ETV Bharat / sitara

ಲಾಕ್​ಡೌನ್​ನಲ್ಲಿ ಮನರಂಜಿಸಿದ ಅತ್ಯುತ್ತಮ '2020'ರ ವೆಬ್​ಸಿರೀಸ್​, ಸಿನಿಮಾಗಳು..

author img

By

Published : Dec 28, 2020, 9:49 AM IST

ಲಾಕ್‌ಡೌನ್ ಸಮಯದಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಜನರು ಹೆಚ್ಚಾಗಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ನೋಡಿದ್ದಾರೆ. 2020ರಲ್ಲಿ ಹೆಚ್ಚು ಮನರಂಜನೆ ನೀಡಿದ ಚಲನಚಿತ್ರಗಳು ಮತ್ತು ವೆಬ್ ಸಿರೀಸ್​ಗಳ ನೋಟ ಇಲ್ಲಿದೆ..

ಅತ್ಯುತ್ತಮ '2020'ರ ವೆಬ್​ಸಿರೀಸ್​, ಸಿನಿಮಾಗಳು

ನವದೆಹಲಿ : ಕೊರೊನಾ ವೈರಸ್ ಪ್ರಚೋದಿತ ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆ ಜನರು ಮನರಂಜನೆಗಾಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳತ್ತ ಮುಖ ಮಾಡಿದರು.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಕೆಲ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಸಂಚಲನವನ್ನು ಸೃಷ್ಟಿಸಿದವು. 2020ರಲ್ಲಿ ಹೆಚ್ಚು ಮನರಂಜನೆ ನೀಡಿದ ಚಲನಚಿತ್ರಗಳು ಮತ್ತು ವೆಬ್ ಸಿರೀಸ್​ಗಳ ನೋಟ ಇಲ್ಲಿದೆ.

  1. ಮನಿ ಹೀಸ್ಟ್​ (Money Heist):

ಸ್ಪ್ಯಾನಿಷ್ ಡ್ರಾಮಾ ಸರಣಿ ಮನಿ ಹೀಸ್ಟ್​ನ 'ಬೆಲ್ಲಾ ಚ್ಚಾವೋ' ಎಂಬ ಹಾಡು ಲಾಕ್‌ಡೌನ್‌ ವೇಳೆ ಎಲ್ಲರ ಗಮನ ಸೆಳೆದಿತ್ತು. ಮನಿಹೀಸ್ಟ್​ನ 5ನೇ ಕಂತು ಇದಾಗಿದ್ದು, ಅತ್ಯಂತ ಜನಪ್ರಿಯ ಸಿರೀಸ್​ ಎಂಬ ಹೆಗ್ಗಳಿಕೆ ಪಡೆದಿದೆ. ಉರ್ಸುಲಾ ಕಾರ್ಬೆರೊ, ಅಲ್ವಾರೊ ಮೊರ್ಟೆ, ಇಟ್ಜಿಯಾರ್ ಇಟುನೊ ಮತ್ತು ಇತರರು ತಮ್ಮ ನಟನೆಯಿಂದ ಜನ ಮನಗೆದ್ದಿದ್ದಾರೆ.

2. ಪಾತಾಳ್​ ಲೋಕ್​:

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಈ ಸರಣಿಯಲ್ಲಿ ಜೈದೀಪ್ ಅಹ್ಲಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಕಥಾಹಂದರ ಮತ್ತು ಪಾತ್ರಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಣೆಗೊಳಿಸಿದೆ. 'ಪಾತಾಳ್​ ಲೋಕ್' ಕಥೆಯು ಒಬ್ಬ ಪೊಲೀಸ್​ ಅಧಿಕಾರಿಯ ಸುತ್ತ ಸುತ್ತುತ್ತದೆ.

3. ದಿ ಕ್ರೌನ್ ​: ಸೀಸನ್​ 4

ರಾಣಿಯಾಗಿ ಒಲಿವಿಯಾ ಕೋಲ್ಮನ್, ಮಾರ್ಗರೇಟ್ ಥ್ಯಾಚರ್ ಪಾತ್ರದಲ್ಲಿ ಗಿಲಿಯನ್ ಆಂಡರ್ಸನ್ ಮತ್ತು ರಾಜಕುಮಾರಿ ಡಯಾನಾ ಪಾತ್ರದಲ್ಲಿ ಎಲಿಜಬೆತ್ ಡೆಬಿಕಿ ಅವರು ನಟಿಸಿದ ದಿ ಕ್ರೌನ್ ಸಿರೀಸ್​ ಜನಮನ್ನಣೆ ಗಳಿಸಿದೆ. ಸೀಸನ್-4 ರಾಯಲ್ ರೀತಿಯಲ್ಲಿ ಪ್ರದರ್ಶಿಸಿದ್ದಲ್ಲದೆ ಲಾಕ್​ಡೌನ್​ ವೇಳೆ ಅನೇಕರು ವೀಕ್ಷಿಸಿದ್ದರು.

