ರಾಕಿಂಗ್ ಸ್ಟಾರ್ ಯಶ್ ಸದಾ ಒಂದಿಲ್ಲೊಂದು ರೀತಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಲೇ ಇರುತ್ತಾರೆ. ಕೆಜಿಎಫ್ ಸಿನಿಮಾ ಚಿತ್ರೀಕರಣ ಆರಂಭವಾದ ದಿನದಿಂದಲೇ ನಟ ಯಶ್ ಹೇರ್ ಸ್ಟೈಲ್ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಉದ್ದದ ಗಡ್ಡ, ಕೂದಲು ಬಿಟ್ಟ ರಾಕಿ ಭಾಯ್ ಗೆಟಪ್ಗೆ ಉತ್ತರ ಭಾರತದ ಅಭಿಮಾನಿಗಳು ಸಹ ಮನಸೋತಿದ್ದರು.
ಕೆಜಿಎಫ್- ಚಾಪ್ಟರ್ 2ಗಾಗಿ ಯಶ್ ಇಂದಿಗೂ ಅದೇ ಕೇಶ ವಿನ್ಯಾಸ ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ಯಶ್, ಜನಪ್ರಿಯ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಸಲೂನ್ಗೆ ತೆರಳಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.
ಈ ಬಗ್ಗೆ ಒಂದು ವಿಡಿಯೋವನ್ನು ಆಲಿಮ್ ಹಕೀಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾವಿರಾರು ಅಭಿಮಾನಿಗಳು ಕಮೆಂಟ್ಗಳ ಮೂಲಕ ಈ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
- " class="align-text-top noRightClick twitterSection" data="
">
ಆಲಿಮ್ ಹಕೀಮ್ ಬಾಲಿವುಡ್ನಲ್ಲಿ ಬಲು ಫೇಮಸ್ ಕೇಶ ವಿನ್ಯಾಸಗಾರ. ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆಲ್ಲ ಆಲಿಮ್ ಹೇರ್ ಸ್ಟೈಲ್ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಸಂಜಯ್ ದತ್, ಹೃತಿಕ್ ರೋಷನ್, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಸೆಲೆಬ್ರಿಟಿಗಳಿಗೆ ಗುಡ್ ಲುಕ್ ನೀಡುವ ಹೇರ್ ಸ್ಟೈಲ್ ನೀಡಿದ ಖ್ಯಾತಿ ಆಲಿಮ್ ಹಕೀಮ್ಗೆ ಸಲ್ಲುತ್ತದೆ.