಷ್ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಕೂಡಾ ಸಖತ್ ವೈರಲ್ ಆಗಿದೆ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ಪೆಕ್ಟರ್ ವಿಕ್ರಂ' ಚಿತ್ರ ಬಿಡುಗಡೆಯಾಗಬೇಕಿದೆ.