4. ಟೈಗರ್​ ಕಿಂಗ್ ​: ಮರ್ಡರ್​, ಮ್ಯಾಡ್​ನೆಸ್​ ಅಂಡ್​ ಮೆಹೆಮ್​ :

ಟೈಗರ್ ಕಿಂಗ್ ಪ್ರಮುಖ ಪಾತ್ರಗಳಲ್ಲಿ ಜಾನ್ ರೀಂಕೆ, ಕೆಲ್ಸಿ ಸಫೆರಿ, ಜಾನ್ ಫಿನ್ಲೆ ನಟಿಸಿದ್ದಾರೆ. ಇದು ಬೆಕ್ಕಿನ ಮಾಲೀಕರಾದ ಜೋಸೆಫ್ ಮಾಲ್ಡೊನಾಡೊ-ಪ್ಯಾಸೇಜ್, ಕರೋಲ್ ಬಾಸ್ಕಿನ್, ಡಾಕ್ ಆಂಟ್ಲೆ ಅವರ ಜೀವನದ ಕಥೆ ಒಳಗೊಂಡಿದೆ. ಏಳು ಕಂತುಗಳ ಡಾಕ್ಯುಮೆಂಟ್-ಸರಣಿಯು ಪ್ರೇಕ್ಷಕರನ್ನು ವಿಚಿತ್ರ ಜಗತ್ತಿನಲ್ಲಿ ಕರೆದೊಯ್ಯುತ್ತದೆ. ಸಿರೀಸ್​ ಅಂತ್ಯದ ವೇಳೆಗೆ ಕೊಲೆ, ಸ್ಫೋಟ ಹೀಗೆ ಅನೇಕ ಸಸ್ಪೆನ್ಸ್​ಗಳು ವೀಕ್ಷಕರನ್ನು ಹಿಡಿದಿಡುತ್ತದೆ.

5. ಬುಲ್​ಬುಲ್​:

ಬುಲ್​ಬುಲ್​ ಚಿತ್ರದಲ್ಲಿ ಟ್ರಿಪ್ಟಿ ಡಿಮ್ರಿ ಮುಖ್ಯ ಪಾತ್ರದಲ್ಲಿದ್ದಾರೆ. ಅವಿನಾಶ್ ತಿವಾರಿ, ಪಾವೊಲಿ ಡ್ಯಾಮ್​, ರಾಹುಲ್ ಬೋಸ್ ಮತ್ತು ಪರಂಬ್ರತ ಚಟ್ಟೋಪಾಧ್ಯಾಯ ಇತರ ನಟರು ಅಭಿನಯಿಸಿದ್ದಾರೆ. ಇನ್ನು ಟ್ರಿಪ್ಟಿ ಡಿಮ್ರಿ ನಟನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1880ರ ಬಂಗಾಳ ಅಧ್ಯಕ್ಷತೆಯ ಹಿನ್ನೆಲೆಯಲ್ಲಿ ಸಿದ್ಧಗೊಂಡಿರುವ ನೆಟ್‌ಫ್ಲಿಕ್ಸ್​ನಲ್ಲಿ ಪ್ರಸಾರಗೊಂಡಿದೆ.

6. ಸ್ಪೆಷಲ್​ ಓಪಿ:

ಕೇ ಕೇ ಮೆನನ್, ಕರಣ್ ಟ್ಯಾಕರ್, ವಿನಯ್ ಪಾಠಕ್, ದಿವ್ಯಾ ದತ್ತಾ, ಮೆಹರ್ ವಿಜ್ ಇತರರು ನಟಿಸಿರುವ ಸ್ಪೆಷಲ್ ಓಪಿ ಸಿರೀಸ್​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಎಲ್ಲಾ ಪ್ರಮುಖ ಭಯೋತ್ಪಾದಕ ದಾಳಿಯ ಹಿಂದೆ ಒಂದೇ ಒಂದು ಅಸ್ತಿತ್ವವಿದೆ ಎಂದು ನಂಬುವ 'ರಾ' ಏಜೆಂಟನಾಗಿರುವ ಮೆನನ್ ಅವರನ್ನು ಹಿಮ್ಮತ್ ಸಿಂಗ್ ಎಂದು ಅನುಸರಿಸಿ ಈ ಸಿರೀಸ್​ ನಿರ್ಮಾಣ ಮಾಡಲಾಗಿದೆ.

ಲಾಕ್​ಡೌನ್​ ಸಂದರ್ಭದಲ್ಲಿ ಒಟಿಟಿ ಮೂಲಕ ಸದ್ದು ಮಾಡಿದ ಚಿತ್ರಗಳು:

  1. ತಾನ್ಹಾಜಿ: ದಿ ಅನ್​ಸಂಗ್​ ವಾರಿಯರ್​:

ಛತ್ರಪತಿ ಶಿವಾಜಿ ಮಹಾರಾಜರ ಆಪ್ತ ಸಹಾಯಕ ಮತ್ತು ಮಿಲಿಟರಿ ನಾಯಕರಲ್ಲಿ ಒಬ್ಬರಾದ ತಾನ್ಹಾಜಿ ಪಾತ್ರಕ್ಕೆ ಬಾಲಿವುಡ್​ ನಟ ಅಜಯ್ ದೇವ್‌ಗನ್ ಬಣ್ಣಹಚ್ಚಿದ್ದರು. ತಾನ್ಹಾಜಿ ಸಿನಿಮಾವು ಮರಾಠಾ ಯೋಧರ ಜೀವನವನ್ನು ಆಧರಿಸಿದೆ. ಇದು ಪ್ರಸಿದ್ಧ ಸಿಂಹಗಡ್ ಕದನದ ಮೇಲೆ ತಯಾರಾದ ಸಿನಿಮಾ.

2. ಗುಲಾಬೋ ಸಿತಾಬೊ:

ಲಖನೌದಲ್ಲಿ ತಯಾರಾದ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಚಿತ್ರವು ಹಾಸ್ಯ ಸಿನಿಮಾವಾಗಿದೆ. ಈ ಸಿನಿಮಾವು ಜನಮೆಚ್ಚುಗೆ ಪಡೆದಿದ್ದು, ಲಾಕ್​ಡೌನ್​ ಸಂದರ್ಭದಲ್ಲಿ ಒಟಿಟಿ ಮೂಲಕ ಹೆಚ್ಚಯು ಜನಪ್ರಿಯತೆ ಪಡೆದ ಚಲನಚಿತ್ರ ಇದು.

3. ಗುಂಜನ್​ ಸಕ್ಸೇನಾ : ದಿ ಕಾರ್ಗಿಲ್​ ಗರ್ಲ್​:

ಭಾರತೀಯ ವಾಯುಪಡೆಯ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಚಿತ್ರ. ಭಾರತದ ಮೊದಲ ಮಹಿಳಾ ವಾಯುಪಡೆಯ ಪೈಲಟ್‌ಗಳಲ್ಲಿ ಒಬ್ಬರಾದ ಗುಂಜನ್​ ಸಕ್ಸೇನಾ ಪಾತ್ರಕ್ಕೆ ಜಾನ್ವಿ ಕಪೂರ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

4. ದಿಲ್​ ಬೆಚಾರ:

2014ರಲ್ಲಿ ತೆರೆಕಂಡ ರೊಮ್ಯಾಂಟಿಕ್ ನಾಟಕ 'ದಿ ಫಾಲ್ಟ್​ ಇನ್ ಅವರ್ ಸ್ಟಾರ್ಸ್'ರ ರಿಮೇಕ್​ 'ದಿಲ್ ಬೆಚಾರ' ಸಿನಿಮಾ. ಇದು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ. ಇನ್ನು ಸುಶಾಂತ್​ ಸಾವಿಗೆ ಗೌರವ ಸಲ್ಲಿಸುವ ಸಲುವಾಗಿ ಡಿಸ್ನಿ+ಹಾಟ್​ಸ್ಟಾರ್​ ಚಂದಾದಾರಿಕೆ ಇಲ್ಲದೆ ಚಿತ್ರ ವೀಕ್ಷಿಸಲು ಅವಕಾಶ ನೀಡಿತ್ತು. ಇನ್ನು ಈ ಸಿನಿಮಾ ಅದೆಷ್ಟೋ ಜನರ ಮನಗೆದ್ದಿದೆ. ಚಿತ್ರದಲ್ಲಿ ಸಂಜನಾ ಸಂಘಿ ಅವರು ಸುಶಾಂತ್​ ಜೊತೆ ಅಭಿನಯಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.